ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿದೆ, ಇದಕ್ಕೆ ಹೊಣೆ ಯಾರು? ಕೇಂದ್ರದ ವಿರುದ್ಧ ಡಿಕೆ ಶಿವಕುಮಾರ್​ ಗರಂ

Haveri medical student Naveen janagoudar: ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿದ್ದಾನೆ. ಈ ಸುದ್ದಿ ನಾಡಿಗೆ ಶಿವರಾತ್ರಿಯ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ. ವಿದ್ಯಾರ್ಥಿ ನವೀನನ ಸಾವಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕಂಬನಿ ಮಿಡಿದಿದ್ದಾರೆ

ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿದೆ, ಇದಕ್ಕೆ ಹೊಣೆ ಯಾರು? ಕೇಂದ್ರದ ವಿರುದ್ಧ ಡಿಕೆ ಶಿವಕುಮಾರ್​ ಗರಂ
ಡಿಕೆ ಶಿವಕುಮಾರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 01, 2022 | 6:55 PM

ರಷ್ಯಾ ಮತ್ತು ಉಕ್ರೇನ್ ಪರಸ್ಪರ ಸಡ್ಡು ಹೊಡೆದು ಕಾದಾಡತೊಡಗಿವೆ (Russia Ukraine War). ಆದರೆ ಈ ಮಧ್ಯೆ ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿದ್ದಾನೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾನೆ (Death of Haveri medical student Naveen janagoudar). ಈ ಸುದ್ದಿ ನಾಡಿಗೆ ಶಿವರಾತ್ರಿಯ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ. ವಿದ್ಯಾರ್ಥಿ ನವೀನನ ಸಾವಿಗೆ ಕಂಬನಿ ಮಿಡಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK shivakumar) ಕರ್ನಾಟಕದ ಓರ್ವ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿದೆ, ಇದಕ್ಕೆ ಹೊಣೆ ಯಾರು? ಎಂದು ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.

ಉಕ್ರೇನ್​ನ ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ಪ್ರತಿಭಾವಂತ ವಿದ್ಯಾರ್ಥಿಯ ಹತ್ಯೆಯಾಗಿದೆ ಎಂದು ಬೆಂಗಳೂರಿನಲ್ಲಿ ಮೇಕೆದಾಟು ಪಾದಯಾತ್ರೆ ವೇಳೆ ವಿಷಾದಿಸಿರುವ ಡಿ.ಕೆ. ಶಿವಕುಮಾರ್​, ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ವಿಫಲವಾಗಿವೆ. ಉಕ್ರೇನ್​ನಲ್ಲಿರುವ ವಿದ್ಯಾರ್ಥಿಗಳ ಕರೆತರಲು ನಾಲಕ್ಕು ಸಚಿವರ ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರ ನೇಮಿಸಿರುವ ಆ ಸಚಿವರು ಏನು ಮಾಡುತ್ತಿದ್ದಾರೆ? ಭಾರತದ ವಿದೇಶಾಂಗ ವ್ಯಾವಹಾರಗಳ ಸಚಿವಾಲಯ ಏನಾಗಿದೆ? ಮೋದಿ ಎಲ್ಲರನ್ನೂ ಕರೆತರುತ್ತೇನೆ ಅಂದಿದ್ರು, ಈಗ ಏನಾಗಿದೆ? ವಿದ್ಯಾರ್ಥಿ ನವೀನ್ ಸಾವಿಗೆ ಯಾರು ಹೊಣೆ ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನದೇ ಜಿಲ್ಲೆಯ ಕಂದನನ್ನು ಕಳೆದುಕೊಂಡೆ, ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ -ಸಿಎಂ ಬೊಮ್ಮಾಯಿ ಬೆಂಗಳೂರು: ರಷ್ಯಾ ಮತ್ತು ಉಕ್ರೇನ್(Russia Ukraine War) ನಡುವಿನ ಭೀಕರ ಕದನ ಮುಂದುವರೆದಿದೆ. ರಷ್ಯಾ ಸೇನೆಯ ರಾಕೆಟ್‌ ದಾಳಿಗೆ ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ (21) ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿ ನವೀನ್ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಭಾವುಕರಾಗಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಿಎಂ ಬೊಮ್ಮಾಯಿ ಭಾವುಕರಾಗಿದ್ದು ಅದೇ ಊರಿನ ಮತ್ತೋರ್ವ ವಿದ್ಯಾರ್ಥಿಗೆ ಗಾಯವಾಗಿದೆ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಸಾವಿನ ಬಗ್ಗೆ ಭಾವುಕರಾಗಿ ಮಾತನಾಡಿದ ಸಿಎಂ, ಮೃತ ನವೀನ್ ಒಂದು ವಾರದಿಂದ ಬಂಕರ್ನಲ್ಲಿ ಇದ್ದರು. ಆದ್ರೆ ಇಂದು ನವೀನ್ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು 4 ನೇ ವರ್ಷದಲ್ಲಿ ಓದುತ್ತಿದ್ದರು. ಅವ್ರ ಜೊತೆಗೆ ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ. ಈ ವಿಚಾರ ನನಗೆ ನೋವು ತಂದಿದೆ. ನಮಗೆ ತುಂಬಾ ಬೇಕಾದ ಕುಟುಂಬ. ಎಂಇಎ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಮೃತದೇಹ ವಾಪಸ್‌ ಪಡೆಯುವ ಬಗ್ಗೆ ಚರ್ಚಿಸಿದ್ದೇನೆ. ನವೀನ್ ಕುಟುಂಬದವರ ಜೊತೆ ಪ್ರಧಾನಿ ಚರ್ಚಿಸಿದ್ದಾರೆ ಎಂದರು.

ಇದನ್ನೂ ಓದಿ:ನನ್ನದೇ ಜಿಲ್ಲೆಯ ಕಂದನನ್ನು ಕಳೆದುಕೊಂಡೆ, ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ -ಸಿಎಂ ಬೊಮ್ಮಾಯಿ ಪ್ರಾಥಮಿಕ ಮಾಹಿತಿ

ಇದನ್ನೂ ಓದಿ: Shivaratri: ಈಶ್ವರನ ಹತ್ತೊಂಬತ್ತು ಅವತಾರಗಳು -ಇದು ಲೋಕ ಕಲ್ಯಾಣಕ್ಕಾಗಿ ಪರಮೇಶ್ವರನ ಅವತಾರಗಳು, ಅವು ಯಾವುವು?

Published On - 6:40 pm, Tue, 1 March 22