ಹೊಸಪೇಟೆಯಲ್ಲಿ ನಟ ಪುನೀತ್ ರಾಜ್ ಕುಮಾರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಬಡಿದಾಟ; ಕುರ್ಚಿ, ಬ್ಯಾರಿಕೇಡ್ಗಳನ್ನು ದಬ್ಬಿ ಹೊಡೆದಾಡಿಕೊಂಡ ಯುವಕರು

ವಿಜಯನಗರದ ಹೊಸಪೇಟೆಯ ತಾಲೂಕು ಕಚೇರಿ ಸಮೀಪದಲ್ಲಿ ಅವರದೇ ಹೆಸರಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಕಂಚಿನ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ.

ಹೊಸಪೇಟೆಯಲ್ಲಿ ನಟ ಪುನೀತ್ ರಾಜ್ ಕುಮಾರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಬಡಿದಾಟ; ಕುರ್ಚಿ, ಬ್ಯಾರಿಕೇಡ್ಗಳನ್ನು ದಬ್ಬಿ ಹೊಡೆದಾಡಿಕೊಂಡ ಯುವಕರು
ಹೊಸಪೇಟೆಯಲ್ಲಿ ನಟ ಪುನೀತ್ ರಾಜ್ ಕುಮಾರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಬಡಿದಾಟ
Updated By: ಆಯೇಷಾ ಬಾನು

Updated on: Jun 05, 2022 | 7:48 PM

ವಿಜಯನಗರ: ದಿವಂಗತ ನಟ ಪುನೀತ್ ರಾಜ್ ಕುಮಾರ್‌( Puneeth Rajkumar Statue) ತಮ್ಮ ಅಪಾರ ಅಭಿಮಾನಿ ಬಳಗವನ್ನು ಬಿಟ್ಟು ಸುಮಾರು 7 ತಿಂಗಳು ಕಳೆದಿದೆ. ಏಳು ತಿಂಗಳಾದ್ರೂ ಅಭಿಮಾನಿಗಳಿಗೆ ಮಾತ್ರ ಅವರನ್ನು ಮರೆಯಲಾಗುತ್ತಿಲ್ಲ. ಇನ್ನೂ ಕೂಡ ತನ್ನ ನೆಚ್ಚಿನ ನಟನ ನೆನಪಿನಲ್ಲಿ ಒಂದಲ್ಲಾವೊಂದು ಕಾರ್ಯಕ್ರಮಗಳನ್ನು ಮಾಡುತ್ತಲೇ ಇದ್ದಾರೆ. ಆದ್ರೆ ಇಂದು ನಡೆದ ಪುನೀತ್ ರಾಜ್ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪುನೀತ್ ಅಭಿಮಾನಿಗಳು ಬಡಿದಾಡಿಕೊಂಡಿದ್ದಾರೆ.

ವಿಜಯನಗರದ ಹೊಸಪೇಟೆಯ ತಾಲೂಕು ಕಚೇರಿ ಸಮೀಪದಲ್ಲಿ ಅವರದೇ ಹೆಸರಿನ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಕಂಚಿನ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಅಪಾರ ಪ್ರಮಾಣದ ಅಭಿಮಾನಿಗಳು ಬ್ಯಾರಿಕೇಡ್ಗಳನ್ನು ದಬ್ಬಿ ತಳ್ಳಾಡಿದ್ದಾರೆ. ಕುರ್ಚಿಗಳನ್ನು ಎತ್ತು ಹಾಕಿ, ಅತಿರೇಕದ ವರ್ತನೆ ಮಾಡಿದ್ದಾರೆ. ಇದನ್ನೂ ಓದಿ: ಎಗ್​ರೈಸ್ ಅಂಗಡಿ ಸೇರಿ ಎರಡು ಕಡೆಗಳಲ್ಲಿ ಸಿಲಿಂಡರ್ ಸ್ಫೋಟ, ಇಬ್ಬರು ಸಾವು!

ಹೊಸಪೇಟೆಯಲ್ಲಿ ನಟ ಪುನೀತ್ ರಾಜ್ ಕುಮಾರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಬಡಿದಾಟ

ಪ್ರತಿಮೆ ಅನಾವರಣಕ್ಕೂ ಮುನ್ನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಈ ವೇಳೆ ಎಲ್ಲೋ ಜೋಗಪ್ಪ ಹಾಡಿಗೆ, ಕುಣಿದು ಕುಪ್ಪಳಿಸುವ ವೇಳೆ ಈ ಘಟನೆ ನಡೆದಿದೆ. ಕುರ್ಚಿಗಾಗಿ ಯುವಕರಲ್ಲಿ ಶುರುವಾದ ಜಗಳದಲ್ಲಿ ಯುವಕರು ಬಡಿದಾಡಿಕೊಂಡಿದ್ದಾರೆ. ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರ ಸಾಹಸ ಪಡುತ್ತಿದ್ದಾರೆ. ಸಮಾರಂಭದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:  ‘ರಾ ರಾ ರಕ್ಕಮ್ಮ’ ಹಾಡಿಗೆ 150 ಮಕ್ಕಳಿಂದ ಮಸ್ತ್​ ಡ್ಯಾನ್ಸ್