Vijayanagara district: ಇಂದು ಕನ್ನಡ ನಾಡಿಗೆ ಸಂಭ್ರಮ- 6 ತಾಲೂಕಿನ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ

ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ವಿದ್ಯುತ್ ದೀಪ ಅಲಂಕಾರದಿಂದ ಹೊಸಪೇಟೆ ನಗರ ಕಂಗೊಳಿಸುತ್ತಿದೆ. ಕಾರ್ಯಕ್ರಮ ವೀಕ್ಷಣೆಗೆ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ.

Vijayanagara district: ಇಂದು ಕನ್ನಡ ನಾಡಿಗೆ ಸಂಭ್ರಮ- 6 ತಾಲೂಕಿನ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ
vijayanagara district: ಇಂದು ಕನ್ನಡ ನಾಡಿಗೆ ಸಂಭ್ರಮ- 6 ತಾಲೂಕುಗಳ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ
Edited By: ಸಾಧು ಶ್ರೀನಾಥ್​

Updated on: Oct 02, 2021 | 9:13 AM

ಬಳ್ಳಾರಿ: ಇಂದು ದೇಶಾದ್ಯಂತ 153ನೇ ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರ್ ಶಾಸ್ತ್ರಿಯವರ 117ನೇ ಜಯಂತಿ ಆಚರಣೆ ಆಯೋಜಿಸಲಾಗಿದೆ. ಇದೇ ವೇಳೆ ರಾಜ್ಯದ 31 ನೇ ಜಿಲ್ಲೆಯಾಗಿ ನೂತನ ವಿಜಯನಗರ ಜಿಲ್ಲೆ ಇಂದು ಅಧಿಕೃತವಾಗಿ ಉದಯವಾದ ಸಂದರ್ಭವಾಗಿದೆ. 6 ತಾಲೂಕುಗಳ ರಾಜ್ಯದ 31 ನೇ ಜಿಲ್ಲೆಯಾಗಿ, ನೂತನ ವಿಜಯನಗರ ಜಿಲ್ಲೆಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಇಂದು ಸಂಜೆ ಹೊಸಪೇಟೆಯ‌ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಅದ್ದೂರಿ ಕಾರ್ಯಕ್ರಮಕ್ಕೆ ಹಂಪಿಯ ಮಾದರಿಯಲ್ಲಿ ಬೃಹತ್ ವೇದಿಕೆ ಸಿದ್ದಗೊಂಡಿದೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನೂತನ ಜಿಲ್ಲೆಗೆ ಚಾಲನೆ ಸಿಗಲಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು, ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಂಜೆ‌ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ‌ ವಿಜಯನಗರ ‌ವೈಭವ ಮೆರವಣಿಗೆ ಸಾಗಲಿದೆ. 80ಕ್ಕೂ‌ ಹೆಚ್ಚು ಕಲಾತಂಡಗಳು‌ ಭಾಗಿಯಾಗಲಿವೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರಿಂದ‌ ಮೆರವಣಿಗೆಗೆ ಚಾಲನೆ ಸಿಗಲಿದೆ. ವಿಜಯನಗರ ಜಿಲ್ಲೆ ಉದ್ಘಾಟನೆ ಬಳಿಕ ರಾಜ್ಯ- ಹೊರ ರಾಜ್ಯದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ವಿದ್ಯುತ್ ದೀಪ ಅಲಂಕಾರದಿಂದ ಹೊಸಪೇಟೆ ನಗರ ಕಂಗೊಳಿಸುತ್ತಿದೆ. ಕಾರ್ಯಕ್ರಮ ವೀಕ್ಷಣೆಗೆ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಂದಿನಿಂದ Vijayanagara ‘ಸಾಮ್ರಾಜ್ಯ’ ದರ್ಬಾರ್! ವಿಜಯನಗರ ಜಿಲ್ಲೆಗೆ ಇಂದು CM Bommai ಚಾಲನೆ
YouTube video player

Published On - 8:36 am, Sat, 2 October 21

TV9 Web

TV9 Kannada

Read More
Loading...
Unable to load recommendations.
Follow Us