International Day of Yoga: ಹಂಪಿ ಕಲ್ಲಿನ ತೇರಿನ ಮುಂದೆ ಮೇ 15 ಬೆಳಗ್ಗೆಯಿಂದಲೇ ಯೋಗ, ಅಭಿಯಾನದ ವಿಶೇಷತೆಯೇನು?
ಕೋವಿಡ್ ಹಿನ್ನೆಲೆ ಎಲ್ಲರೂ ಯೋಗದ ಕಡೆಗೆ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ರೋಗ ಮುಕ್ತ ಗ್ರಾಮ, ತಾಲೂಕು ಜಿಲ್ಲೆ ಮಾಡುವ ಸಂಕಲ್ಪ ಮಾಡಲಾಗಿದೆ. ಯೋಗದ ಜತೆಗೆ ಹಂಪಿಯ ಸಾರಗಳನ್ನು ಇಡೀ ವಿಶ್ವಕ್ಕೆ ಪ್ರಚುರಪಡಿಸಲು ಹಂಪಿಯಲ್ಲಿ ಪ್ರತಿ ಸ್ಮಾರಕಗಳ ಎದುರು ಯೋಗ ಮಾಡಲಾಗುವುದು ಎಂದರು.
ವಿಜಯನಗರ: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೇ 15 ರಿಂದ ಹಂಪಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Day of Yoga 21 June) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹರಿಹರದ ವೀರಶೈವ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಹಾಗೂ ಶ್ವಾಸಕೇಂದ್ರದ ಸಂಸ್ಥಾಪಕ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನವನ್ನು 2015ರಿಂದ ಪ್ರತಿ ವರ್ಷ ಜೂನ್ 15ರಂದು ಆಚರಿಸಲಾಗುತ್ತಿದೆ. 2014ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (United Nations General Assembly) ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಕೋವಿಡ್ ಹಿನ್ನೆಲೆ ಎಲ್ಲರೂ ಯೋಗದ ಕಡೆಗೆ ಮುಖ ಮಾಡಿದ್ದಾರೆ. ರಾಜ್ಯದಲ್ಲಿ ರೋಗ ಮುಕ್ತ ಗ್ರಾಮ, ತಾಲೂಕು ಜಿಲ್ಲೆ ಮಾಡುವ ಸಂಕಲ್ಪ ಮಾಡಲಾಗಿದೆ. ಈ ಮೂಲಕ ಇಡೀ ಕರ್ನಾಟಕವನ್ನು ರೋಗ ಮುಕ್ತ ರಾಜ್ಯ ಮಾಡುವ ಸಂಕಲ್ಪ ಹೊಂದಲಾಗಿದೆ. ಜಾತಿ, ಮತ, ಪಂಥ, ಧರ್ಮವನ್ನು ಮೀರಿ ಎಲ್ಲರೂ ಯೋಗ ಕಲಿಯಲು ಆಸಕ್ತಿ ಹೊಂದಿದ್ದಾರೆ, ಯೋಗದ ಜತೆಗೆ ಹಂಪಿಯ ಸಾರಗಳನ್ನು ಇಡೀ ವಿಶ್ವಕ್ಕೆ ಪ್ರಚುರಪಡಿಸಲು ಹಂಪಿಯಲ್ಲಿ ಪ್ರತಿ ಸ್ಮಾರಕಗಳ ಎದುರು ಯೋಗ ಮಾಡಲಾಗುವುದು ಎಂದರು.
ಹಂಪಿಯ ವಿಜಯ ವಿಠಲ ದೇಗುಲ ಹಾಗೂ ಕಲ್ಲಿನ ತೇರಿನ ಬಳಿ ಮೇ 15 (ಬೆಳಗ್ಗೆ 6 ಗಂಟೆಯಿಂದ 1 ಗಂಟೆವರೆಗೆ) ರಂದು ಯೋಗ ದಿನಾಚರಣೆಗೆ ಚಾಲನೆ ನೀಡಲಾಗುವುದು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪ್ರತಿ ಹಳ್ಳಿಗಳಿಗೆ ತೆರಳಿ ಯೋಗದ ಕುರಿತು ಜಾಗೃತಿ ಮೂಡಿಸಲಾಗುವುದು. ಈ ಮೂಲಕ ಭಾಗದಲ್ಲಿ ಯೋಗದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ.
ಮೇ 22 ರಂದು ಬಡವಿ ಲಿಂಗ, ಉಗ್ರ ನರಸಿಂಹ ಸ್ವಾರಕಗಳ ಬಳಿ ಯೋಗ ಕಾರ್ಯಕ್ರಮ ನಡೆಸಲು ಗುವುದು. ಮೇ 29 ರಂದು ಮಹಾನವಮಿ ದಿಬ್ಬದ ಬಳಿ ಕಾರ್ಯಕ್ರಮ ನಡೆಯಲಿದೆ, ಜೂನ್ 5 ರಂದು ಆಣಿಸಾಲು, ಒಂಟಿ ಸಾಲು ಸ್ಮಾರಕಗಳ ಬಳಿ, ಜೂನ್ 12 ರಂದು ಕಮಲ ಮಹಲ್, ಜೂನ್ 19 ರಂದು ಎದುರು ಬಸವಣ್ಣ ಸ್ಮಾರಕಗಳ ಬಳಿ ಮತ್ತು ವಿಶ್ವ ಅಂತಾರಾಷ್ಟ್ರೀಯ ಕಾರ್ಯಕ್ರಮ ಕೂಡ ಜೂನ್ 21 ರಂದು ಎದುರು ಬಸವಣ್ಣ ಮಂಟಪದ ನಡೆಸಲಾಗುವುದು ಎಂದರು.
ಹಂಪಿಯಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ ಭಾಗವಹಿಸಲಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿಯೂ ಚರ್ಚಿಸಲಾಗಿದ್ದು ಅವರು ಕೂಡ ಒಂದು ದಿನ ಆಗಮಿಸುವ ಸಾಧ್ಯತೆ ಇದೆ. ಜತೆಗೆ ಕೇಂದ್ರ ಸಚಿವರು ಸೇರಿದಂತೆ ವಿವಿಧ ಸಮಾಜದ ಮುಖಂಡರು, ಗಣ್ಯರು ಕೂಡ ಭಾಗವಹಿಸಲಿದ್ದಾರೆ. ಹಂಪಿಯಲ್ಲಿ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಯೋಗ ಸಾಧಕರು ಹಂಪಿ ಸ್ಮಾರಕಗಳ ಎದುರು ಯೋಗ ಮಾಡಲಿದ್ದಾರೆ.
ಭಾರತ ಸರ್ಕಾರದ ಆಯುಷ್ ಇಲಾಖೆ, ಮೊರಾರ್ಜಿ ದೇಸಾಯಿ ಯೋಗ ಕೇಂದ್ರ , ಶ್ವಾಸಕೇಂದ್ರ , ಪತಂಜಲಿ ಸಮಿತಿಗಳ ಸಹಯೋಗದಲ್ಲಿ ಹಂಪಿಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಲಿದೆ.
ವಿಜಯನಗರದ ರೂವಾರಿ ಆನಂದ್ ಸಿಂಗ್ ಅವರು ಯೋಗ ದಿನಾಚರಣೆ ನಡೆಸಲು ಸಹಕಾರ ನೀಡಿದ್ದಾರೆ, ಜತೆಗೆ ಪ್ರತಿ ಸ್ಮಾರಕಗಳ ಎದುರು ಕಾರ್ಯಕ್ರಮ ನಡೆಸಲು ಸಲಹೆ ಕೂಡ ನೀಡಿದ್ದಾರೆ. ಹಾಗಾಗಿ ಈ ಯೋಗ ಕಾರ್ಯಕ್ರಮ ಇಡೀ ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ರೂಪಿಸಲಾಗಿದೆ . ಹಾಗಿ ಯೋಗ ಸಾಧಕರು ಆಸಕ್ತಿಯಿಂದ ಯೋಗ ಮಾಡಲು ತರಬೇತಿ ಕೂಡ ಪಡೆಯುತ್ತಿದ್ದಾರೆ. ಹಂಪಿಯ ಸ್ಥಳೀಯರು ಕೂಡ ಸಹಕಾರ ನೀಡಿದ್ದಾರೆ.
ರಾಜ್ಯದ 31 ಜಿಲ್ಲೆಗಳಲ್ಲೂ ಯೋಗ ಅಭಿಯಾನ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಆಸಕ್ತಿ ತೋರಿದ್ದಾರೆ ಎಂದು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
Published On - 9:06 pm, Mon, 9 May 22