ನವೀನ್ ದೇಹ ಸೋಮವಾರ ಆಗಮನ: ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಶರೀರ ದಾನ -ನವೀನ್ ತಂದೆ ಶೇಖರಗೌಡ
ರಷ್ಯಾ- ಉಕ್ರೇನ್ ಯುದ್ಧದ ವೇಳೆ ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಮೃತದೇಹ ಸೋಮವಾರ (March 21) ಮುಂಜಾನೆ 3.30ಕ್ಕೆ ಆಗಮಿಸಲಿದೆ. ಮಗನ ಪಾರ್ಥಿವ ಶರೀರ ಬರುವ ವಿಚಾರ ಕೇಳಿದ ನಂತರ ಸ್ವಲ್ಪ ನಿರಾಶೆ ದೂರವಾಗಿದೆ. ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಲಾಗಿದೆ - ನವೀನ್ ತಂದೆ ಶೇಖರಗೌಡ
ಬೆಂಗಳೂರು: ರಷ್ಯಾ-ಉಕ್ರೇನ್ ಯುದ್ಧದ ವೇಳೆ ಉಕ್ರೇನ್‌ನಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತದೇಹ ಸೋಮವಾರ ಮುಂಜಾನೆ 3.30ಕ್ಕೆ ಆಗಮಿಸಲಿದೆ. ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ನವೀನ್ ಮೃತದೇಹ ಆಗಮಿಸಲಿದೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಕ್ರೇನ್ ನಲ್ಲಿ ಸಾವನ್ನಪ್ಪಿದ ನವೀನ್ ಪಾರ್ಥಿವ ಶರೀರ ತವರಿಗೆ ತರಲಾಗುತ್ತದೆ. ಸೋಮವಾರ (March 21) ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಏರ್ ಪೋರ್ಟ್ ಗೆ ಬರಲಿದೆ. ಅಲ್ಲಿಂದ ಪಾರ್ಥಿವ ಶರೀರವನ್ನ ಅಂದೇ ಹಾವೇರಿಗೆ ರವಾನಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದರು.
#UPDATE | Karnataka CM Basavaraj Bommai corrects his previous tweet & clarifies that the body of Naveen Shekarappa Gyanagoudarm, a final year medical student of Kharkiv Medical University who died in a shelling attack in #Ukraine, will be brought to Bengaluru airport on March 21. pic.twitter.com/EjLxRMaAJL
— ANI (@ANI) March 18, 2022
ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಮಗನ ಪಾರ್ಥಿವ ಶರೀರ ದಾನ: ನವೀನ್ ತಂದೆ ಶೇಖರಗೌಡ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಖಾರ್ಕೀವ್ ನಲ್ಲಿ ನಾಲ್ಕನೆ ವರ್ಷದ ಎಂಬಿಬಿಎಸ್ ಓದುತ್ತಿದ್ದ. ಮಗನ ಪಾರ್ಥಿವ ಶರೀರ ಬರುವುದು ತಡವಾದಾಗ ನಿರಾಶೆ ಆಗಿತ್ತು. ಮಗನ ಪಾರ್ಥಿವ ಶರೀರ ಬರುವ ವಿಚಾರ ಕೇಳಿದ ನಂತರ ನಿರಾಶೆ ದೂರವಾಗಿದೆ. ದಾವಣಗೆರೆಯ ಎಸ್ಎಸ್ ಮೆಡಿಕಲ್ ಕಾಲೇಜಿಗೆ ಮಗನ ಮೃತದೇಹ ನೀಡಲು ನಿರ್ಧರಿಸಲಾಗಿದೆ. ಸೋಮವಾರ ಬೆಳಗ್ಗೆ (March 21) ಚಳಗೇರಿ ಗ್ರಾಮದ ಮನೆಗೆ ಮೃತದೇಹ ಬರುವ ಮಾಹಿತಿ ದೊರೆತಿದೆ.
21 ದಿನಗಳಿಗೆ ಮಗನ ಪಾರ್ಥಿವ ಶರೀರ ಬರಲಿದೆ. ಮಗನ ಪಾರ್ಥಿವ ಶರೀರ ಮನೆಗೆ ಬರುವಂತೆ ಪ್ರಯತ್ನಿಸಿದ ಎಲ್ಲರಿಗೂ ಧನ್ಯವಾದಗಳು. ಮಗನ ಪಾರ್ಥಿವ ಶರೀರ ಮನೆಗೆ ಬಂದ ನಂತರ, ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಮಗನ ಪಾರ್ಥಿವ ಶರೀರ ಡೊನೇಟ್ ಮಾಡಲಾಗುವುದು. ಮೆಡಿಕಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಆಗಲೆಂದು ಮಗನ ಮೃತದೇಹ ಡೊನೇಟ್ ಮಾಡಲು ನಿರ್ಧರಿಸಲಾಗಿದೆ ಎಂದು ನವೀನ್ ತಂದೆ ಶೇಖರಗೌಡ ಟಿವಿ9ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಅತ್ತ ರಷ್ಯಾ ಮತ್ತು ಉಕ್ರೇನ್ ಯುದ್ಧಭೂಮಿಯಿಂದ ಶಿವರಾತ್ರಿಯ ದಿನ ಕರ್ನಾಟಕಕ್ಕೆ ಬರಸಿಡಿಲಿನಂತೆ ಕೆಟ್ಟ ಸುದ್ದಿಯೊಂದು ಅಪ್ಪಳಿಸಿತ್ತು. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿ ವಾಸವಿದ್ದ ಹಾವೇರಿ ಜಿಲ್ಲೆ ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದ.(Death of Haveri medical student Naveen janagoudar). ಉಕ್ರೇನ್ನ ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿತ್ತು.
ಇದನ್ನೂ ಓದಿ: ನವೀನ್ ಶೇ 97 ಅಂಕ ಗಳಿಸಿದ್ದ, ಆದರೂ ಸರ್ಕಾರಿ ಮೆಡಿಕಲ್ ಸೀಟ್ ಸಿಗಲಿಲ್ಲ! ಅವನ ಸಾವಿಗೆ ಯಾರು ಹೊಣೆ? -ಸೋದರ ಮಾವ ಕಿಡಿ
Published On - 6:23 pm, Fri, 18 March 22