ಬಳ್ಳಾರಿ: ಮದುವೆ ಆಗದೇ ಹುಚ್ಚು ಬಿಡಲ್ಲ, ಹುಚ್ಚು ಬಿಡದೇ ಮದುವೆಯಾಗಲ್ಲ ಅಂತ ಗಾದೆಯೇ ಇದೆ. ಕೆಲವರಿಗೆ ಮದುವೆ ಬಗ್ಗೆ ಎಷ್ಟೊದು ಹುಚ್ಚಿರುತ್ತೆ ಅಂದ್ರೆ ಅದನ್ನು ಹೇಳೋಕಾಗಲ್ಲ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ 23 ವರ್ಷದ ಚಿರಂಜೀವಿ ಎಂಬ ಯುವಕನೋರ್ವ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿಬಿಟ್ಟಿದ್ದ. ತನಗೆ ಮದುವೆ ಮಾಡಿದರೆ ಮಾತ್ರ ಟವರ್ನಿಂದ ಕೆಳಗಿಳಿಯುವುದಾಗಿ ಹಠ ಹಿಡಿದುಕುಳಿತಿದ್ದ.
ಈಗಾಗಲೇ ಮದುವೆಗೆಂದು ಚಿರಂಜೀವಿಗೆ ವಧುವನ್ನು ಬಹುತೇಕ ನಿಶ್ಚಯಿಸಲಾಗಿದೆ. ಇಬ್ಬರು ಗಂಡು ಮಕ್ಕಳಿರುವ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಅಂತ ಮನೆಯಲ್ಲಿ ಪೋಷಕರು ನಿಲುವು ತಳೆದಿದ್ದಾರೆ. ಆದರೆ, ಚಿರಂಜೀವಿ ನನಗೆ ಹುಡುಗಿಯನ್ನು ನಿಶ್ಚಯಿಸಿದ್ದೀರಿ, ಆದರೆ, ಯಾಕೆ ಮದುವೆ ತಡ ಮಾಡುತ್ತಿದ್ದೀರಿ? ಎಂದು ಹಠ ಹಿಡಿದು ಟವರ್ ಏರಿ ಕುಳಿತಿದ್ದಾನೆ.
ಪೊಲೀಸರು ಮತ್ತು ಸ್ಥಳೀಯರು ಕೊನೆಗೂ ಹರಸಾಹಸ ನಡೆಸಿ, ಮನವೊಲಿಸಿ ಟವರ್ನಿಂದ ಕೆಳಗಿಳಿಸಿದ್ದಾರೆ. ಇಳಿಯುವಾಗಲೂ ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು ಅಂತ ಷರತ್ತು ಹಾಕಿ ಟವರ್ ಇಳಿದಿದ್ದಾನೆ. ಹೀಗೆ ಮದುವೆ ಆಗುವ ಹುಚ್ಚಿಗೆ ಬಿದ್ದು ಟವರ್ ಏರಿದ ಘಟನೆ ಪೊಲೀಸರು ಮತ್ತು ಸ್ಥಳಿಯರ ಮಧ್ಯ ಪ್ರವೇಶದಿಂದ ಅಂತೂ ಇಂತೂ ಸುಖಾಂತ್ಯವಾಗಿದೆ.
ಇದನ್ನೂ ಓದಿ: ಕೊವಿಡ್ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಶಕ್ತಿ ಉಂಟಾಗಿದೆ ಎಂದ ಉಲ್ಲಾಸನಗರ ವ್ಯಕ್ತಿಯ ವಾದ; ವಿಡಿಯೊ ವೈರಲ್
Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ ಸನ್ನಿ ಲಿಯೋನ್; ವೈರಲ್ ಆಯ್ತು ನಟಿಯ ಹೊಸ ಫೋಟೋ
(Viral Video young man sitting in a tower wants to will soon marry in Ballari )
Published On - 7:17 pm, Mon, 14 June 21