Ukraine-Russia War: ಹಿಟ್ಲರ್ ಆಕ್ರಮಣದ​ ಬಳಿಕ ಇದೇ ಮೊದಲ ಬಾರಿ ಭೀಕರ ಬಾಂಬ್​ ದಾಳಿಗೆ ತುತ್ತಾದ ಕೀವ್​, ಕಾರ್ಖಿವ್​ ನಗರಗಳು

ವರದಿಯ ಪ್ರಕಾರ ಹಿಟ್ಲರ್ ದಾಳಿಯ​ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್​ ಪಟ್ಟಗಳ ಮೇಲೆ ಬಾಂಬ್​ ದಾಳಿ ನಡೆಸಲಾಗಿದೆ. ಇಂದು ನಡೆದ ಬಾಂಬ್​ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸೇರಿ 17 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Ukraine-Russia War: ಹಿಟ್ಲರ್ ಆಕ್ರಮಣದ​ ಬಳಿಕ ಇದೇ ಮೊದಲ ಬಾರಿ ಭೀಕರ ಬಾಂಬ್​ ದಾಳಿಗೆ ತುತ್ತಾದ ಕೀವ್​, ಕಾರ್ಖಿವ್​ ನಗರಗಳು
ಹಿಟ್ಲರ್ ​(ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Pavitra Bhat Jigalemane

Updated on:Mar 01, 2022 | 4:47 PM

ಉಕ್ರೇನ್​ನಲ್ಲಿ ಯುದ್ಧದ (Ukraine War) ವಾತಾವರಣ ಮುಂದುವರೆದಿದೆ. ಸತತ 6ನೇ ದಿನ ರಷ್ಯಾ(Russia) ಉಕ್ರೇನ್​ ಮೇಲೆ ಆಕ್ರಮಣ ಮುಂದುವರೆಸಿದೆ. ಇಂದೂ ಕೂಡ ಏಲ್​, ಬಾಂಬ್​ ದಾಳಿ ಮುಂದುವರೆದಿದೆ. ರಷ್ಯಾ ಪಡೆಯ ದಾಳಿಯಿಂದ ಉಕ್ರೇನ್ ​ನಗರದ ಅತಿದೊಡ್ಡ ನಗರಗಳಾಗ ಕೀವ್(Kyiv)​ ಮತ್ತು ಖಾರ್ಕಿವ್(Kharkiv)​ನಲ್ಲಿ ಇಡೀ ದಿನ ಬಾಂಬ್​ ಸ್ಫೋಟಗಳದ್ದೇ ಸದ್ದಾಗಿದೆ. ಇಂಡಿಯ ಟುಡೆ ವರದಿಯ ಪ್ರಕಾರ ಹಿಟ್ಲರ್​ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್​ ಪಟ್ಟಣಗಳ ಮೇಲೆ ಬಾಂಬ್​ ದಾಳಿ ನಡೆಸಲಾಗಿದೆ. ಇಂದು ನಡೆದ ಬಾಂಬ್​ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿ ಸೇರಿ 17 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಂದು ಕಾರ್ಖಿವ್​ನಲ್ಲಿರುವ ಸರ್ಕಾರದ ಕಚೇರಿಯ ಮೇಲೆ ಶೆಲ್​ ದಾಳಿ ನಡೆಸಲಾಗಿದೆ. 20 ನೇ ಶತಮಾನದ ಮಧ್ಯಭಾಗದಲ್ಲಿ ಅಡಾಲ್ಫ್ ಹಿಟ್ಲರ್ ಯುರೋಪ್‌ನಲ್ಲಿ ಎರಡನೇ ಮಹಾಯುದ್ಧವನ್ನು ಪ್ರಾರಂಭಿಸಿದಾಗ ಕೈವ್ ಮತ್ತು ಕಾರ್ಖಿವ್ ನಗರಗಳು ಕೊನೆಯ ಬಾರಿಗೆ ಬಾಂಬ್‌ ದಾಳಿಗೆ ಒಳಗಾಗಿ ಕಂಗೆಟ್ಟಿದ್ದವು. ಅದಾದ ಬಳಿಕ ಈಗ ರಷ್ಯಾ ದಾಳಿಗೆ ನಗರಗಳು ಬೆಚ್ಚಿಬಿದ್ದಿವೆ. ಜನ ಜೀವನ ಬೀದಿಗೆ ಬಂದು, ಕ್ಷಣಕ್ಷಣಕ್ಕೂ ನಾಗರಿಕರು ಆತಂಕದಲ್ಲಿ ಬದುಕುವಂತೆ ಮಾಡಿದೆ. ಕಾರ್ಖಿವ್​ನತ್ತ ರಷ್ಯಾ ಪಡೆ ಧಾವಿಸುತ್ತಿರುವ ಸಾಟಲೈಟ್​ ದೃಶ್ಯಗಳು  ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಅಕ್ಟೋಬರ್ 1941 ರಲ್ಲಿ ಕಾರ್ಖಿವ್ ನಗರಕ್ಕಾಗಿ ಜರ್ಮನಿ ಮತ್ತು ಸೋವಿಯತ್ ಒಕ್ಕೂಟದ ನಡುವೆ ನಡೆಯಿತು. ಜರ್ಮನ್ ಸೇನೆಯು ತನ್ನ ಗಡಿಯನ್ನು ತಲುಪಿದ ನಾಲ್ಕು ದಿನಗಳಲ್ಲಿ ನಗರವನ್ನು ವಶಪಡಿಸಿಕೊಂಡಿತ್ತು, ಈ ವೇಳೆ 30 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇದೀಗ  2ನೇ ಮಹಾಯುದ್ಧದ ಸಂದರ್ಭದಲ್ಲಿ ಕಂಡಿದ್ದ ಆಕ್ರಮಣದ ಭೀಕರತೆಯನ್ನು ಉಕ್ರೇನ್​ ನಗರಗಳು ರಷ್ಯಾ ದಾಳಿಯಿಂದ ಕಂಡಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:

ರಷ್ಯಾ ದಾಳಿಗೆ ಚೂರು ಚೂರಾದ ಉಕ್ರೇನ್​ ಜನರ ಜೀವನ: ಇಲ್ಲಿದೆ ಯುದ್ಧನಾಡಿನ ಫೋಟೋಗಳು

Published On - 4:41 pm, Tue, 1 March 22

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?