ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜೈಸಿಂಗಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಬ್ಬಿಣದ ಅದಿರು ಸಾಗಿಸುತ್ತಿದ್ದ ಟಿಪ್ಪರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ
ಭೀಕರ ರಸ್ತೆ ಅಪಘಾತ
Edited By:

Updated on: May 26, 2025 | 2:42 PM

ಬಳ್ಳಾರಿ, ಮೇ 26: ಭೀಕರ ರಸ್ತೆ ಅಪಘಾತದಲ್ಲಿ (Accident) ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ (death) ಹೊಂದಿರುವಂತಹ ಘಟನೆ ಜಿಲ್ಲೆಯ ಸಂಡೂರಿನ ಜೈಸಿಂಗಪುರ ಬಳಿ ನಡೆದಿದೆ. ಕಬ್ಬಿಣದ ಅದಿರು ಸಾಗಿಸುತ್ತಿದ್ದ ಟಿಪ್ಪರ್​ಗೆ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ದುರ್ಮರಣ ಹೊಂದಿದ್ದಾರೆ. ಸ್ವಾತಿ(5), ಬಿಂಧುಶ್ರೀ(4), ಆಶಾ(28) ಮತ್ತು ಜಯಲಕ್ಷ್ಮೀ(21) ಮೃತರು.

ಸ್ವಗ್ರಾಮ ಲಕ್ಷ್ಮೀಪುರದಿಂದ ಹೊಸಪೇಟೆ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಟಿಪ್ಪರ್ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ರಮೇಶ್​ ಎಂಬಾತನಿಗೆ ಗಂಭೀರ ಗಾಯ ಗಾಯಗಳಾಗಿದ್ದು, ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಡೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮಂಡ್ಯದಲ್ಲಿ ಸಂಚಾರಿ ಪೊಲೀಸರ ಎಡವಟ್ಟಿಗೆ ಮಗು ಬಲಿ

ಮಂಡ್ಯದಲ್ಲಿ ಸಂಚಾರಿ ಪೊಲೀಸರ ಎಡವಟ್ಟಿಗೆ ಮಗು ಬಲಿ ಆಗಿರುವಂತಹ ಘಟನೆ ಮಂಡ್ಯದ ನಂದ ಸರ್ಕಲ್ ಬಳಿ ನಡೆದಿದೆ. ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ಬೈಕ್ ಅಡ್ಡಗಟ್ಟಿದ್ದು, ದಂಪತಿ ಸೇರಿ ಪುತ್ರಿ ದಿಢೀರ್ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಗುವಿನ ತಲೆ ರಸ್ತೆಗೆ ಬಡಿದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದೆ.

ಇದನ್ನೂ ಓದಿ
ನಿವೃತ್ತ ಡಿಜಿ,ಐಜಿಪಿ ಓಂಪ್ರಕಾಶ್ ಹತ್ಯೆಗೆ ಕಾರಣ ಬಹಿರಂಗ
ಪತಿ-ಪತ್ನಿ ಜಗಳದಲ್ಲಿ ಬಲಿಯಾಯ್ತು ಏನೂ ಅರಿಯದ ಮಗು: ಮಲತಂದೆ ಸೇರಿ 4 ಬಂಧನ
ಬೆಳಗಾವಿ: ಮಕ್ಕಳಾಗಲಿಲ್ಲವೆಂದು ಸೊಸೆಯನ್ನ ಕೊಂದ ಅತ್ತೆ-ಮಾವ
ಮತ್ತು ಬರಿಸಿ ಬೆಳಗಾವಿಯ ಮೆಡಿಕಲ್​​ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ: ಪತಿ-ಪತ್ನಿ ಜಗಳದಲ್ಲಿ ಬಲಿಯಾಯ್ತು ಏನೂ ಅರಿಯದ ಮಗು: ಮಲತಂದೆ ಸೇರಿ ನಾಲ್ವರ ಬಂಧನ

ಘಟನೆ ಕಣ್ಣಾರೆ ಕಂಡು ಸಾರ್ವಜನಿಕರು ದಿಗ್ಭ್ರಮೆಗೊಂಡರು. ರಸ್ತೆಯಲ್ಲೇ ಮಗುವನ್ನು ಮಡಿಲಲ್ಲಿಟ್ಟು ತಾಯಿ ಗೋಳಾಡಿದ್ದಾರೆ. ಮಂಡ್ಯ ಸಂಚಾರಿ ಪೊಲೀಸರಿಗೆ ಹೆತ್ತಕರುಳು ಹಿಡಿಶಾಪ ಹಾಕಿದರು.

ಮಳೆಗೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ಚಾಲಕ ಪಾಲು

ಮಳೆಗೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಕಾರು‌ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯ ಕುದುರೆಮುಖ ವೃತ್ತ ಬಳಿ ನಡೆದಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಮಕ್ಕಳಾಗಲಿಲ್ಲವೆಂದು ಸೊಸೆಯನ್ನ ಕೊಂದ ಅತ್ತೆ-ಮಾವ: ಕೊಲೆಗೆ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದ ಗಂಡ

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 28 ವರ್ಷ ಅಣ್ಣೇಶ್ ಮೃತ ಬೈಕ್ ಸವಾರ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಟಿಪ್ಪರ್ ಜಪ್ತಿ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:41 pm, Mon, 26 May 25