ನನ್ನದೇ ಜಿಲ್ಲೆಯ ಕಂದನನ್ನು ಕಳೆದುಕೊಂಡೆ, ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ -ಸಿಎಂ ಬೊಮ್ಮಾಯಿ ಪ್ರಾಥಮಿಕ ಮಾಹಿತಿ

ಸಾವಿನ ಬಗ್ಗೆ ಭಾವುಕರಾಗಿ ಮಾತನಾಡಿದ ಸಿಎಂ, ಮೃತ ನವೀನ್ ಒಂದು ವಾರದಿಂದ ಬಂಕರ್ನಲ್ಲಿ ಇದ್ದರು. ಆದ್ರೆ ಇಂದು ನವೀನ್ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು 4 ನೇ ವರ್ಷದಲ್ಲಿ ಓದುತ್ತಿದ್ದರು. ಅವ್ರ ಜೊತೆಗೆ ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ. ಈ ವಿಚಾರ ನನಗೆ ನೋವು ತಂದಿದೆ.

ನನ್ನದೇ ಜಿಲ್ಲೆಯ ಕಂದನನ್ನು ಕಳೆದುಕೊಂಡೆ, ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ -ಸಿಎಂ ಬೊಮ್ಮಾಯಿ ಪ್ರಾಥಮಿಕ ಮಾಹಿತಿ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು
Follow us
TV9 Web
| Updated By: ಆಯೇಷಾ ಬಾನು

Updated on:Mar 01, 2022 | 6:29 PM

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್(Russia Ukraine War) ನಡುವಿನ ಭೀಕರ ಕದನ ಮುಂದುವರೆದಿದೆ. ರಷ್ಯಾ ಸೇನೆಯ ರಾಕೆಟ್‌ ದಾಳಿಗೆ ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ (21) ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿ ನವೀನ್ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಭಾವುಕರಾಗಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಿಎಂ ಬೊಮ್ಮಾಯಿ ಭಾವುಕರಾಗಿದ್ದು ಅದೇ ಊರಿನ ಮತ್ತೋರ್ವ ವಿದ್ಯಾರ್ಥಿಗೆ ಗಾಯವಾಗಿದೆ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ಸಾವಿನ ಬಗ್ಗೆ ಭಾವುಕರಾಗಿ ಮಾತನಾಡಿದ ಸಿಎಂ, ಮೃತ ನವೀನ್ ಒಂದು ವಾರದಿಂದ ಬಂಕರ್ನಲ್ಲಿ ಇದ್ದರು. ಆದ್ರೆ ಇಂದು ನವೀನ್ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು 4 ನೇ ವರ್ಷದಲ್ಲಿ ಓದುತ್ತಿದ್ದರು. ಅವ್ರ ಜೊತೆಗೆ ಅದೇ ಗ್ರಾಮದ ಮತ್ತೊಬ್ಬರಿಗೂ ಗಾಯವಾಗಿದೆ. ಈ ವಿಚಾರ ನನಗೆ ನೋವು ತಂದಿದೆ. ನಮಗೆ ತುಂಬಾ ಬೇಕಾದ ಕುಟುಂಬ. ಎಂಇಎ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಮೃತದೇಹ ವಾಪಸ್‌ ಪಡೆಯುವ ಬಗ್ಗೆ ಚರ್ಚಿಸಿದ್ದೇನೆ. ನವೀನ್ ಕುಟುಂಬದವರ ಜೊತೆ ಪ್ರಧಾನಿ ಚರ್ಚಿಸಿದ್ದಾರೆ ಎಂದರು.

ಟ್ವೀಟ್ ಮೂಲಕ ನವೀನ್ ಸಾವಿಗೆ ರಾಜ್ಯಪಾಲ ಗೆಹ್ಲೋಟ್ ಸಂತಾಪ ಇನ್ನು ಮತ್ತೊಂದೆಡೆ ಖಾರ್ಕಿವ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವಿಗೆ ರಾಜ್ಯಪಾಲ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮೂಲಕ ವಿದ್ಯಾರ್ಥಿ ನವೀನ್ ಸಾವಿಗೆ ರಾಜ್ಯಪಾಲ ಟಿ.ಸಿ.ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸಂತಾಪ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸರಣಿ ಟ್ವೀಟ್​ಗಳ ಮೂಲಕ ನವೀನ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನವೀನ್​ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್​; ರಷ್ಯಾ, ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚೆ

ಕರೆನ್ಸಿ ಬದಾವಣೆಗೆ ಹೋಗಿದ್ದಾಗ ಫೈರಿಂಗ್​ ಆಗಿದೆ: ಮೃತ ನವೀನ್ ಜತೆಗಿದ್ದ ವಿದ್ಯಾರ್ಥಿಗಳ ಮಾತು

Published On - 6:21 pm, Tue, 1 March 22