Mother-Son Duo Death: ತಾಯಿ ತೀರಿಕೊಂಡ ಕೆಲವೇ ಗಂಟೆಗಳಲ್ಲಿ ಮಗನಿಗೆ ಹೃದಯಾಘಾತ -ಸಾವು

| Updated By: ಸಾಧು ಶ್ರೀನಾಥ್​

Updated on: Mar 24, 2022 | 2:35 PM

ಬಳ್ಳಾರಿ: ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿಯಲ್ಲಿ ವಯೋಸಹಜ ಕಾಯಿಲೆಯಿಂದ ತಾಯಿ ನಾಗಮ್ಮ(93) ನಿನ್ನೆ ಬುಧವಾರ ಸಾವನ್ನಪ್ಪಿದರು. ಆದರೆ ತಾಯಿ (Mother) ಸಾವಿನ ಕೆಲವೇ ಕ್ಷಣಗಳಲ್ಲಿ ಮಗ ಕರಿಯಪ್ಪ(48) ಅವರೂ ಸಹ ಹೃದಯಾಘಾತದಿಂದ (Heart attack) ಕೊನೆಯುಸಿರೆಳೆದಿದ್ದಾರೆ. ನಿನ್ನೆ ಸಂಜೆ 93 ವರ್ಷದ ನಾಗಮ್ಮ ಅವರು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟರು. ನಾಗಮ್ಮನ ಸಾವಿನ ಹಿನ್ನೆಲೆ ಭಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಭಜನೆ ಮಾಡುತ್ತಾ ಮಾಡುತ್ತಾ ನಾಗಮ್ಮನ ಮಗ (Son) ಕರಿಯಪ್ಪ ಹೃದಯಾಘಾತದಿಂದ ನಿಧನರಾದರು. ಇಬ್ಬರನ್ನೂ ಸ್ಮಶಾನದಲ್ಲಿ ಅಕ್ಕಪಕ್ಕದಲ್ಲೇ ಅಂತ್ಯಸಂಸ್ಕಾರ […]

Mother-Son Duo Death: ತಾಯಿ ತೀರಿಕೊಂಡ ಕೆಲವೇ ಗಂಟೆಗಳಲ್ಲಿ ಮಗನಿಗೆ ಹೃದಯಾಘಾತ -ಸಾವು
ವೃದ್ಧ ತಾಯಿ ತೀರಿದ ಕೆಲವೇ ಕ್ಷಣಗಳಲ್ಲಿ ಮಗ ಹೃದಯಾಘಾತದಿಂದ ಸಾವು
Follow us on

ಬಳ್ಳಾರಿ: ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿಯಲ್ಲಿ ವಯೋಸಹಜ ಕಾಯಿಲೆಯಿಂದ ತಾಯಿ ನಾಗಮ್ಮ(93) ನಿನ್ನೆ ಬುಧವಾರ ಸಾವನ್ನಪ್ಪಿದರು. ಆದರೆ ತಾಯಿ (Mother) ಸಾವಿನ ಕೆಲವೇ ಕ್ಷಣಗಳಲ್ಲಿ ಮಗ ಕರಿಯಪ್ಪ(48) ಅವರೂ ಸಹ ಹೃದಯಾಘಾತದಿಂದ (Heart attack) ಕೊನೆಯುಸಿರೆಳೆದಿದ್ದಾರೆ. ನಿನ್ನೆ ಸಂಜೆ 93 ವರ್ಷದ ನಾಗಮ್ಮ ಅವರು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟರು. ನಾಗಮ್ಮನ ಸಾವಿನ ಹಿನ್ನೆಲೆ ಭಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಭಜನೆ ಮಾಡುತ್ತಾ ಮಾಡುತ್ತಾ ನಾಗಮ್ಮನ ಮಗ (Son) ಕರಿಯಪ್ಪ ಹೃದಯಾಘಾತದಿಂದ ನಿಧನರಾದರು. ಇಬ್ಬರನ್ನೂ ಸ್ಮಶಾನದಲ್ಲಿ ಅಕ್ಕಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು (Bellary).

ದುರಸ್ಥಿ ವೇಳೆ ಅವಘಡ, ವಿದ್ಯುತ್ ತಗುಲಿ ಲೈನ್​ಮ್ಯಾನ್ ಸಾವು:
ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಲೈನ್​ಮ್ಯಾನ್ ಅಜೀತ್ ಮನಗೂಳಿ ಮೃತಪಟ್ಟಿದ್ದಾರೆ. ವಿದ್ಯುತ್ ಲೈನ್ ದುರಸ್ಥಿ ವೇಳೆ ಅವಘಡ ಸಂಭವಿಸಿದೆ. ಅಜೀತ್ ಮನಗೂಳಿ ಮೂಲತಃ ನಿಡಗುಂದಿ ತಾಲೂಕಿನ ಆರ್ ಎಸ್ ಬೇನಾಳ ಗ್ರಾಮದ‌ವರು. ಮನಗೂಳಿ ಗ್ರಾಮದಲ್ಲಿ ಲೈನ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Also Read:
Sri Vishnu Sahasranama Stotram: ಶ್ರೀ ವಿಷ್ಣು ಸಹಸ್ರನಾಮ ಸ್ತುತಿಸುವುದರ ಫಲಶ್ರುತಿ ಮತ್ತು ಅದರ ಮಹತ್ವ ಹೀಗಿದೆ

Also Read:
ನೆಲದ ಮೇಲೆ ಕುಳಿತು ಊಟ ಮಾಡುವುದು ಸಂಪ್ರದಾಯವಷ್ಟೇ ಅಲ್ಲ, ಅದು ಯೋಗ ಸಾಧನೆಯ ಒಂದು ಆಸನ! ಹೇಗೆ?

Published On - 1:57 pm, Thu, 24 March 22