Bangalore Bandh Highlights Updates: ಗೊಡ್ಡು ಬೆದರಿಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ ಎಂದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ
Karnataka Bandh Highlights News Updates: ವಿವಿಧ ಈಡೇರಿಕೆಗಾಗಿ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟ ರವಿವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12ರ ವರೆಗೆ ಬೆಂಗಳೂರು ಬಂದ್ಗೆ ಕರೆ ನೀಡಿತ್ತು. ಆದರೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಒಕ್ಕೂಟ ಬಂದ್ ಹಿಂಪಡೆದಿದೆ. ಇತ್ಯಾದಿ ವಿದ್ಯಮಾನಗಳ ಕ್ಷಣ ಕ್ಷಣದ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಲೈವ್ ವೀಕ್ಷಿಸಿ.
ಕರ್ನಾಟಕ ಸರ್ಕಾರ ಜಾರಿಗೆ ಶಕ್ತಿಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ವಾಹನ ಚಾಲಕರು ಮತ್ತು ಮಾಲಿಕರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿದ್ದವು. ಇದೀಗ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಒಕ್ಕೂಟ ಬಂದ್ ಹಿಂಪಡಲಾಗಿದೆ. ಬಳಿಕ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಖಾಸಗಿ ಸಾರಿಗೆ ಕೆಲ ಬೇಡಿಕೆ ಈಡೇರಿಸಲು ಭರವಸೆ ನೀಡಿದ್ದೇನೆ. ಕೆಲವು ಬೇಡಿಕೆಗಳನ್ನು ಈಡೇರಿಸಲು ಸಮಯ ಬೇಕಾಗುತ್ತದೆ. ನಾನೇ ಖಾಸಗಿ ಸಾರಿಗೆಯವರ ಪರ ಇದ್ದೇನೆ. ಯಾವುದೇ ಅನುಮತಿ ಇಲ್ಲದೆ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಸದ್ಯದಲ್ಲೇ ಹೊಸ ಆ್ಯಪ್ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
LIVE NEWS & UPDATES
-
Bangalore Bandh Live Updates: ರಾಜ್ಯ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ ಎಂದ ಬೊಮ್ಮಾಯಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದ್ದಾರೆ. ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಬರ ತಾಲೂಕುಗಳ ಘೋಷಣೆ ಆಗಬೇಕಿತ್ತು. ಜೂನ್‌ನಲ್ಲಿ ಕೇಳಿದರೆ ಜುಲೈ ಅಂತಾರೆ, ಜುಲೈನಲ್ಲಿ ಕೇಳಿದರೆ ಆಗಸ್ಟ್ ಅಂತಾರೆ. ಆಗಸ್ಟ್ ಮುಗಿದು ಸೆಪ್ಟೆಂಬರ್ ಬಂದರೂ ಬರ ಘೋಷಣೆ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
-
Bangalore Bandh Live Updates: ನಾನು ಯಾವತ್ತೂ ಬಕೆಟ್ ಹಿಡಿಯುವ ಕೆಲಸ ಮಾಡಲ್ಲ
-
Bangalore Bandh Live Updates: ಮಾಜಿ ಸಿಎಂ ಕುಮಾರಸ್ವಾಮಿ ಹತಾಶರಾಗಿದ್ದಾರೆ: ಅಜಯ್ ಸಿಂಗ್
ಸಿದ್ದರಾಮಯ್ಯ ವಿಪಕ್ಷ ನಾಯಕ, ಸಿಎಂ ಆಗಿ ಕೆಲಸ ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಹೆಚ್ಡಿಕೆ ತಮ್ಮ ಶಾಸಕರನ್ನು ಉಳಿಸಿಕೊಳ್ಳುವತ್ತ ಗಮನ ಕೊಡಲಿ. ರಾಜ್ಯ ಜನರು ಬಿಜೆಪಿ, ಜೆಡಿಎಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲ ಅಂತಾ ಅವರಿಗೆ ಗೊತ್ತಾಗಿದೆ. ಹೀಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದ ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ.
Bangalore Bandh Live Updates: ಗೌರಿ ಗಣೇಶ ಹಬ್ಬದ ಪ್ರಯುಕ್ತ KSRTCಯಿಂದ ಹೆಚ್ಚುವರಿ ಬಸ್ ವ್ಯಸ್ಥೆ
ಗೌರಿ ಗಣೇಶ ಹಾಗೂ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 1200 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ವಾರಾಂತ್ಯ ದಿನಗಳಾದ ಸೆಪ್ಟೆಂಬರ್ 15, 16 ಮತ್ತು ಗೌರಿ ಗಣೇಶ ಹಬ್ಬದ ಪ್ರಯುಕ್ತ 18ರಂದು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಹಲವು ಸ್ಥಳಗಳಿಗೆ 1200 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ 1200 ಹೆಚ್ಚುವರಿ ಬಸ್; ಇಲ್ಲಿದೆ ವಿವರ
Bangalore Bandh Live Updates: ಏರ್ಪೋರ್ಟ್ಗೆ ನಾಡಪ್ರಭು ಕೆಂಪೇಗೌಡರ ಹೆಸರಿಟ್ಟಿದ್ದು ನಾವೇ
ಮೊದಲ ಬಾರಿಗೆ ಕೆಂಪೇಗೌಡ ಜಯಂತಿ ಮಾಡಿದ್ದು ನಮ್ಮ ಸರ್ಕಾರ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಸಹ ನಮ್ಮ ಸರ್ಕಾರ. ಏರ್ಪೋರ್ಟ್ಗೆ ನಾಡಪ್ರಭು ಕೆಂಪೇಗೌಡರ ಹೆಸರಿಟ್ಟಿದ್ದು ನಾವೇ. ಶ್ರೀಗಳು ನನ್ನ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. ಬಾಲಗಂಗಾಧರನಾಥಶ್ರೀ, ನಿರ್ಮಲಾನಂದನಾಥಶ್ರೀಗೆ ಚಿರಋಣಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Bangalore Bandh Live Updates: ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಲಿ-ಎಂ.ಬಿ.ಪಾಟೀಲ್
ಬಿ.ಕೆ.ಹರಿಪಸ್ರಾದ್ ಪಕ್ಷಕ್ಕಿಂತ ದೊಡ್ಡವರಲ್ಲ. ನಾನೇ ಆಗಲಿ, ಸಿದ್ದರಾಮಯ್ಯ ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ. ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸಲಿ. ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
Bangalore Bandh Live Updates: ಸಿದ್ದರಾಮಯ್ಯನವರ ಮಾತು ಯಾವುದೇ ಬಣ್ಣ ಕಟ್ಟಿದ ಮಾತಲ್ಲ
ಸಿದ್ದರಾಮಯ್ಯನವರ ಮಾತು ಯಾವುದೇ ಬಣ್ಣ ಕಟ್ಟಿದ ಮಾತಲ್ಲ. ಅವರು ಏನೇ ಹೇಳಿದರು ನೇರವಾಗಿ ಹೇಳುತ್ತಾರೆ ಎಂದು ಮೈಸೂರಿನಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. ಕೆಂಪೇಗೌಡ ಜಯಂತಿ ಆಚರಣೆಗೆ ಸಿದ್ದರಾಮಯ್ಯ ಅವರೇ ಕಾರಣ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಜಾರಿಮಾಡಿದ್ದು ಇದೇ ಸಿದ್ದರಾಮಯ್ಯ ಎಂದಿದ್ದಾರೆ.
Bangalore Bandh Live Updates: ಬಿ.ಕೆ.ಹರಿಪ್ರಸಾದ್ ವಿರುದ್ಧ ಮತ್ತೆ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ
ಹರಿಪ್ರಸಾದ್ ಹಲವು ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡ್ತಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ಹೇಳಿಕೆ ಶೋಭೆ ತರುವುದಿಲ್ಲ. ಸೋನಿಯಾ, ರಾಹುಲ್, ಖರ್ಗೆ ಜೊತೆ ನೇರ ಸಂಪರ್ಕದಲ್ಲಿ ಇದ್ದಾರೆ. ಏನಾದರೂ ಇದ್ದರೆ ವರಿಷ್ಠರ ಬಳಿಯೇ ನೇರವಾಗಿ ಹೇಳಬಹುದು ಎಂದು ಬಿ.ಕೆ.ಹರಿಪ್ರಸಾದ್ ವಿರುದ್ಧ ಮತ್ತೆ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ಮಾಡಿದ್ದಾರೆ.
Bangalore Bandh Live Updates: ಬರ ಪರಿಹಾರ ಘೋಷಣೆ ಬಗ್ಗೆ ಸರ್ಕಾರ ಕುಂಟು ನೆಪ
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬರ ಪರಿಹಾರ ಘೋಷಣೆ ಬಗ್ಗೆ ಸರ್ಕಾರ ಕುಂಟು ನೆಪ ಹೇಳುತ್ತಿದ್ದಾರೆ. ಬರ ಘೋಷಣೆ ಸಂಬಂಧ ಹಿಂದಿನಿಂದಲೂ ಇದೇ ನಿಯಮ ಇದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರ ಘೋಷಣೆ ಮಾಡಲಿಲ್ಲವೇ ಎಂದು ಬೊಮ್ಮಾಯಿ ವಾಗ್ದಾಳಿ ಮಾಡಿದ್ದಾರೆ.
Bangalore Bandh Live Updates: ಬೆಳಗಾವಿ, ಖಾನಾಪುರ ಬರಪೀಡಿತ ತಾಲೂಕು ಘೋಷಣೆಗೆ ಒತ್ತಾಯ
ಬೆಳಗಾವಿ, ಖಾನಾಪುರ ಬರಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ಮಾಡಿದ್ದಾರೆ. ರಾಜ್ಯ ಸರ್ಕಾರ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಉಳಿದ ತಾಲೂಕು ಬರಪೀಡಿತ ಅಂತಾ ವರದಿ ಸಲ್ಲಿಕೆ ಹಿನ್ನೆಲೆ ಕೃಷಿ ಇಲಾಖೆ ಅಧಿಕಾರಿಗಳ ಧೋರಣೆ ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗಿದೆ.
Bangalore Bandh Live Updates: ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆ!
Bangalore Bandh Live Updates: ಬಂದ್ ಮುಗಿಸಿ ಕೆಲಸಕ್ಕೆ ಹಾಜಾರಾದ ಆಟೋ ಚಾಲಕರು
ಖಾಸಗಿ ಸಾರಿಗೆ ಒಕ್ಕೂಟ ಬಂದ್ ಅನ್ನು ಹಿಂಪಡೆದ ಹಿನ್ನೆಲೆ ಬೆಂಗಳೂರು ಸಹಜ ಸ್ಥಿತಿಯತ್ತ ಮರಳಿದೆ. ಬಂದ್ ಮುಗಿಸಿ ಆಟೋ ಚಾಲಕರು ಕೆಲಸಕ್ಕೆ ಹಾಜಾರಾಗಿದ್ದು, ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಆಟೋಗಳು ರಸ್ತೆಗಿಳಿದಿವೆ. ಬೇಡಿಕೆ ಇಡೇರಿಕೆಯ ಭರವಸೆಯನ್ನ ನೀಡುತ್ತಿದ್ದಂತೆ ಕರ್ತವ್ಯಕ್ಕೆ ಹಾಜಾರ್ ಆಗಿದ್ದಾರೆ.
Bangalore Bandh Live Updates: ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆದೇಶಕ್ಕೆ ತಡೆ ಇಲ್ಲ
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಆಯ್ಕೆ ಅಸಿಂಧು ಆದೇಶವನ್ನು ಅಮಾನತುಗೊಳಿಸಲು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆ ಮೂಲಕ ಪ್ರಜ್ವಲ್ ರೇವಣ್ಣಗೆ ಮಧ್ಯಂತರ ರಿಲೀಫ್ ನೀಡಲು ಹೈಕೋರ್ಟ್ ನಕಾರವೆತ್ತಿದೆ. ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆದೇಶಕ್ಕೆ ‘ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಕೆವರೆಗೆ ತಡೆ ನೀಡಲು ಮನವಿ ಮಾಡಿದ್ದರು.
ಅಸಿಂಧು ಆದೇಶಕ್ಕೆ ತಡೆ ಇಲ್ಲ: ಸಂಸದ ಪ್ರಜ್ವಲ್ ರೇವಣ್ಣ ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bangalore Bandh Live Updates: 32ರಲ್ಲಿ 27 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರ ಭರವಸೆ
ಬಂದ್ ಹಿಂಪಡೆದು ಬಳಿಕ ಮಾತನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ, 32ರಲ್ಲಿ 27 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಹಾಗಾಗಿ ಬಂದ್ ಹಿಂಪಡೆಯುತ್ತಿದ್ದೇವೆ. ಟ್ಯಾಕ್ಸ್ ಕಡಿಮೆ ಬಗ್ಗೆಯೂ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ನಾಡಿದ್ದು ಮತ್ತೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
Bengaluru Bandh Live: ಬೆಂಗಳೂರು ಬಂದ್ ಹಿಂಪಡೆದ ಖಾಸಗಿ ಸಾರಿಗೆ ಸಂಘಟನೆಗಳು
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟಗಳು ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಇವುಗಳನ್ನು ಈಡೇರಿಸುವಂತೆ ಇಂದು ಪ್ರತಿಭಟನೆ ನಡೆಸಿ, ಬೆಂಗಳೂರು ಬಂದ್ಗೆ ಕರೆ ನೀಡಿದ್ದವು. ಇದೀಗ ಒಟ್ಟಕೂಟಗಳು ಬಂದ್ ಕರೆ ಹಿಂಪಡೆದಿವೆ.
Bengaluru Bandh Live: ಫ್ರೀಡಂ ಪಾರ್ಕ್ ವೇದಿಕೆಗೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ
ಬೆಂಗಳೂರು: ನಗರದ ಫ್ರೀಡಂಪಾರ್ಕ್ನಲ್ಲಿ ಖಾಸಗಿ ವಾಹನ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದು, ಸ್ಥಳಕ್ಕೆ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆ ಅಧಿಕಾರಿಗಳಾದ ಯೋಗೇಶ್, ಎನ್.ವಿ.ಪ್ರಸಾದ್ ಭೇಟಿ ನೀಡಿದ್ದಾರೆ.
Bengaluru Bandh Live: ರಸ್ತೆಗಿಳಿದ ರ್ಯಾಪಿಡೋ ಬೈಕ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ
ಬೆಂಗಳೂರು: ಮಡಿವಾಳ ಅಂಡರ್ ಪಾಸ್ನಲ್ಲಿ ಕರ್ತವ್ಯನಿರತ ರ್ಯಾಪಿಡೋ ಬೈಕ್ ಚಾಲಕನನ್ನು ತಡೆದು ನಿಲ್ಲಿಸಿ ಆಟೋ ಚಾಲಕರು ಹಲ್ಲೆ ಮಾಡಿದ್ದಾರೆ. ಅಲ್ಲದೇ ಬೈಕ್ನ ಗ್ಲಾಸ್ ಒಡೆದಿದ್ದಾರೆ. ಗಾಡಿಯನ್ನು ಸಂಪೂರ್ಣ ಜಖಂಗೊಳಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
Bengaluru Bandh Live: ಬಿಎಂಟಿಸಿ ಬಸ್ನಲ್ಲಿ ಮನೆಗೆ ತೆರಳಿದ ಅನಿಲ್ ಕುಂಬ್ಳೆ
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರದ ಬಿಸಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೆ ತಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮನೆಗೆ ಹೋಗಲು ಕ್ಯಾಬ್ ಸಿಗದೆ, ಬಿಎಂಟಿಸಿ ಬಸ್ನಲ್ಲಿ ಮನೆಗೆ ಕಡೆ ಪ್ರಯಾಣ ಬೆಳಸಿದ್ದಾರೆ .
Bengaluru Bandh Live: ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಈಡೇರಿಸಲು ಆಗುವುದಿಲ್ಲ; ಸಿಎಂ
ಮೈಸೂರು: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟ ಮುಷ್ಕರ ನಡೆಸುತ್ತಿದ್ದು, ಬಂದ್ ಮಾಡಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ನಾವು ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿ ತಂದಿದ್ದೇವೆ. ಅದರಿಂದ ಖಾಸಗಿ ಬಸ್ನವರು ನಷ್ಟ ಆಗಿದೆ ಎನ್ನುತ್ತಿದ್ದಾರೆ. ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಇದೆ. ಸಾರಿಗೆಯವರ ಈ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Bengaluru Bandh Live: ಓಲಾ, ಉಬರ್ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ; ಡಿಸಿಎಂ
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟಕ್ಕೆ ಹೋರಾಟ ಮಾಡುವ ಹಕ್ಕು ಇದೆ. ಖಾಸಗಿ ಬಸ್, ಆಟೋ ಚಾಲಕರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಓಲಾ, ಉಬರ್ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
Bengaluru Bandh Live: ಫ್ರೀಡಂಪಾರ್ಕ್ ತಲುಪಿದ ಖಾಸಗಿ ವಾಹನ ಸಂಘಟನೆಗಳು
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದ ಮುಷ್ಕರ ರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭವಾಗಿದ್ದು, ಹಲವು ಖಾಸಗಿ ವಾಹನ ಸಂಘಟನೆಗಳು ಫ್ರೀಡಂಪಾರ್ಕ್ ತಲುಪಿವೆ. ಫ್ರೀಡಂಪಾರ್ಕ್ನಲ್ಲಿ ಖಾಸಗಿ ವಾಹನ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
Bengaluru Bandh Live: ಬಂದ್ ನಡುವೆಯೂ ಆಟೋ ಚಲಾಯಿಸಿದ್ದಕ್ಕೆ ಚಾಲಕನ ಮೇಲೆ ಪ್ರತಿಭಟನಾನಿರತರಿಂದ ಹಲ್ಲೆ
ಬೆಂಗಳೂರು: ಬಂದ್ ನಡುವೆಯೂ ಆಟೋ ಚಲಾಯಿಸಿದ್ದಕ್ಕೆ ಚಾಲಕನ ಮೇಲೆ ಪ್ರತಿಭಟನಾನಿರು ಹಲ್ಲೆ ಮಾಡಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿ ಬಾಡಿಗೆ ಓಡಿಸಿದ್ದಕ್ಕೆ ಥಳಿಸಲಾಗಿದೆ. ಹಲ್ಲೆಯಿಂದ ಆಟೋ ಚಾಲಕನ ಭುಜಕ್ಕೆ ಗಾಯವಾಗಿದೆ.
Bengaluru Bandh Live: ಶಕ್ತಿ ಯೋಜನೆಯಿಂದ ಆದ ನಷ್ಟಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ; ರಾಮಲಿಂಗಾ ರೆಡ್ಡಿ
ಬೆಂಗಳೂರು: ಸಾರಿಗೆ ಸಂಸ್ಥೆಗಳ ಬೇಡಿಕೆ ಎಲ್ಲವೂ ಈಗಿನದ್ದಲ್ಲ. ಕಳೆದ ನಾಲ್ಕೈದು ವರ್ಷಗಳ ಹಳೆಯ ಬೇಡಿಕೆಗಳು ಅವು. ಟ್ಯಾಕ್ಸ್ ಹೆಚ್ಚಳ ಮತ್ತು ಶಕ್ತಿ ಯೋಜನೆ ಮಾತ್ರ ನಮ್ಮ ಸರ್ಕಾರ ಬಂದ ಮೇಲೆ ಆಗಿರುವುದು. ಮುಖ್ಯಮಂತ್ರಿಗಳು ಸಭೆ ಕರೆದಾಗ ಸಾರಿಗೆ ಸಂಘಗಳು ಬರಲಿಲ್ಲ. ಕಾನೂನಾತ್ಮಕವಾಗಿ ಏನು ಈಡೇರಿಸಲು ಸಾಧ್ಯ ಈಡೇರಿಸುತ್ತೇವೆ. ಸಾರಿಗೆ ಚಾಲಕರ ಪರವಾಗಿಯೇ ನಾನು ಇರುವವನು. ಶಕ್ತಿ ಯೋಜನೆಯಿಂದ ನಷ್ಟ ಆಗಿದೆ ಪರಿಹಾರ ಕೊಡಿ ಅಂತಿದ್ದಾರೆ. ಅದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ನಮ್ಮ ಶಕ್ತಿ ಯೋಜನೆ ಇರುವುದೇ ಬಜೆಟ್ ನಲ್ಲಿ 2500 ಕೋಟಿ rU. ಸಾರಿಗೆ ಚಾಲಕರು 3 ಲಕ್ಷ ಮಂದಿ ಇದ್ದಾರೆ. ಅವರ ಬೇಡಿಕೆ ಪ್ರಕಾರ ಪರಿಹಾರ ಕೊಟ್ಟರೇ ಅದೆ 5009 ಕೋಟಿ ರೂ. ಆಗುತ್ತದೆ. ಇದನ್ನು ಈಡೇರಿಸಲು ಸಾಧ್ಯಾನಾ ? ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.
Bengaluru Bandh Live: ಮಡಿವಾಳದಿಂದ ಹೊರಟ ಖಾಸಗಿ ವಾಹನ ಚಾಲಕರ ರ್ಯಾಲಿ
ಬೆಂಗಳೂರು: ನಗರದಲ್ಲಿ ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ ನಡೆಯುತ್ತಿದ್ದು, ಮಡಿವಾಳದಿಂದ ಖಾಸಗಿ ವಾಹನ ಚಾಲಕರು ರ್ಯಾಲಿ ಹೊರಟಿದ್ದಾರೆ. ವಿವಿಧ ಬೇಡಿಕೆ ಈಡೇರಿಸುವಂತೆ ಆಟೋ ಚಾಲಕರು ಪ್ರತಿಭಟನೆ ಮಾಡುತ್ತಿದ್ದಾರೆ. ಮಡಿವಾಳದಿಂದ ಫ್ರೀಡಂಪಾರ್ಕ್ವರೆಗೆ ಪ್ರತಿಭಟನೆ ನಡೆಸಲಿದ್ದಾರೆ.
Bengaluru Bandh Live: ಗಡಿಭಾಗದಲ್ಲಿ ವಾಹನಗಳನ್ನ ತಡೆ ಹಿಡಿಯುತ್ತಿದ್ದವರನ್ನ ಚದುರಿಸಿದ ಪೋಲೀಸರು
ಆನೆಕಲ್: ಅತ್ತಿಬೆಲೆ ಗಡಿಭಾಗದಲ್ಲಿ ವಾಹನಗಳನ್ನ ತಡೆದು ವಾಪಸ್ ಕಳುಹಿಸುತ್ತಿದ್ದ ಪ್ರತಿಭಟನಾಕಾರರನ್ನು ಪೋಲೀಸರು ಚದುರಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವಾಹನಗಳನ್ನು ತಡೆದರೇ ಕೇಸ್ ಮಾಡುವುದಾಗಿ ವಾರ್ನಿಂಗ್ ಮಾಡಿದರು.
Bengaluru Bandh Live: ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ರಿಪೇಯ್ಡ್ ಆಟೋ, ಕ್ಯಾಬ್ ಬಂದ್
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ರಿಪೇಯ್ಡ್ ಆಟೋ, ಕ್ಯಾಬ್ ಚಾಲಕರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರಿಪೇಯ್ಡ್ ಆಟೋ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
Bengaluru Bandh Live: ಬಂದ್ಗೆ ಬೆಂಬಲ ನೀಡದೇ ರಸ್ತೆಗಿಳಿದ ಚಾಲಕರಿಗೆ ಮೊಟ್ಟೆ ಎಸೆತ
ಬೆಂಗಳೂರು: ಬಂದ್ಗೆ ಬೆಂಬಲ ನೀಡದೇ ರಸ್ತೆಗಿಳಿದ ಕ್ಯಾಬ್ಗೆ ಚಾಲಕರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ.
Bengaluru Bandh Live: ಬಂದ್ಗೆ ಉತ್ತರ ಕನ್ನಡ ಜಿಲ್ಲೆಯ ಖಾಸಗಿ ಸಾರಿಗೆ ಸಂಘಟನೆಗಳಿಂದ ಬೆಂಬಲ
ಕಾರವಾರ: ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಖಾಸಗಿ ಸಾರಿಗೆ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಕಾರವಾರದಲ್ಲೂ ಆಟೋ,ಟೆಂಪೋಗಳು,ಟ್ಯಾಕ್ಸಿಗಳು ಬಂದ್ ಆಗಿವೆ. ಆಟೋಗಳಿಲ್ಲದೇ ಬದಲಿ ವಾಹನಕ್ಕಾಗಿ ಪ್ರಯಾಣಿಕರು ಕಾದುನಿಂತಿದ್ದಾರೆ.
Bengaluru Bandh Live: ಬಂದ್ಗೆ ಮೆಜೆಸ್ಟಿಕ್ ಆಟೋ ಸಂಘ ಬೆಂಬಲ
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದ ಮುಷ್ಕರಕ್ಕೆ ಮೆಜೆಸ್ಟಿಕ್ ಆಟೋ ಸಂಘ ಬೆಂಬಲ ವ್ಯಕ್ತಪಡಿಸಿದೆ. ಮೆಜೆಸ್ಟಿಕ್ ಸುತ್ತಮುತ್ತ ಆಟೋ ಸಂಚಾರ ಸಂಪೂರ್ಣ ಬಂದ್ ಆಗಿದೆ. ಕೆಎಸ್ಆರ್ಟಿಸಿ ಆಟೋ ಸ್ಟ್ಯಾಂಡ್ ನಲ್ಲಿ ಒಂದು ಆಟೋ ಕೂಡ ಇಲ್ಲ.
Bengaluru Bandh Live: ಬಂದ್ ಇದ್ದರೂ ಸಂಚರಿಸುತ್ತಿರುವ ಆಟೋ, ಕ್ಯಾಬ್ಗಳ ಚಾಲಕರ ವಿರುದ್ಧ ಆಕ್ರೋಶ
ಬೆಂಗಳೂರು: ಇಂದು ಖಾಸಗಿ ಸಾರಿಗೆ ವಾಹನ ಬಂದ್ ಹಿನ್ನೆಲೆಯಲ್ಲಿ ಜಾಲಹಳ್ಳಿ ಕ್ರಾಸ್ ಬಳಿ ಆಟೋ ಚಾಲಕರು ವಾಹನಗಳನ್ನು ತಡೆಯುತ್ತಿದ್ದಾರೆ. ಬಾಡಿಗೆ ಹೊಡೆಯುತ್ತಿದ್ದ ಆಟೋ, ಕ್ಯಾಬ್ಗಳನ್ನು ತಡೆದು ಚಾಲಕರಿಗೆ ತರಾಟೆಗೆ ತೆಗೆದುಕೊಂಡರು.
Bengaluru Bandh Live: ಬೆಳಿಗ್ಗೆ ಏಳು ಗಂಟೆಯಿಂದ ಆಟೋ ಸಂಚಾರ ವಿರಳ
ಬೆಂಗಳೂರು: ನಗರದಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಆಟೋ ಸಂಚಾರ ವಿರಳವಾಗಿದೆ. ನಸುಕಿನ ಜಾವ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಪಿಕ್ ಆಪ್ ಮಾಡುತ್ತಿದ್ದ ಆಟೋ ಚಾಲಕರು ಈಗ ಸಂಚಾರ ನಿಲ್ಲಿಸಿದ್ದಾರೆ.
Bengaluru Bandh Live: ಬೆಂಗಳೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಓಡಾಟ
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಇದ್ದರೂ ಬೆಂಗಳೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಓಡಾಟ ನಡೆಯುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೊಮ್ಮಸಂದ್ರದಲ್ಲಿ ಖಾಸಗಿ ವಾಹನಗಳ ಸಂಚರಿಸುತ್ತಿವೆ.
Bengaluru Bandh Live: ಕೆಎಸ್ಟಿಡಿಸಿ ಟ್ಯಾಕ್ಸಿ ಓಡಾಟ ಹಿನ್ನಲೆ ಕಾರ್ಗೆ ಕಲ್ಲು ತೂರಿದ ಕಿಡಿಗೇಡಿಗಳು
ಬೆಂಗಳೂರು: ಕೆಎಸ್ಟಿಡಿಸಿ ಟ್ಯಾಕ್ಸಿ ಓಡಾಟ ಹಿನ್ನಲೆಯಲ್ಲಿ ಕಾರ್ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ತಡರಾತ್ರಿ ಘಟನೆ ನಡೆದಿದೆ. ಖಾಸಗಿ ಸಾರಿಗೆ ಒಕ್ಕೂಟ ಪ್ರತಿಭಟನೆ ಹಿನ್ನಲೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕಾರಿಗೆ ಕಲ್ಲು ತೂರಲಾಗಿದೆ. ಕಲ್ಲು ತೂರಿದ ಹಿನ್ನೆಲೆಯಲ್ಲಿ ಕಾರಿನ ಗ್ಲಾಸ್ ಪುಡಿಪುಡಿಯಾಗಿದೆ. ಸದ್ಯ ಚಿಕ್ಕಜಾಲ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Bengaluru Bandh Live: ಆಟೋ ಚಾಲಕರ ಪ್ರತಿಭಟನೆಗೆ ಪೊಲೀಸರು ಅಡ್ಡಿ
ಬೆಂಗಳೂರು: ಆಟೋ ಚಾಲಕರ ಪ್ರತಿಭಟನೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಜಾಲಹಳ್ಳಿ ಕ್ರಾಸ್ನಲ್ಲಿ ಸಂಚಾರಕ್ಕೆ ಅಡ್ಡಿ ಪಡಿಸಿದಂತೆ ಅಟೋ ಚಾಲಕರಿಗೆ ಎಚ್ಚರಿಕೆ ನೀಡಿದರು.
Bengaluru Bandh Live: ಬಂದ್ಗೆ ಒಲಾ ಚಾಲಕರು ಬೆಂಬಲ
ಬೆಂಗಳೂರು: ಬಂದ್ಗೆ ಒಲಾ ಚಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಾ ಜೋನ್ಗೆ ಟ್ಯಾಕ್ಸಿಗಳು ಬಂದಿಲ್ಲ. ಇನ್ನು ಟ್ಯಾಕ್ಸಿಗಳಿಗಾಗಿ ಜನರು ಕಾದು ಕುಳಿತಿದ್ದಾರೆ. ಬೆರಳಿಕೆಯಷ್ಟು ಟ್ಯಾಕ್ಸಿ ಚಾಲಕರು ಮಾತ್ರ ಆಗಮಿಸಿದ್ದಾರೆ.
Bengaluru Bandh Live: ಕಲಾಸಿಪಾಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ 250ಕ್ಕೂ ಹೆಚ್ಚು ಬಸ್ ನಿಲುಗಡೆ
ಬೆಂಗಳೂರು: ನಗರದಲ್ಲಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಮುಷ್ಕರ ಹಿನ್ನೆಲೆಯಲ್ಲಿ ಕಲಾಸಿಪಾಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ 250ಕ್ಕೂ ಹೆಚ್ಚು ಬಸ್ಗಳು ರಸ್ತೆಗೆ ಇಳಿದಿಲ್ಲ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ಗೆ ಭಾರಿ ಹೊಡೆತ ಬಿದ್ದಿದೆ ಎಂದು ಖಾಸಗಿ ಬಸ್ ಮಾಲಿಕರು ಮತ್ತು ಚಾಲಕರು ಅಳಲು ತೋಡಿಕೊಂಡಿದ್ದಾರೆ.
Published On - Sep 11,2023 7:03 AM