Fact Check: ಕೊರೊನಾ ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಉಂಟಾಗುತ್ತದೆಯೇ? ಇಲ್ಲಿದೆ ವಿವರ
ತಜ್ಞರ ಪ್ರಕಾರ, ದೇಹದಲ್ಲಿ ಕಬ್ಬಿಣ ಅಂಟುವುದು ದೇಹದ ಮೇಲೆ ಹಚ್ಚಿಕೊಂಡಿರುವ ಯಾವುದೇ ದ್ರವದಿಂದ ಇರಬಹುದು. ಕಣ್ಕಟ್ಟು ಕೂಡ ಆಗಿರಬಹುದು ಎಂದು ಹೇಳಿದ್ದಾರೆ.
ಕೊವಿಡ್-19 ಲಸಿಕೆಯು ಮನುಷ್ಯರ ದೇಹದಲ್ಲಿ ಅಯಸ್ಕಾಂತೀಯ ಗುಣವನ್ನು ಉಂಟುಮಾಡುತ್ತದೆ. ಕೊರೊನಾ ವೈರಾಣು ವಿರುದ್ಧದ ಲಸಿಕೆಯಲ್ಲಿ ಮೈಕ್ರೋಚಿಪ್ಗಳಿವೆ ಎಂಬ ಗಾಳಿಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಲಸಿಕೆ ಪಡೆದಿರುವ ಒಬ್ಬ ವ್ಯಕ್ತಿಯ ಕೈಯಲ್ಲಿ ಕಬ್ಬಿಣದ ತುಂಡುಗಳು ಅಂಟಿಕೊಂಡಿರುವುದು ಕಂಡುಬಂದಿತ್ತು.
ಲಸಿಕೆ ಪಡೆದ ವ್ಯಕ್ತಿಯಲ್ಲಿ ಅಯಸ್ಕಾಂತೀಯ ಗುಣ ಕಂಡುಬಂದಿದೆ. ಆತನ ಭುಜಗಳಲ್ಲಿ ವಿವಿಧ ಕಬ್ಬಿಣದ ವಸ್ತುಗಳು ಅಂಟಿಕೊಂಡಿರುವ ಫೋಟೊ ಕೂಡ ಹಂಚಿಕೆಯಾಗಿತ್ತು. ಇತರ ಕೆಲವು ವಿಡಿಯೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡಿತ್ತು. ಅದರಲ್ಲೂ ಅವರ ಮೈಗೆ ಕಬ್ಬಿಣ ಅಂಟಿಕೊಂಡಿತ್ತು. ಲಸಿಕೆ ಪಡೆದ ಬಳಿಕ ತಮ್ಮಲ್ಲಿ ಅಯಸ್ಕಾಂತೀಯ ಗುಣ ಬಂದಿದೆ ಎಂದು ಅವರೂ ಹೇಳಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವರು ಲಸಿಕೆಯಲ್ಲಿ ಮ್ಯಾಗ್ನೆಟಿಕ್ ಅಂಶವಿದೆ ಎಂದಿದ್ದರೆ, ಇನ್ನೂ ಕೆಲವರು ಮುಂದುವರಿದು ಲಸಿಕೆಯಲ್ಲಿ ಮೈಕ್ರೋಚಿಪ್ ಇದೆ ಎಂದು ಹೇಳಿದ್ದರು. ಕೇವಲ ಭಾರತೀಯರಷ್ಟೇ ಅಲ್ಲ. ವಿದೇಶಿಗರು ಕೂಡ ಹೀಗೆ ಫೋಟೊಗಳನ್ನು, ವಿಡಿಯೋಗಳನ್ನು ಹಂಚಿಕೊಂಡಿದ್ದರು.
Fully vaxxed! #magnetic pic.twitter.com/A03PJ5HMBc
— Dana Goldberg (@DGComedy) June 9, 2021
ಈ ವಿಚಾರಕ್ಕೆ ಸಂಬಂಧಿಸಿ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕಿಂಗ್ ಅಂಗ ‘ಪಿಐಬಿ ಫ್ಯಾಕ್ಟ್ ಚೆಕ್’ ಪ್ರತಿಕ್ರಿಯಿಸಿದೆ. ಅದರಂತೆ, ಕೊರೊನಾ ವಿರುದ್ಧದ ಲಸಿಕೆಯಲ್ಲಿ ಯಾವುದೇ ಅಯಸ್ಕಾಂತೀಯ ಗುಣ ಇಲ್ಲ. ಲಸಿಕೆಯಿಂದ ದೇಹದಲ್ಲಿ ಮ್ಯಾಗ್ನೆಟಿಕ್ ಗುಣ ಬರುತ್ತದೆ ಎಂಬ ವಾದ ಅರ್ಥಹೀನ ಎಂದು ಹೇಳಿದೆ.
Every dad right now with their second magnetic dose. pic.twitter.com/TXJI00dV3f
— Neil Zeller (@Neil_Zee) June 11, 2021
ಕೊವಿಡ್-19 ಲಸಿಕೆ ಸಂಪೂರ್ಣ ಸುರಕ್ಷವಾಗಿದೆ. ಅದರಲ್ಲಿ ಯಾವುದೇ ಉಕ್ಕಿನ ಅಂಶಗಳಿಲ್ಲ. ಮೈಕ್ರೋಚಿಪ್ಗಳಿಲ್ಲ. ಲಸಿಕೆಯಿಂದ ಮ್ಯಾಗ್ನೆಟಿಕ್ ರಿಯಾಕ್ಷನ್ ಕೂಡ ಉಂಟಾಗುವುದಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದೆ. ಕೊರೊನಾ ಲಸಿಕೆ ಪಡೆದವರು ಇಂಥ ಗಾಳಿಸುದ್ದಿಗಳಿಂದ ದೂರ ಇರಬೇಕು. ಇವುಗಳನ್ನು ನಂಬಬಾರದು ಎಂದೂ ಹೇಳಿದೆ.
Several posts/videos claiming that #COVID19 #vaccines can make people magnetic are doing the rounds on social media. #PIBFactCheck:
✅COVID-19 vaccines do NOT make people magnetic and are completely SAFE
Register for #LargestVaccineDrive now and GET VACCINATED ‼️ pic.twitter.com/pqIFaq9Dyt
— PIB Fact Check (@PIBFactCheck) June 10, 2021
ತಜ್ಞರ ಪ್ರಕಾರ, ದೇಹದಲ್ಲಿ ಕಬ್ಬಿಣ ಅಂಟುವುದು ದೇಹದ ಮೇಲೆ ಹಚ್ಚಿಕೊಂಡಿರುವ ಯಾವುದೇ ದ್ರವದಿಂದ ಇರಬಹುದು. ಕಣ್ಕಟ್ಟು ಕೂಡ ಆಗಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Cowin: ಕೊವಿನ್ ಪೋರ್ಟಲ್ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ
Published On - 8:33 pm, Fri, 11 June 21