ನವೀನ್​ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್​; ರಷ್ಯಾ, ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚೆ

ಇಲ್ಲಿಯವರೆಗೆ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳು ಪೋಲ್ಯಾಂಡ್, ರೊಮೇನಿಯಾ, ಹಂಗೇರಿ ಇನ್ನಿತರ ಗಡಿಭಾಗಗಳಿಗೆ ಸಮೀಪದಲ್ಲಿ ಇದ್ದವರೇ ಆಗಿದ್ದರು. ಆದರೆ ಕೀವ್​, ಖಾರ್ಕೀವ್​​ಗಳೆಲ್ಲ ಈ ಗಡಿ ಪ್ರದೇಶಗಳಿಂದ ತುಂಬ ದೂರದಲ್ಲಿದ್ದು, ಇವರಿಗೆ ರಷ್ಯಾ ಗಡಿಯೇ ಸಮೀಪ ಇದೆ.

ನವೀನ್​ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್​; ರಷ್ಯಾ, ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚೆ
ಮೃತ ವಿದ್ಯಾರ್ಥಿ ನವೀನ್​
Follow us
TV9 Web
| Updated By: Lakshmi Hegde

Updated on: Mar 01, 2022 | 6:01 PM

ಉಕ್ರೇನ್​​ನಲ್ಲಿದ್ದ ಭಾರತದ (ಕರ್ನಾಟಕದ ಹಾವೇರಿ) ವಿದ್ಯಾರ್ಥಿ ನವೀನ್ (Karnataka Student Died in Ukraine)​ ರಷ್ಯಾ ದಾಳಿಗೆ ಮೃತಪಡುತ್ತಿದ್ದಂತೆ ಕೇಂದ್ರ ಸರ್ಕಾರ ಫುಲ್​ ಅಲರ್ಟ್ ಆಗಿದೆ. ಈಗಾಗಲೇ ಆಪರೇಶನ್​ ಗಂಗಾ (Operation Ganga) ಮೂಲಕ ಅನೇಕ ವಿದ್ಯಾರ್ಥಿಗಳನ್ನು ಉಕ್ರೇನ್​ನಿಂದ ಭಾರತಕ್ಕೆ ಕರೆತರಲಾಗಿದೆ. ಆದರೆ ಇದೊಂದು ದುರಂತ ನಡೆದ ಬೆನ್ನಲ್ಲೇ ಮತ್ತಷ್ಟು ಕ್ರಮ ಕೈಗೊಳ್ಳಲು ಮುಂದಾಗಿದೆ. ಖಾರ್ಕೀವ್​​ನ ಬಂಕರ್​​ವೊಂದರಲ್ಲಿ ಆಶ್ರಯ ಪಡೆದಿದ್ದ ನವೀನ್​ ಇಂದು ಮುಂಜಾನೆ ಏನಾದರೂ ತಿನ್ನಲು ತರಬೇಕು ಎಂದು ಅಲ್ಲಿಯೇ ಸಮೀಪ ಇದ್ದ ಸೂಪರ್​​ ಮಾರ್ಕೆಟ್​ಗೆ ಹೋಗಿದ್ದಾಗ, ರಷ್ಯಾದ ಶೆಲ್​ ದಾಳಿಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಇನ್ನು ಉಕ್ರೇನ್​​ನಲ್ಲಿ ಕನ್ನಡಿಗ ವಿದ್ಯಾರ್ಥಿ ಸಾವನ್ನಪ್ಪುತ್ತಿದ್ದಂತೆ ಕೇಂದ್ರ ಸರ್ಕಾರ, ಭಾರತದಲ್ಲಿರುವ ರಷ್ಯಾ ಮತ್ತು ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚಿಸಿದೆ. ಅಷ್ಟೇ ಅಲ್ಲ, ರಷ್ಯಾ ಮತ್ತು ಉಕ್ರೇನ್​​ನಲ್ಲಿರುವ ಭಾರತದ ರಾಯಭಾರಿಗಳಾದ ಪವನ್​ ಕಪೂರ್​ ಮತ್ತು ಪಾರ್ಥ ಸತ್ಪತಿ ಆಯಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್​​ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಸಹಕರಿಸಬೇಕು. ಸುರಕ್ಷಿತ ಮಾರ್ಗದಲ್ಲಿ ಅವರನ್ನು ಸ್ವದೇಶಕ್ಕೆ ಕಳಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿಯವರೆಗೆ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳು ಪೋಲ್ಯಾಂಡ್, ರೊಮೇನಿಯಾ, ಹಂಗೇರಿ ಇನ್ನಿತರ ಗಡಿಭಾಗಗಳಿಗೆ ಸಮೀಪದಲ್ಲಿ ಇದ್ದವರೇ ಆಗಿದ್ದರು. ಆದರೆ ಕೀವ್​, ಖಾರ್ಕೀವ್​​ಗಳೆಲ್ಲ ಈ ಗಡಿ ಪ್ರದೇಶಗಳಿಂದ ತುಂಬ ದೂರದಲ್ಲಿದ್ದು, ಇವರಿಗೆ ರಷ್ಯಾ ಗಡಿಯೇ ಸಮೀಪ ಇದೆ. ಸದ್ಯ ರಷ್ಯಾ ಕಾರ್ಖೀವ್​​ನಲ್ಲಿ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಈ ನಿಟ್ಟಿನಲ್ಲಿ ಕೀವ್​, ಖಾರ್ಕಿವ್​​ನಲ್ಲಿರುವ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಕೇಂದ್ರ ಸರ್ಕಾರವೂ ಕೂಡ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ರಷ್ಯಾ ಮತ್ತು ಉಕ್ರೇನ್​ ರಾಯಭಾರಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Ukraine-Russia War: ಹಿಟ್ಲರ್ ಆಕ್ರಮಣದ​ ಬಳಿಕ ಇದೇ ಮೊದಲ ಬಾರಿ ಭೀಕರ ಬಾಂಬ್​ ದಾಳಿಗೆ ತುತ್ತಾದ ಕೀವ್​, ಕಾರ್ಖಿವ್​ ನಗರಗಳು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ