ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಕಾಂಗ್ರೆಸ್ ಮೌನ; ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವಾಗಿ ಅಂತರ ಕಾಯ್ದುಕೊಂಡ ಕೈ ನಾಯಕರು
ಕಾಂಗ್ರೆಸ್ ಪ್ರತಿಕ್ರಿಯೆಯಿಂದ ವಿವಾದ ದೊಡ್ಡದು ಮಾಡುವ ಹುನ್ನಾರ ಇದೆ. ಕೈ ನಾಯಕರು ಪ್ರತಿಕ್ರಿಯೆ ನೀಡಿದರೆ ಬಿಜೆಪಿ ತಂತ್ರಕ್ಕೆ ಸ್ಪಂದಿಸಿದಂತಾಗುತ್ತದೆ. ಕೈ ನಾಯಕರ ಮಾತುಗಳನ್ನು ಮುಂದಿಟ್ಟುಕೊಂಡು ತಿರುಚಿ ವಿವಾದ ಸೃಷ್ಟಿಸುವ ಆತಂಕ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ ಮತ್ತು ಈ ನಿರ್ಧಾರವನ್ನು ಬಿಜೆಪಿ(BJP) ತಂತ್ರಕ್ಕೆ ಪ್ರತಿತಂತ್ರವಾಗಿ ಉಪಯೋಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸಿನಿಮಾ ಮುಂದಿಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ ವಿರುದ್ಧ ಪಿತೂರಿ ಮಾಡುತ್ತಿದೆ. ಕಾಂಗ್ರೆಸ್(Congress) ಪ್ರತಿಕ್ರಿಯೆಯಿಂದ ವಿವಾದ ದೊಡ್ಡದು ಮಾಡುವ ಹುನ್ನಾರ ಇದೆ. ಕೈ ನಾಯಕರು ಪ್ರತಿಕ್ರಿಯೆ ನೀಡಿದರೆ ಬಿಜೆಪಿ ತಂತ್ರಕ್ಕೆ ಸ್ಪಂದಿಸಿದಂತಾಗುತ್ತದೆ. ಕೈ ನಾಯಕರ ಮಾತುಗಳನ್ನು ಮುಂದಿಟ್ಟುಕೊಂಡು ತಿರುಚಿ ವಿವಾದ ಸೃಷ್ಟಿಸುವ ಆತಂಕ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಐತಿಹಾಸಿಕ ತಪ್ಪುಗಳಿಗೆ ಕೇವಲ ಕಾಂಗ್ರೆಸ್ಸೇ ಕಾರಣ ಎಂದು ಬಿಂಬಿಸುವ ಆತಂಕ ಇದೆ. ಈ ಹಿನ್ನಲೆಯಲ್ಲಿ ವಿಷಯದಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಕಾಶ್ಮೀರದ ವಿಷಯ ಬದಲು ಕರ್ನಾಟಕದ ಸಮಸ್ಯೆಯ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ತಿಳಿಸಿದೆ. ಆದರೆ ಕಲಾಪದಲ್ಲಿ ಬಿಜೆಪಿ ನಾಯಕರು ಏನೇ ಹೇಳಿದರು ಕಾಂಗ್ರೆಸ್ ಶಾಸಕರು ಪ್ರತಿಕ್ರಿಯಿಸಿಲ್ಲ.
ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ
ಹತ್ಯಾಕಂಡಗಳು ಮಹಾಭಾರತ, ಕುರುಕ್ಷೇತ್ರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜನೆ ಆದಾಗ 20 ಲಕ್ಷ ಕುಟುಂಬಗಳ ಬಲಿದಾನ ಆಗಿದೆ. ದೇಶದ ಹಿಂದರ ಚರಿತ್ರೆ ನೋಡಿದಾದ ಮತ್ತೆ ಇಂತಹ ರಕ್ತಪಾತವೇ ಮುಂದುವರೆದುಕೊಂಡು ಬರಬೇಕಾ. ಅವರು ಚಿತ್ರಾ ತೆಗೆದಿರೊದು ನೋವು ಹೇಳಿಕೊಂಡಿರೋದು ಎಲ್ಲವೂ ನಡೆದಿದೆ. ಆದರೆ ಅದು ಎಷ್ಟರಮಟ್ಟಿಗೆ ನಡೆದಿದೆ. ನಾನು ಹೋಗಿ ನೋಡಿಲ್ಲ. ಚಿತ್ರವನ್ನ ಎಮೋಷನಲಿ ಸಕ್ಸಸ್ ಆಗೋಕೆ ಜನರ ಹೃದಯಕ್ಕೆ ಹತ್ತಿರ ಆಗುವಂತೆ ಮಾಡ್ತಾರೆ. ಗೋದ್ರಾದಲ್ಲಿ ಗರ್ಬಿಣಿ ಹೆಣ್ಣು ಮಕ್ಕಳ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ ಮಗು ಹೊರತೆಗೆದ ದೃಶ್ಯಕೂಡ ನಡೆದು ಹೋಗಿದೆ. ಇಂತವೆಲ್ಲಾ ಮತ್ತೆ ಮುಂದುವರೆಸಿಕೊಂಡು ಹೋಗಬೇಕಾ, ಇದು ಆಗಬಾರದು ಎನ್ನೋದು ನನ್ನ ಅಭಿಪ್ರಾಯ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಾವೇನಾದ್ರು ನಿಜ ಹೇಳೋಕೆ ಹೋದ್ರೆ ಅದನ್ನ ತಿರುಚುತ್ತಾರೆ ಏನು ಮಾಡೋದು. ಈಗ ಜನರ ಅಭಿವೃದ್ಧಿ ಕೆಲಸದ ಮೇಲೆ ಓಟ್ ಕೇಳ್ತಾ ಇಲ್ಲಾ, ಅವರವರದೇ ಅದ ಅಜೆಂಡಾ ಇಟ್ಟುಕೊಂಡಿದ್ದಾರೆ. ಭಾವನಾತ್ಮಕ ವಿಚಾರಗಳ ಮೇಲೆ ಮತ ಕೇಳಲು ಹೊರಟಿದ್ದಾರೆ. ಕೊನೆಗೆ ಇದಕ್ಕೆ ಪ್ರಾಯಶ್ಚಿತ್ತ ಪಡೋದು ಅಮಾಯಕ ಜನರಲ್ಲವೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲಾ, ಯಾವ ವಂಶಕೂಡ ಉಳಿದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲು ಜನರು ಅಂತಿಮ ತೀರ್ಮಾನ ಮಾಡ್ತಾರೆ ಎಂದು ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ.
ಅಮಿತ್ ಶಾ ಭೇಟಿ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡ
ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ತಂಡ ಭೇಟಿ ಆಗಿತ್ತು. ಈಗ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಭೇಟಿ ಮಾಡಲಾಗಿದೆ. ಈ ವೇಳೆ ಚಿತ್ರತಂಡದವರ ಜೊತೆ ಅನೇಕ ವಿಚಾರಗಳನ್ನು ಅಮಿತ್ ಶಾ ಚರ್ಚೆ ಮಾಡಿದರು ಎನ್ನಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಕಥೆಯನ್ನು ತೋರಿಸಿದ್ದಾರೆ. ಅವರಿಗೆ ಅನೇಕರಿಂದ ಮೆಚ್ಚುಗೆ ಕೇಳಿಬಂದಿದೆ. ರಾಜಕೀಯ ಕ್ಷೇತ್ರದ ಹಲವು ಗಣ್ಯರು ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಅವರನ್ನು ಭೇಟಿ ಆದಾಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಜೊತೆಗೆ ಅವರ ಪತ್ನಿ ಪಲ್ಲವಿ ಜೋಶಿ, ಹಿರಿಯ ನಟ ಅನುಪಮ್ ಖೇರ್ ಕೂಡ ಇದ್ದರು. ಇವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ವಿವಾದಗಳ ಕಾರಣದಿಂದಲೂ ಈ ಸಿನಿಮಾ ಸದ್ದು ಮಾಡುತ್ತಿದೆ. ಆ ಕಾರಣದಿಂದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.
ಇದನ್ನೂ ಓದಿ:
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಂತೆ ದಿ ಲಖಿಂಪುರ್ ಫೈಲ್ಸ್ ಸಿನಿಮಾವೂ ಬರಲಿ: ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡದವರು ದೇಶವಿರೋಧಿಗಳು; ವಿವಾದಾತ್ಮಕ ಹೇಳಿಕೆ ಕೊಟ್ಟ ಶಾಸಕ ರೇಣುಕಾಚಾರ್ಯ
Published On - 4:42 pm, Fri, 18 March 22