ಪ್ರತಿಭೆ ಇದ್ದರೂ ನನ್ನ ಮಗನಿಗೆ ಇಲ್ಲಿ ಅವಕಾಶ ಸಿಗಲಿಲ್ಲ; ಮೃತ ನವೀನ್ ನೆನೆದು ತಂದೆ ಕಣ್ಣೀರು

ಇಲ್ಲಿನ ರಾಜಕೀಯ, ಮೀಸಲಾತಿ, ಶಿಕ್ಷಣ ಪದ್ಧತಿ ಸರಿಯಿಲ್ಲ. ಪ್ರತಿಭೆ ಇದ್ದರೂ ನನ್ನ ಮಗನಿಗೆ ಇಲ್ಲಿ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನ ಮಗ ಉಕ್ರೇನ್​ಗೆ ಹೋಗಿ ಓದಬೇಕಾಯಿತು. ನನ್ನ ಮಗ ಜೀವಂತವಾಗಿ ಭಾರತಕ್ಕೆ ವಾಪಸಾಗಲೇ ಇಲ್ಲ.

ಪ್ರತಿಭೆ ಇದ್ದರೂ ನನ್ನ ಮಗನಿಗೆ ಇಲ್ಲಿ ಅವಕಾಶ ಸಿಗಲಿಲ್ಲ; ಮೃತ ನವೀನ್ ನೆನೆದು ತಂದೆ ಕಣ್ಣೀರು
ನವೀನ್ ನೆನೆದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
Follow us
TV9 Web
| Updated By: sandhya thejappa

Updated on:Mar 02, 2022 | 10:13 AM

ಹಾವೇರಿ: ಉಕ್ರೇನ್ (Ukrain) ಮತ್ತು ರಷ್ಯಾ (Russia) ನಡುವೆ ಯುದ್ಧ ಮುಂದುವರಿದಿದೆ. ಭೀಕರ ಸಮರದಲ್ಲಿ ರಾಜ್ಯದ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ನಿನ್ನೆ ಸಾವನ್ನಪ್ಪಿದ್ದಾನೆ. ಮೃತ ನವೀನ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದವನು. ರಷ್ಯಾ ದಾಳಿಗೆ ನವೀನ್ ಅಸುನೀಗಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಮಗನನ್ನು ಕಳೆದುಕೊಂಡ ನವೀನ್ ತಂದೆ ಶೇಖರ್​ ಗೌಡ ಮಾತನಾಡಿ, ‘ಜೀವಂತವಾಗಿ ನನ್ನ ಮಗ ದೇಶಕ್ಕೆ ವಾಪಸಾಗಲಿಲ್ಲ’ ಅಂತ ಕಣ್ಣೀರು ಹಾಕಿದ್ದಾರೆ.

ಇಲ್ಲಿನ ರಾಜಕೀಯ, ಮೀಸಲಾತಿ, ಶಿಕ್ಷಣ ಪದ್ಧತಿ ಸರಿಯಿಲ್ಲ. ಪ್ರತಿಭೆ ಇದ್ದರೂ ನನ್ನ ಮಗನಿಗೆ ಇಲ್ಲಿ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನ ಮಗ ಉಕ್ರೇನ್​ಗೆ ಹೋಗಿ ಓದಬೇಕಾಯಿತು. ನನ್ನ ಮಗ ಜೀವಂತವಾಗಿ ಭಾರತಕ್ಕೆ ವಾಪಸಾಗಲೇ ಇಲ್ಲ. ಇನ್ನುಳಿದ ಮಕ್ಕಳನ್ನಾದರೂ ಸುರಕ್ಷಿತವಾಗಿ ದೇಶಕ್ಕೆ ಕರೆತನ್ನಿ ಅಂತ ಪ್ರಧಾನಿ ಮೋದಿಗೆ ಮೃತ ನವೀನ್ ತಂದೆ ಮನವಿ ಮಾಡಿದರು.

ಯುದ್ಧ ಆಗುವುದಿಲ್ಲ, ಧೈರ್ಯವಾಗಿ ಇರುವಂತೆ ಹೇಳಿದ್ದರಂತೆ. ನವೀನ್ ಓದುತ್ತಿದ್ದ ಕಾಲೇಜಿನವರು ಮಾಹಿತಿ ನೀಡಿದ ಹಿನ್ನೆಲೆ ಯುದ್ಧ ಆಗಲ್ಲವೆಂಬ ವಿಶ್ವಾಸದಲ್ಲಿದ್ದ ಎಂದು ತಂದೆ ಶೇಖರ್​ ಗೌಡ ತಿಳಿಸಿದರು.

ಇನ್ನು ಸಹೋದರ ಹರ್ಷ ನವೀನ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನವೀನ್ ಸ್ನೇಹಿತರು ಜೀವಂತವಾಗಿ ದೇಶಕ್ಕೆ ಬರುತ್ತಿದ್ದಾರೆ. ಆದರೆ ನಾವು ನನ್ನ ತಮ್ಮನ ಸಾವಿನ ಸುದ್ದಿ ಕೇಳುತ್ತಿದ್ದೇವೆ. ನವೀನ್ ಮೃತದೇಹವನ್ನು ಭಾರತಕ್ಕೆ ವಾಪಸ್ ತರಬೇಕು. ಮೃತದೇಹ ಭಾರತಕ್ಕೆ ತರುತ್ತೇವೆಂದು ಯಾರೂ ಖಚಿತಪಡಿಸುತ್ತಿಲ್ಲ ಅಂತ ಕಣ್ಣೀರು ಹಾಕಿದರು. ನನಗಿಂತ ನಾಲ್ಕು ವರ್ಷ ಚಿಕ್ಕವನು. ಪ್ರತಿವರ್ಷ ರಜೆಗೆ ಬರುತ್ತಿದ್ದ, ಸಂಬಂಧಿಕರ ಮನೆಗೆ ಹೋಗುತ್ತಿದ್ದ. ನಂಜನಗೂಡಿನಲ್ಲಿ ಸಹೋದರ ಅಭ್ಯಾಸ ಮಾಡಿದ್ದ ಎಂದರು.

ದರ್ಶನಕ್ಕೆ ಕಾಯುತ್ತಿರುವ ಗ್ರಾಮಸ್ಥರು: ನವೀನ್ ಮೃತ ದೇಹ ಅಂತಿಮ ದರ್ಶನಕ್ಕೆ ಗ್ರಾಮಸ್ಥರು ಕಾಯುತ್ತಿದ್ದಾರೆ. ಹೇಗಾದ್ರೂ ಮಾಡಿ ನವೀನ್​ನ ಪಾರ್ಥಿವ ಶರೀರ ತವರೂರಿಗೆ ತರಲು ಚಳಗೇರಿ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. 2 ತಿಂಗಳ ಹಿಂದಷ್ಟೆ ನವೀನ್ ಗ್ರಾಮಕ್ಕೆ ಬಂದಿದ್ದ ಅಂತ ಟಿವಿ9 ಜೊತೆ ಗ್ರಾಮಸ್ಥರು ನೆನಪು ಹಂಚಿಕೊಂಡಿದ್ದಾರೆ.

ನವೀನ್ ಕಾಲೇಜಿಗೆ ಟಾಪರ್: ನವೀನ್ ಉಕ್ರೇನ್ ದೇಶದಲ್ಲಿ ಟಾಪ್ ಯೂನಿವರ್ಸಿಟಿಯ ನ್ಯಾಷನಲ್ ಮೆಡಿಕಲ್ ಕಾಲೇಜಿಗೆ ಟಾಪರ್. ವೈದ್ಯನಾಗುವ ಆಸೆ ಇಟ್ಟುಕೊಂಡಿದ್ದ. ನನ್ನ ಮಗನಿಗೂ ಆತನೇ ಪ್ರೇರಣೆ ಅಂತ ನವೀನ್ ಸ್ನೇಹಿತ ಅಮಿತ್ ತಂದೆ ವೆಂಕಟೇಶ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಪುತ್ರ ಅಮಿತ್ ‌ನಡೆದುಕೊಂಡು ಗಡಿಯತ್ತ ಬರುತ್ತಿದ್ದಾರೆ.‌ಎನಾಗುತ್ತೇ ಗೊತ್ತಿಲ್ಲ. ಬಂದರೆ ಸಾಕು. ನವೀನ್ ಸಹೋದರನಿಗೆ ಒಳ್ಳೆಯ ಉದ್ಯೋಗ ನೀಡಿ. ನವೀನ್ ಕುಟುಂಬ ಸಂಕಷ್ಟದಲ್ಲಿದೆ. ಆತನಿಗೆ ಕೇಂದ್ರ ಸರ್ಕಾರ ಉದ್ಯೋಗ ನೀಡಲಿ ಅಂತ ಒತ್ತಾಯಿಸಿದ್ದಾರೆ.

ಇದನ್ನೂ ಓದಿ

‘ನಾನು ಪ್ಯಾನ್​ ಇಂಡಿಯಾ ನಟಿ ಆಗಬೇಕು’; ರಶ್ಮಿಕಾ ಮಂದಣ್ಣ ಹೀಗೆ ಹೇಳಲು ಇದೆ ಒಂದು ಮುಖ್ಯ ಕಾರಣ

Best Gaming Smartphone: ಗೇಮಿಂಗ್ ಪ್ರಿಯರಿಗಾಗಿ 15000 ರೂ. ಒಳಗೆ ಸಿಗುತ್ತಿದೆ ಈ ಸ್ಮಾರ್ಟ್​ಫೋನ್​ಗಳು

Published On - 9:15 am, Wed, 2 March 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್