ಕೊವಿಡ್ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಶಕ್ತಿ ಉಂಟಾಗಿದೆ ಎಂದ ಉಲ್ಲಾಸನಗರ ವ್ಯಕ್ತಿಯ ವಾದ; ವಿಡಿಯೊ ವೈರಲ್
Covid vaccine: ಕೊವಿಡ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಮತ್ತು ಯಾವುದೇ ಲೋಹ ಆಧಾರಿತ ಪದಾರ್ಥಗಳನ್ನು ಹೊಂದಿರುವುದಿಲ್ಲ.ಕೊವಿಡ್ 19 ಲಸಿಕೆಗಳ ಬಗ್ಗೆ ತಪ್ಪು ಮಾಹಿತಿಗೆ ಬಲಿಯಾಗಬೇಡಿ ಮತ್ತು ಲಸಿಕೆ ಪಡೆಯಿರಿ ಎಂದು ಪಿಐಬಿ ಟ್ವೀಟ್ ಮಾಡಿದೆ.
ಕಲ್ಯಾಣ್: ಕೊವಿಡ್ ಲಸಿಕೆ ಸ್ವೀಕರಿಸಿದ ನಂತರ ದೇಹದಲ್ಲಿ ಅಯಸ್ಕಾಂತ ಶಕ್ತಿ ಉತ್ಪತ್ತಿಯಾಗಿದೆ ಎಂದು ನಾಶಿಕ್ ಮೂಲದ ವ್ಯಕ್ತಿಯೊಬ್ಬರು ಹೇಳಿದ ನಂತರ ಇದೀಗ ಉಲ್ಲಾಸನಗರದ 46 ವರ್ಷದ ವ್ಯಕ್ತಿಯೊಬ್ಬರು ಇದೇ ರೀತಿಯ ವಾದ ಮುಂದಿಟ್ಟಿದ್ದಾರೆ. ತಮ್ಮ ವಾದವನ್ನು ಸಮರ್ಥಿಸಲು ಮತ್ತು ಸಾಬೀತುಪಡಿಸಲು, ಶಾಂತಾರಾಮ್ ಚೌಧರಿ ಎಂಬ ಈ ವ್ಯಕ್ತಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದು ಅದು ವೈರಲ್ ಆಗಿದೆ.
ವಿಡಿಯೊದಲ್ಲಿ ತಟ್ಟೆ, ಚಮಚಗಳು ಮತ್ತು ನಾಣ್ಯಗಳು ಅವರ ದೇಹಕ್ಕೆ ಅಂಟಿಕೊಳ್ಳುವುದನ್ನು ಕಾಣಬಹುದು. “ನಾನು ಏಪ್ರಿಲ್ 19 ರಂದು ನನ್ನ ಎರಡನೇ ಡೋಸ್ ಲಸಿಕೆ ತೆಗೆದುಕೊಂಡಿದ್ದೇನೆ ಆದರೆ ಶುಕ್ರವಾರ ತನ್ನ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಉಂಟಾಗಿದೆ ಹೇಳಿಕೊಂಡಿರುವ ನಾಶಿಕ್ ಮೂಲದ ವ್ಯಕ್ತಿಯ ಸುದ್ದಿಯನ್ನು ನೋಡಿದ ನಂತರ, ನಾನು ಕೂಡ ಚಮಚ ಮತ್ತು ಸಣ್ಣ ತಟ್ಟೆಗಳನ್ನು ಬಳಸಿ ಅದೇ ರೀತಿ ಪ್ರಯತ್ನಿಸಿದೆ. ಅದೆಲ್ಲವೂ ದೇಹಕ್ಕೆ ಅಂಟಿಕೊಂಡಿತು ಎಂದು ಹೇಳಿದ್ದಾರೆ. ಕ್ಯಾಂಪ್ ನಂಬರ್ 1 ರ ನಿವಾಸಿ ಶಾಂತಾರಾಮ್ ಚೌಧರಿ ಉಲ್ಲಾಸನಗರದ ಮಹಾನಗರ ಪಾಲಿಕೆಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ, ನಾಶಿಕ್ ಮೂಲದ ಹಿರಿಯ ನಾಗರಿಕ ಅರವಿಂದ್ ಸೋನಾರ್ ಅವರು ಲಸಿಕೆ ಎರಡನೇ ಡೋಸ್ ತೆಗೆದುಕೊಂಡ ನಂತರ ಕಾಂತೀಯ ಶಕ್ತಿಯನ್ನು ಉತ್ಪತ್ತಿಯಾಗಿದೆ ಎಂದು ಹೇಳಿದ್ದಾರೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್-ಚೆಕಿಂಗ್ ಆರ್ಮ್ ಪಿಐಬಿ ಫ್ಯಾಕ್ಟ್ ಚೆಕ್, ಈ ಬಗ್ಗೆ ಪ್ರತಿಕ್ರಿಯಿಸಿದ್ದು ಕೊವಿಡ್ -19 ಲಸಿಕೆಗಳ ಬಗ್ಗೆ ಈ ವಾದಗಳು ಆಧಾರರಹಿತವಾಗಿವೆ. ಲಸಿಕೆಗಳು ಮಾನವ ದೇಹದಲ್ಲಿ ಕಾಂತೀಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ ಎಂದು ಹೇಳಿದೆ.
ಕೊವಿಡ್ ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಮತ್ತು ಯಾವುದೇ ಲೋಹ ಆಧಾರಿತ ಪದಾರ್ಥಗಳನ್ನು ಹೊಂದಿರುವುದಿಲ್ಲ. ತೀವ್ರವಲ್ಲದ ತಲೆನೋವು, ನೋವು ಅಥವಾ ಇಂಜೆಕ್ಷನ್ ಸ್ಥಳದಲ್ಲಿ ಊದಿಕೊಳ್ಳುವುದು ಮೊದಲಾದ ಗಂಭೀರವಲ್ಲದ ಅಡ್ಡಪರಿಣಾಮಗಳನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಕೊವಿಡ್ 19 ಲಸಿಕೆ ಪಡೆದ ನಂತರ ಸ್ವಲ್ಪ ಜ್ವರವೂ ಇರುತ್ತದೆ ಎಂದು ಅದು ಹೇಳಿದೆ. ಕೊವಿಡ್ 19 ಲಸಿಕೆಗಳ ಬಗ್ಗೆ ತಪ್ಪು ಮಾಹಿತಿಗೆ ಬಲಿಯಾಗಬೇಡಿ ಮತ್ತು ಲಸಿಕೆ ಪಡೆಯಿರಿ ಎಂದು ಪಿಐಬಿ ಟ್ವೀಟ್ ಮಾಡಿದೆ.
Several posts/videos claiming that #COVID19 #vaccines can make people magnetic are doing the rounds on social media. #PIBFactCheck:
✅COVID-19 vaccines do NOT make people magnetic and are completely SAFE
Register for #LargestVaccineDrive now and GET VACCINATED ‼️ pic.twitter.com/pqIFaq9Dyt
— PIB Fact Check (@PIBFactCheck) June 10, 2021
ಅಮೆರಿಕ ಮತ್ತು ಬ್ರಿಟನ್ ನಲ್ಲಿಯೂ ಜನರು ಕೊವಿಡ್ -19 ಲಸಿಕೆಗಳನ್ನು ಸ್ವೀಕರಿಸಿದ ನಂತರ ದೇಹಕ್ಕೆ ಆಯಸ್ಕಾಂತಗಳನ್ನು ಅಂಟಿಸುವ ಹಲವಾರು ವಿಡಿಯೊಗಳು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಆಗಿವೆ. ಲಸಿಕೆಗಳಲ್ಲಿ ಕಾಂತೀಯ ಶಕ್ತಿ ಎಂದು ಕೆಲವರು ಹೇಳಿದ್ದು ಇನ್ನು ಕೆಲವರು ಮೈಕ್ರೊಚಿಪ್ ಇದೆ ಎಂದು ವಾದಿಸಿದ್ದಾರೆ. ಈ ಮೂಲಕ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಗುರಿಯಾಗಿಸಲಾಗಿದೆ. ಕೊವಿಡ್ -19 ವಿರುದ್ಧ ಲಸಿಕೆ ಹಾಕಿದವರು ಇಂಜೆಕ್ಷನ್ ಸ್ಥಳದಲ್ಲಿ ಕಾಂತೀಯತೆಯನ್ನು ಅನುಭವಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಕೊವಿಡ್ -19 ಲಸಿಕೆಗಳು ಲೋಹಗಳನ್ನು ಹೊಂದಿದ್ದರೂ ಸಹ, ಅವು ಕಾಂತೀಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ ಎಂದು ಅವರು ಹೇಳಿದರು. ಮಾನವರು ಎಲ್ಲರೂ ಸ್ವಾಭಾವಿಕವಾಗಿ “ಸ್ವಲ್ಪ ಕಾಂತೀಯ ಶಕ್ತಿ ಹೊಂದಿದವರು” ಎಂದು ಅವರು ಹೇಳಿದರು. ಏಕೆಂದರೆ ನಮ್ಮಲ್ಲಿ ಸಣ್ಣ ಪ್ರಮಾಣದ ಕಬ್ಬಿಣವಿದೆ. “ಮ್ಯಾಗ್ನೆಟ್ ಅನ್ನು ಆಕರ್ಷಿಸಲು ಲಸಿಕೆಯಲ್ಲಿ ಇರಬೇಕಾದ ಲೋಹದ ಪ್ರಮಾಣವು ಲಸಿಕೆಯ ಸಣ್ಣ ಪ್ರಮಾಣದಲ್ಲಿ ಇರಬಹುದಾದ ಪ್ರಮಾಣಕ್ಕಿಂತ ಹೆಚ್ಚು ಗಣನೀಯವಾಗಿದೆ” ಎಂದು ಮೀಡನ್ ಹೆಲ್ತ್ ಡೆಸ್ಕ್‌ನ ವೈದ್ಯಕೀಯ ತಜ್ಞರು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ
(After Nashik man Ulhasnagar man claims developing magnetic powers after taking second dose of Covid-19 vaccine)
Published On - 11:35 am, Mon, 14 June 21