ನವೀನ್ ಶೇ 97 ಅಂಕ ಗಳಿಸಿದ್ದ, ಆದರೂ ಸರ್ಕಾರಿ ಮೆಡಿಕಲ್ ಸೀಟ್ ಸಿಗಲಿಲ್ಲ! ಅವನ ಸಾವಿಗೆ ಯಾರು ಹೊಣೆ? -ಸೋದರ ಮಾವ ಕಿಡಿ
Haveri Naveen janagoudar: ನವೀನ್ ನೆನೆದು ಭಾವುಕರಾದ ಸೋದರ ಮಾವ ರಾಜಶೇಖರ ಗೌಡ ಅವರು ನನ್ನ ಅಳಿಯ ಪಿಯುಸಿಯಲ್ಲಿ ಶೇಖಡಾ 97 ರಷ್ಟು ಅಂಕ ಗಳಿಸಿದ್ದ (merit student). ಆದರೂ ಸರ್ಕಾರಿ ಮೆಡಿಕಲ್ ಸೀಟ್ ಸಿಗಲಿಲ್ಲ. ಇಷ್ಟು ಡೊನೇಷನ್ ಕೊಟ್ಟು ಓದಿಸಲು ಇಲ್ಲಿ ಆಗಲಿಲ್ಲ ಎಂದಿದ್ದಾರೆ. ಇದು ಇಲ್ಲಿನ ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿಗೆ ಹಿಡಿದ ಕನ್ನಡಿಯೂ ಆಗಿದೆ.
ಹಾವೇರಿ: ಅತ್ತ ರಷ್ಯಾ ಮತ್ತು ಉಕ್ರೇನ್ ಯುದ್ಧಭೂಮಿಯಿಂದ (Russia Ukraine War) ಶಿವರಾತ್ರಿಯ ದಿನ ಕರ್ನಾಟಕಕ್ಕೆ ಬರಸಿಡಿಲಿನಂತೆ ಕೆಟ್ಟ ಸುದ್ದಿಯೊಂದು ಅಪ್ಪಳಿಸಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿ ವಾಸವಿದ್ದ ಹಾವೇರಿ ಜಿಲ್ಲೆ ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿದ್ದಾನೆ (Death of Haveri medical student Naveen janagoudar). ಉಕ್ರೇನ್ನ ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿದೆ. ನವೀನ್ ಸಾವಿಗೆ ಯಾರು ಹೊಣೆ ಎಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ವಿಷಾದದ ದನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆ ಧಾಟಿಯಲ್ಲಿ ನವೀನನ ಊರಾದ ಹಾವೇರಿ ಜಿಲ್ಲೆಯ ಚಳಗೇರಿ ಕಡೆಯಿಂದಲೂ ಜನ, ಸಂಬಂಧಿಕರೂ ಪ್ರಶ್ನಿಸತೊಡಗಿದ್ದಾರೆ.
ಚಳಗೇರಿ ನವೀನನ ಸಾವಿನಿಂದ ಇಡಿ ಗ್ರಾಮದಲ್ಲಿ ಸೂತಕದ ವಾತಾವರಣ. ನವೀನ್ ಸಾವಿನ ಸುದ್ದಿ ತಿಳಿದು ನೂರಾರು ಜನ ಚಳಗೇರೆ ಮನೆ ಮುಂದೆ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ನವೀನ್ ನೆನೆದು ಭಾವುಕರಾದ ಸೋದರ ಮಾವ ರಾಜಶೇಖರ ಗೌಡ ಅವರು ನನ್ನ ಅಳಿಯ ಪಿಯುಸಿಯಲ್ಲಿ ಶೇಖಡಾ 97 ರಷ್ಟು ಅಂಕ ಗಳಿಸಿದ್ದ (merit student). ಆದರೂ ಸರ್ಕಾರಿ ಮೆಡಿಕಲ್ ಸೀಟ್ ಸಿಗಲಿಲ್ಲ. ಇಷ್ಟು ಡೊನೇಷನ್ ಕೊಟ್ಟು ಓದಿಸಲು ಇಲ್ಲಿ ಆಗಲ್ಲ. ಹೀಗಾಗಿ ಸ್ನೇಹಿತರಿಂದ ಮಾಹಿತಿ ಪಡೆದು, ಉಕ್ರೇನ್ ಗೆ ಹೋಗಿದ್ದ ಎಂದು ಮಾಹಿತಿ ನೀಡಿದ್ದಾರೆ. ಇದು ಇಲ್ಲಿನ ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿಗೆ ಹಿಡಿದ ಕನ್ನಡಿಯೂ ಆಗಿದೆ.
ನಿತ್ಯ ಪೋನ್ ಮಾಡುತ್ತಿದ್ದ. ಬೆಳಗ್ಗೆ ಕೂಡಾ ಫೋನ್ ಮಾಡಿದ್ದ. ಆದ್ರೆ ನಂತರ ಬಂದ ಫೋನ್ ಆತನ ಸಾವಿನ ಸುದ್ದಿ ತಂದಿತ್ತು. ನನ್ನ ಅಳಿಯ ಬುದ್ಧಿವಂತ, ಎನೂ ಆಗಲ್ಲ ಎಂದು ನಮಗೆ ಧೈರ್ಯ ತುಂಬುತ್ತಿದ್ದ. ಆದ್ರೆ ಹೀಗಾಗಿದೆ. ಎನು ಮಾಡುವುದು? ನನ್ನ ಅಕ್ಕನ ಮಗ ನವೀನ್. ಗ್ರಾಮಕ್ಕೆ ಬಂದರ ನನ್ನ ಬಳಿ ಬಾರದೇ ಇರುತ್ತಿರಲಿಲ್ಲ ಎಂದು ಟಿವಿ9 ಪ್ರತಿನಿಧಿ ಜೊತೆ ಮಾತನಾಡುತ್ತಾ ನವೀನ್ ಸಹೋದರ ಮಾವನ ವಿಷಾದದ ದನಿಯಲ್ಲಿ ಹೇಳಿದ್ದಾರೆ.
ಸರಕಾರದ ಜಾತಿ ಮತ್ತು ಡೊನೇಶನ್ ವ್ಯವಸ್ಥೆಗೆ ಮಗನ ಬಲಿ: ಇನ್ನು ಮಗನನ್ನು ಕಳಕೊಂಡ ನವೀನನ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಸರಕಾರದ ಜಾತಿ ಮತ್ತು ಡೊನೇಶನ್ ವ್ಯವಸ್ಥೆಯಿಂದಲೇ ತಮ್ಮ ಮಗನ ಬಲಿಯಾಗಿದೆ ಎಂದು ಟಿವಿ9 ಜೊತೆ ಮಾತನಾಡಿತ್ತಾ ಸರಕಾರದ ವೈಫಲ್ಯದ ಬಗ್ಗೆ ನವೀನ್ ತಂದೆ ಆಕ್ರೋಶ ವ್ಯಕ್ತಪಡಿಸಿದರು. ಇಂದು ಬೆಳಗ್ಗೆ ಮಾತನಾಡಿ ಎಲ್ಲರೂ ಕ್ಷೇಮದಿಂದ ಇರೋದಾಗಿ ಹೇಳಿದ್ದ ನವೀನ್. ಬಂಕರ್ ನಿಂದ ಬೆಳಗ್ಗೆ ತಿಂಡಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ಆಗಬಾರದ್ದು ಆಗಿದೆ. ಮಗನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವಂತೆ ನವೀನ್ ತಂದೆ ಶೇಖರಪ್ಪ ಗ್ಯಾನ್ ಗೌಡರ್ ಇದೇ ವೇಳೆ ಸರ್ಆರವನ್ನು ಕೋರಿದ್ದಾರೆ.
625ಕ್ಕೆ 606 ಅಂಕ – ನವೀನ ಶಾಲೆಗೆ ಟಾಪರ್ ಆಗಿದ್ದವ: ಕುಚಿಕು ಗೆಳೆಯನ ಮಾತು ಇನ್ನು ನವೀನನ ಮೈಸೂರು ಸ್ನೇಹಿತ ಟಿವಿ9 ಜೊತೆ ಮಾತನಾಡುತ್ತಾ SSLCಯಲ್ಲಿ ನವೀನ್ ಶಾಲೆಗೆ ಟಾಪರ್ ಆಗಿದ್ದ – 625ಕ್ಕೆ 606 ಅಂಕಗಳನ್ನು ನವೀನ್ ಪಡೆದಿದ್ದ – ನಂಜನಗೂಡಿನಲ್ಲಿ 6 ರಿಂದ ಪಿಯುವರೆಗೆ ಓದಿದ್ದ ಎಂದು ಹೇಳಿದ್ದಾರೆ.
Russia-Ukraine War Day 6: SSLCಯಲ್ಲಿ ಶಾಲೆಗೆ ಟಾಪರ್ ಆಗಿದ್ದ ನವೀನ್!
Also Read: ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿದೆ, ಇದಕ್ಕೆ ಹೊಣೆ ಯಾರು? ಕೇಂದ್ರದ ವಿರುದ್ಧ ಡಿಕೆ ಶಿವಕುಮಾರ್ ಗರಂ
Also Read: ನನ್ನದೇ ಜಿಲ್ಲೆಯ ಕಂದನನ್ನು ಕಳೆದುಕೊಂಡೆ, ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ -ಸಿಎಂ ಬೊಮ್ಮಾಯಿ ಪ್ರಾಥಮಿಕ ಮಾಹಿತಿ
Published On - 7:36 pm, Tue, 1 March 22