ಕರೆನ್ಸಿ ಬದಾವಣೆಗೆ ಹೋಗಿದ್ದಾಗ ಫೈರಿಂಗ್​ ಆಗಿದೆ: ಮೃತ ನವೀನ್ ಜತೆಗಿದ್ದ ವಿದ್ಯಾರ್ಥಿಗಳ ಮಾತು

ಗ್ರೋಸರಿ ತರುವ ಸಲುವಾಗಿ ಹೊರಹೋಗಿದ್ದ ಹಾವೇರಿ ಮೂಲದ ನವೀನ್ ಬೆಳಗ್ಗೆ 7 ಗಂಟೆಗೆ ನಡೆದ ರಾಕೆಟ್‌ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಖಾರ್ಕಿವ್‌ನ ಶವಾಗಾರದಲ್ಲಿ ನವೀನ್‌ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ ಖಾರ್ಕಿವ್‌ನಲ್ಲಿ ನವೀನ್‌ ವ್ಯಾಸಂಗ ಮಾಡುತ್ತಿದ್ದ. ಖಾರ್ಕಿವ್‌ನಲ್ಲಿ ಐವರು ಸ್ನೇಹಿತರ ಜೊತೆ ನವೀನ್‌ ವಾಸವಾಗಿದ್ದ.

ಕರೆನ್ಸಿ ಬದಾವಣೆಗೆ ಹೋಗಿದ್ದಾಗ ಫೈರಿಂಗ್​ ಆಗಿದೆ: ಮೃತ ನವೀನ್ ಜತೆಗಿದ್ದ ವಿದ್ಯಾರ್ಥಿಗಳ ಮಾತು
ನವೀನ್ ಶೇಖರಪ್ಪ ಗ್ಯಾನಗೌಡರ್ (21)
Follow us
TV9 Web
| Updated By: preethi shettigar

Updated on:Mar 01, 2022 | 4:45 PM

ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ರಷ್ಯಾ ಸೇನೆಯ ರಾಕೆಟ್‌ ದಾಳಿಗೆ ನವೀನ್‌ ಬಲಿಯಾಗಿದ್ದಾನೆ(Death). ಮೃತ ನವೀನ್​ ಶೇಖರಪ್ಪ ಗ್ಯಾನಗೌಡರ್ (21) ಕರ್ನಾಟಕದ ಹಾವೇರಿ ಮೂಲದವರು. ಗ್ರೋಸರಿ ತರುವ ಸಲುವಾಗಿ ಹೊರಹೋಗಿದ್ದ ಹಾವೇರಿ ಮೂಲದ ನವೀನ್ ಬೆಳಗ್ಗೆ 7 ಗಂಟೆಗೆ ನಡೆದ ರಾಕೆಟ್‌(Rocket) ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಖಾರ್ಕಿವ್‌ನ ಶವಾಗಾರದಲ್ಲಿ ನವೀನ್‌ ಮೃತದೇಹ ಇರಿಸಲಾಗಿದೆ. ಉಕ್ರೇನ್‌ನ(Ukraine) ಖಾರ್ಕಿವ್‌ನಲ್ಲಿ ನವೀನ್‌ ವ್ಯಾಸಂಗ ಮಾಡುತ್ತಿದ್ದ. ಖಾರ್ಕಿವ್‌ನಲ್ಲಿ ಐವರು ಸ್ನೇಹಿತರ ಜೊತೆ ನವೀನ್‌ ವಾಸವಾಗಿದ್ದ.

ಮೃತ ನವೀನ್ ಜತೆಗಿದ್ದ ವಿದ್ಯಾರ್ಥಿಗಳು ಬಿಚ್ಚಿಟ್ಟ ಸತ್ಯ ಏನು?

ನಾವು ಮೊನ್ನೆಯಿಂದಲೂ ಒಟ್ಟಿಗೆ ಇದ್ದೇವು. ನಿನ್ನೆ ರಾತ್ರಿ ತನಕ ಬಂಕರ್​ನಲ್ಲಿಯೇ ಇದ್ದರು. ನವೀನ್​ ಎಂಬಿಬಿಎಸ್ ನಾಲ್ಕನೇ ವರ್ಷ ವ್ಯಾಸಾಂಗ ಮಾಡುತ್ತಿದ್ದರು. ನಾವು ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು. ನವೀನ್ ಸೂಪರ್ ಮಾರ್ಕೆಟ್​​ನಲ್ಲಿ ಕರೆನ್ಸಿ ಬದಾವಣೆಗೆ ಹೋಗಿದ್ದರು. ಈ ವೇಳೆ ಸರಿ ಸಾಲಿನಲ್ಲಿ ನಿಂತಾಗ ಫೈಯರ್​ ಆಗಿದೆ. ಡೆಸ್​​ಬ್ರೋ ಅನ್ನುವ ರೋಡ್​​ನಲ್ಲಿ ಶಲ್​ ದಾಳಿ ಮಾಡಿದ್ದಾರೆ. ಮೃತ ನವೀನ್ ಪೊಲ್ಯಾಂಡ್​​ಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ನವೀನ್​ ಜತೆಗಿದ್ದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ರಾಯಭಾರಿ ಅಧಿಕಾರಿ ಜೊತೆ ನವೀನ್ ಸಹೋದರ ಮಾತುಕತೆ

ನವೀನ್ ಇಲ್ಲಾ ಎಂಬುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ರಾಯಭಾರಿ ಅಧಿಕಾರಿ ಜೊತೆ ನವೀನ್ ಸಹೋದರ ಮಾತುಕತೆ ನಡೆಸಿದ್ದಾರೆ. ಬೆಳಗ್ಗೆ ದಿನಬಳಕೆ ವಸ್ತು ತರಲು ಹೋಗಿದ್ದಾಗ ಅವಗಢವಾಗಿದೆ ಎಂದು ತಿಳಿಸಿದ್ದಾರೆ.

ಖಾರ್ಕಿವ್‌ನಲ್ಲಿ ಕರ್ನಾಟಕದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತೀಯ ವಿದೇಶಾಂಗ ಇಲಾಖೆಯಿಂದ ಮಾಹಿತಿ ಹೊರಬಿದ್ದಿದೆ. 21 ವರ್ಷದ ನವೀನ್‌ ಕುಟುಂಬದವರ ಜೊತೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ.

ನವೀನ್ ಕುಟುಂಬಕ್ಕೆ ದೂರವಾಣಿ ಸಾಂತ್ವನ ಹೇಳಿದ ಸಿಎಂ

ನವೀನ್ ಅವರ ತಂದೆ ಶೇಖರಗೌಡ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವಾನ ಹೇಳಿದ್ದಾರೆ. ದೂರವಾಣಿಯಲ್ಲಿ ಮಾತನಾಡಿ ಸಾವನ್ನಪ್ಪಿದ ನವೀನ್ ಬಗ್ಗೆ ಮಾಹಿತಿ ಪಡೆದ ಸಿಎಂ, ಇದು ನಿಜಕ್ಕೂ ದೊಡ್ಡ ದುರಂತ, ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನೀವು ಧೈರ್ಯದಿಂದಿರಿ ಎಂದು ಸಾಂತ್ವಾನ ಹೇಳಿದ್ದಾರೆ.

ಮೃತ ವಿದ್ಯಾರ್ಥಿ ನವೀನ್​ ಬಡತನದಲ್ಲಿದ್ದರೂ ಮಗನನ್ನು ಡಾಕ್ಟರ್ ಮಾಡುವ ಆಸೆ ಹೊಂದಿದ್ದರು

ನಾಲ್ಕನೇ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದ ನವೀನ್​ ತಂದೆ ಶೇಖರಗೌಡ ಗ್ಯಾನಗೌಡರ ಎರಡು ಎಕರೆಯಲ್ಲಿ ವ್ಯವಸಾಯ ಮಾಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು. ಹರ್ಷ ಮತ್ತು ನವೀನ ಗ್ಯಾನಗೌಡರ. ಹರ್ಷ ಹಿರಿಯ ಮಗ. ನವೀನ ಕಿರಿಯ ಮಗ. ಡಿಪ್ಲೋಮಾ ಇಂಜನೀಯರ್ ಓದಿದ್ದ ಶೇಖರಗೌಡ ಗ್ಯಾನಗೌಡರ, ಮೊದಲು ಸೌದಿಯಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ನಂತರ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಕೆಲವು ವರ್ಷಗಳಿಂದ ಕೃಷಿ ಕೆಲಸ ಮಾಡಿಕೊಂಡಿರುವ ನವೀನ್​ ತಂದೆ. ತಾಯಿ ವಿಜಯಲಕ್ಷ್ಮಿ ಮನೆಯಲ್ಲೆ ಮಕ್ಕಳನ್ನು ಸಾಕಿ ಸಲುಹಿದ್ದರು.

ಇದನ್ನೂ ಓದಿ: Big Breaking: ರಷ್ಯಾ ದಾಳಿಗೆ ಉಕ್ರೇನ್​​ನಲ್ಲಿದ್ದ ಕರ್ನಾಟಕದ ವಿದ್ಯಾರ್ಥಿ ದುರ್ಮರಣ; ಖಚಿತ ಪಡಿಸಿದ ವಿದೇಶಾಂಗ ಇಲಾಖೆ

ರಷ್ಯಾ ದಾಳಿಗೆ ಚೂರು ಚೂರಾದ ಉಕ್ರೇನ್​ ಜನರ ಜೀವನ: ಇಲ್ಲಿದೆ ಯುದ್ಧನಾಡಿನ ಫೋಟೋಗಳು

Published On - 4:30 pm, Tue, 1 March 22