
ಬಳ್ಳಾರಿ: ಸೀರೆ ಕಳ್ಳಿಯರ ಖರ್ತಾನಕ್ ಗ್ಯಾಂಗ್ ಬಳ್ಳಾರಿಯಲ್ಲಿ (Bellary) ಕಾರ್ಯಗತವಾಗಿದೆ. ಸೀರೆ ಖರೀದಿ ಹೆಸರಿನಲ್ಲಿ ಬೆಲೆ ಬಾಳುವ ಸೀರೆ ಕಳ್ಳತನ ಮಾಡೋ ಗ್ಯಾಂಗ್ ನ ಕೃತ್ಯ (Shop Lift) ಬೆಳಕಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರೇಷ್ಮೆ ಸೀರೆಗಳೇ ಈ ಕಳ್ಳಿಯರ ಟಾರ್ಗೆಟ್ ಎಂಬುದು ಗಮನಾರ್ಹ. ಕದ್ದ ರೇಷ್ಮೆ ಸೀರೆಗಳನ್ನ (Saree Theft) ಒಳು ಉಡುಪುಗಳಲ್ಲಿ ಮುಚ್ಚಿಟ್ಟುಕೊಳ್ಳುವ ಕೃತ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಗಾಂಧಿನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ವಿಜಯಶ್ರೀ ಸ್ಯಾರಿ ಸೆಂಟರ್ ನಲ್ಲಿ ಈ ಕೃತ್ಯ ನಡೆದಿದೆ. ಇಬ್ಬರು ಕಳ್ಳಿಯರು ಹಾಗೂ ಪುರುಷನೊಬ್ಬ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರೇಷ್ಮೆ ಸೀರೆಗಳ ಕಳ್ಳತನಕ್ಕೆ ಕೈಹಾಕಿರುವುದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಬ್ಬರು ಕಳ್ಳಿಯರು ಹಾಗೂ ಪುರುಷನೊಬ್ಬ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರೇಷ್ಮೆ ಸೀರೆಗಳ ಕಳ್ಳತನಕ್ಕೆ ಕೈಹಾಕಿರುವುದು, ಸಿಸಿಟಿವಿಯಲ್ಲಿ ಸೆರೆಯಾಗಿದೆ
ಈ ಖರ್ತಾನಕ್ ಕಳ್ಳಿಯರು ಅಂಗಡಿಯವರ ಗಮನ ಬೇರೆಡೆ ಸೆಳೆದು ಸೀರೆ ಲಪಟಾಯಿಸಿದ್ದಾರೆ. ಅನುಮಾನಗೊಂಡ ಅಂಗಡಿಯವರಿಂದ ಸೀರೇ ಸ್ಟಾಕ್ ಪರಿಶೀಲನೆ ಮಾಡುವಾಗ 10 ಸಾವಿರ ರೂಪಾಯಿ ಮೌಲ್ಯದ 26 ರೇಷ್ಮೆ ಸೀರೆಗಳು ಕಳ್ಳತನವಾಗಿರುವುದು ಪತ್ತೆಯಾಗಿದೆ. ಸೀರೆ ಅಂಗಡಿ ಮಾಲೀಕ ಕಲ್ಯಾಣಿ ಅವರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸಿಸಿ ಕ್ಯಾಮರಾಗಳ ದೃಶ್ಯ ಆಧರಿಸಿ ಸೀರೆ ಕಳ್ಳತನ ಮಾಡೋ ಗ್ಯಾಂಗ್ ಗೆ ಪೊಲೀಸರು ಶೋಧ ನಡೆಸಿದ್ದಾರೆ.