Bangalore: ನಗರ ಪೊಲೀಸ್ ಆಯುಕ್ತರಿಂದ ಹೊಸ ಆದೇಶ; ಹೊಟೇಲ್ ಮಾಲೀಕರಿಗೆ ಅಸಮಾಧಾನ, ರೆಸ್ಟೋರೆಂಟ್ ಮಾಲೀಕರಿಗೆ ಸಂತಸ
ರಾತ್ರಿ 1 ಗಂಟೆ ನಂತರ ಹೊಟೇಲ್ ತೆರೆಯದಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಹೊಟೇಲ್ ಮಾಲಿಕರು ಅಸಮಾಧಾನ ಹೊರಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಸಿಎಂ ಜೊತೆ ಚರ್ಚಿಸಲು ತೀರ್ಮಾನಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಹೋಟೆಲ್ ತೆರೆಯಲು ಮಾತ್ರ ಅವಕಾಶ ನೀಡಿರುವ ಕ್ರಮಕ್ಕೆ ಬೆಂಗಳೂರು ಹೊಟೇಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ರಾತ್ರಿ 1 ಗಂಟೆ ನಂತರ ಹೊಟೇಲ್ ತೆರೆಯದಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ನಿಸರ್ಗ ಹೋಟೆಲ್ ಮಾಲೀಕ ಕೃಷ್ಣರಾಜ್, ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ನೀಡಬೇಕು ಎಂಬ ಬೇಡಿಕೆ ನಮ್ಮದಾಗಿತ್ತು. ಆದರೆ ರಾತ್ರಿ 1 ರವರೆಗೆ ಮಾತ್ರ ಅನುಮತಿ ನೀಡಿರುವುದು ಹೊಸ ಆದೇಶವೇನು ಅಲ್ಲ. 2016ರಲ್ಲೇ ಸರ್ಕಾರ ಈ ಆದೇಶ ಹೊರಡಿಸಿತ್ತು. ಆದರೆ ಕೋವಿಡ್ ನಿಯಮಾವಳಿ ಹಿನ್ನೆಲೆ ಪೊಲೀಸರು ಬೇಗ ಮುಚ್ಚಿಸುತ್ತಿದ್ದರು. ಈಗಿನ ಆದೇಶದಲ್ಲಿ ಹೊಸ ಅಂಶಗಳೇನು ಇಲ್ಲ. ನಮ್ಮ ಬೇಡಿಕೆ 24/7 ಹೋಟೆಲ್ ತೆರೆಯಲು ಅನುಮತಿ ಕೋರಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡುವ ಕುರಿತು ಚರ್ಚೆ ಮಾಡಲಾಗುವುದು ಎಂದರು.
ಪೊಲೀಸ್ ಆಯುಕ್ತರಿಂದ ಮತ್ತೊಂದು ಆದೇಶ
ಮಧ್ಯ ಮಾರಟ ನಿಷೇಧ ಅವಧಿ ವೇಳೆಗಳಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಗರ ಪೊಲೀಸ್ ಆಯುಕ್ತರು ಹೊಸ ಆದೇಶ ಹೊರಡಿಸಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಮಧ್ಯ ಮಾರಾಟ ನಿಷೇಧಾಜ್ಞೆ ಜಾರಿ ಮಾಡಲಾಗುತಿತ್ತು. ಈ ಸಂದರ್ಭದಲ್ಲಿ ಬಾರ್ ಮತ್ತು ರೆಸ್ಟೊರೆಂಟ್ಗಳನ್ನು ಮುಚ್ಚಿಸಲಾಗುತಿತ್ತು. ಆದರೆ ಆಯುಕ್ತರ ಹೊಸ ಆದೇಶದ ಪ್ರಕಾರ, ಬಾರ್ ಮುಚ್ಚುವ ಪ್ರಕ್ರಿಯೆ ಮುಂದುವರಿಯಲಿದೆ. ಆದರೆ ರೆಸ್ಟೋರೆಂಟ್ಗಳಿಗೆ ಆಹಾರ ಪದಾರ್ಥಗಳ ಸರಬರಾಜಿಗೆ ಅನುಮತಿ ನೀಡಲಾಗಿದೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿಗೆ ಆಗಮಿಸಿದ ಹೊಸ ಮೆಟ್ರೋ ರೈಲು ಕೋಚ್‌ಗಳು
ಹೊಸ ಮೆಟ್ರೋ ರೈಲಿನ ಕೋಚ್‌ಗಳು ಇಂದು ಬೆಳಗ್ಗೆ ವೈಟ್ ಫೀಲ್ಡ್ ಡಿಪೋಗೆ ಆಗಮಿಸಿವೆ. ಒಂದು ಕೋಚ್ಗೆ ಸುಮಾರು 9 ಕೋಟಿ ಬೆಲೆ ಬಾಳುತ್ತವೆ. ಇಂತಹ ಒಟ್ಟು ಆರು ಕೋಚ್ಗಳನ್ನು ಬಿಇಎಂಎಲ್ ಸಿದ್ದಪಡಿಸಿದ್ದು, ಇವುಗಳನ್ನು ಒಟ್ಟುಗೂಡಿಸಿದರೆ ಒಂದು ಮೆಟ್ರೋ ರೈಲು ಆಗಲಿದೆ. ಸದ್ಯ ಒಂದು ರೈಲಿನ ಕೋಚ್‌ಗಳು ಆಗಮಿಸಿದ್ದು, ಇಂತಹ 7 ರೈಲುಗಳನ್ನು ಬಿಇಎಂಎಲ್ ಸಿದ್ಧಪಡಿಸುತ್ತಿದೆ. ಸದ್ಯ ಅನ್‌ಲೋಡ್ ಮಾಡಲಾದ ಕೋಚ್ಗಳನ್ನು ಬಿಇಎಂಎಲ್ ಸಿಬ್ಬಂದಿಗಳು ಜೋಡಿಸಲಿದ್ದಾರೆ.
ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Sat, 15 October 22