ಬಳ್ಳಾರಿ, ಜುಲೈ.23: ಗಣಿನಾಡು ಬಳ್ಳಾರಿ ರಂಗ ಕಲಾವಿದರಿಗೆ ಬಹಳ ಫೇಮಸ್. ಇಲ್ಲಿ ಬಯಲಾಟ, ಪೌರಾಣಿಕ ನಾಟಕಗಳು ಸಹಸ್ರ ವರ್ಷಗಳಿಂದ ಉಳಿಸಿಕೊಂಡು, ಬೆಳೆಸಿಕೊಂಡು ಬಂದ ಜಿಲ್ಲೆ ಇದು. ಹೀಗಾಗಿಯೇ ಇಲ್ಲಿನ ರಂಗಭೂಮಿ ಕಲಾವಿದರ ಪ್ರೋತ್ಸಾಹಕ್ಕಾಗಿ 2011ರಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ರಾಜ್ಯ ಸರ್ಕಾರದ ವತಿಯಿಂದ ರಂಗಮಂದಿರ ಕಟ್ಟಲು ಒಂದು ಕೋಟಿ ಹಣ ಬಿಡುಗಡೆ ಮಾಡುವುದಕ್ಕೆ ಭರವಸೆ ಕೊಟ್ಟಿದ್ದರು. ನಂತರದಲ್ಲಿ 50 ಲಕ್ಷದಂತೆ ಎರಡು ಕಂತಿನಲ್ಲಿ ಹಣವನ್ನ ಸಹ ಬಿಡುಗಡೆ ಮಾಡಿದರು. ಆದರೆ ರಂಗಮಂಟಪ ಕಟ್ಟುವಲ್ಲಿ ಹಲವು ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು ಇದೀಗ ಇದು ಆಮೆಗತಿಯಲ್ಲಿ ಸಾಗಿದೆ.
2011ರಲ್ಲಿ ಬಳ್ಳಾರಿ ಪ್ರಾಧಿಕಾರವು ಸಿಎ ಸೈಟ್ ಅಡಿ ಕೇವಲ ಆರು ತಿಂಗಳ ಅಡಿ ಅಂತರದಲ್ಲಿ ರಿಜಿಸ್ಟರ್ ಆಗಿರುವ ರಂಗತೋರಣಕ್ಕೆ ಕಟ್ಟಡ ಕಟ್ಟಲು ಜಾಗ ನೀಡಿದ್ದು ನಿಯಮವಳಿ ಪ್ರಕಾರ ತಪ್ಪಾಗಿದೆ. ಹೀಗಿದ್ದು ನಿಯಮಗಳನ್ನು ಉಲ್ಲಂಘನೆ ಮಾಡಿ ಕಟ್ಟುತ್ತಿರುವ ರಂಗಮಂದಿರ ಈವರಗೆ ಪೂರ್ಣಗೊಂಡಿಲ್ಲ. ಹೀಗಾಗಿ ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಅಧಿಕಾರ ದುರುಪಯೋಗದ ಬಗ್ಗೆ ಪ್ರತಿಭಟನೆ ನಡೆಸುವ ನೈತಿಕತೆ ಸಿದ್ದರಾಮಯ್ಯ ಸರ್ಕಾರಕ್ಕಿಲ್ಲ: ಕುಮಾರಸ್ವಾಮಿ
ರಂಗತೋರಣ ಟ್ರಸ್ಟ್‌ಗೆ ಅನುದಾನ ಬಿಡುಗಡೆಯಾಗುವ ಮುನ್ನ ಇನ್ನೊಂದು ರಂಗಮಂದಿರಕ್ಕೆ ಈ ಹಣ ಬಿಡುಗಡೆಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದರು. ಆದರೆ ರಂಗತೋರಣ ಟ್ರಸ್ಟ್ ಕಮಿಟಿ ರಾಜಕೀಯ ಪ್ರಭಾವ ಬಳಸಿ ಇವರಿಗೆ ಹಣ ಬಿಡುಗಡೆಯಾಗುವಂತೆ ಮಾಡಿದ್ದಾರೆ. ಹೀಗಾಗಿ ಇದು ಅಪ್ಪಟ್ಟ ಮೋಸ ಎನ್ನುವುದು ಇನ್ನೊಂದು ಕಲಾವಿದರ ಗುಂಪಿನ ಆರೋಪವಾಗಿದೆ. ಇನ್ನು 2011ರಿಂದ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಸರ್ಕಾರದಿಂದ ಒಂದು ಕೋಟಿ ಹಣ ಬಿಡುಗಡೆಯಾಗುದಲ್ಲದೆ ರಾಜಕಾರಣಿಗಳು, ಕಲಾ ಆಸಕ್ತಿವುಳ್ಳವರು ಸೇರಿ 65 ಲಕ್ಷ ರೂ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಇಷ್ಟು ಹಣ ಸಂದಾಯವಾದರೂ ಕಟ್ಟಡ ಕಾಮಗಾರಿ ಮಾತ್ರ ಆಮೆಗತಿಯಲ್ಲಿದೆ. ಹೀಗಾಗಿ ರಂಗಭೂಮಿ ಕಲಾವಿದರು ಕಮಿಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಇದರಲ್ಲಿ ಹಗರಣ ವಾಸನೆ ಬರುತ್ತಿದೆ. ಈ ಕುರಿತು ಸೂಕ್ತ ತನಿಖೆ ಆಗಬೇಕು ಅಂತಾ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ನಾಡು ನುಡಿ ಪರಂಪರೆಯ ಕಲೆಗಳನ್ನ ಉಳಿಸುವ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಅನುದಾನ ಕೊಟ್ಟರೇ 12 ವರ್ಷಗಳು ಕಳೆದರು ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಹೀಗಾಗಿ ಸಂಬಂಧಿಸಿದವರು ಇತ್ತ ಕಡೆ ಗಮನ ಹರಿಸಿ ಅದೇನಾಗಿದೆ ಅಂತಾ ಪರಿಶೀಲನೆ ಮಾಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ