ಕೊರೊನಾ ಟೆಸ್ಟ್ ಕಳ್ಳಾಟದ ವಿಡಿಯೋ ವೈರಲ್; ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ವಜಾ

ಇಂತಹ ಘಟನೆ ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ. ಈ ಘಟನೆಯನ್ನು ನಾವು ಸಮರ್ಥಿಸಿಕೊಳ್ಳಲು ಆಗಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕೆಲಸದಿಂದ ಕೂಡಲೇ ಆತನನ್ನು ವಜಾಗೊಳಿಸಲಾಗಿದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಕೊರೊನಾ ಟೆಸ್ಟ್ ಕಳ್ಳಾಟದ ವಿಡಿಯೋ ವೈರಲ್; ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ವಜಾ
ಕೊವಿಡ್ ಟೆಸ್ಟ್​ನ ಕಳ್ಳಾಟದ ವಿಡಿಯೋದ ದೃಶ್ಯಗಳು
Follow us
guruganesh bhat
|

Updated on:Apr 10, 2021 | 5:02 PM

ಬೆಂಗಳೂರು: ಕೊವಿಡ್ ಟೆಸ್ಟ್ ಟಾರ್ಗೆಟ್ ನೀಡಿದ್ದಕ್ಕೆ ಬಿಬಿಎಂಪಿ ಗುತ್ತಿಗೆ ಆಧಾರಿತ ಸಿಬ್ಬಂದಿ ಕಳ್ಳದಾರಿ ಹಿಡಿದ ಪ್ರಕರಣ ಗಂಭೀರ ತಿರುವು ಪಡೆದಿದೆ.  ಕೊವಿಡ್ ಟೆಸ್ಟ್​ಗೆ ನಿಗದಿಯಂತೆ ಗಂಟಲು ದ್ರವ ಸಂಗ್ರಹಿಸಿ ಕಳಿಸಬೇಕು. ಆದ್ರೆ ಲಿಕ್ವಿಡ್​ಗೆ ಖಾಲಿ ಕಡ್ಡಿ ಹಾಕಿ ಟೆಸ್ಟಿಂಗ್​ಗೆ ಕಳಿಸಿದ ಸಿಬ್ಬಂದಿಯ ಕಳ್ಳಾಟ ನಿನ್ನೆ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಯಲಹಂಕ ವಲಯದ ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ಟೆಸ್ಟಿಂಗ್ ಮಾಡದೇ ಯಾರದೋ ಹೆಸರು ಹಾಕಿ ಲ್ಯಾಬ್​ಗೆ ರವಾನೆ ಮಾಡುತ್ತಿರುವ ಎಡವಟ್ಟು ನಿನ್ನೆ ಬಯಲಾಗಿತ್ತು. ಕೋಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ಖಾಲಿ ಕಡ್ಡಿಯನ್ನು ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿತ್ತು. ಇಂದು ಕಳ್ಳಾಟ ಆಡಿ ಆತಂಕ ಸೃಷ್ಟಿಸಿದ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿದೆ.

ಕೊವಿಡ್ ಟೆಸ್ಟ್‌ ವೇಳೆ ಬಿಬಿಎಂಪಿ ಸಿಬ್ಬಂದಿ ಕಳ್ಳಾಟವಾಡಿದ ವಿಚಾರವಾಗಿ ನಿನ್ನೆಯೇ ಸಿಬ್ಬಂದಿಯನ್ನು ವಜಾಗೊಳಿಸಿದ್ದೇವೆ. ಎಫ್‌ಐಆರ್ ಸಹ ಹಾಕಲಾಗಿದೆ, ತನಿಖೆ ನಡೆಸಲಾಗುತ್ತಿದೆ. ಇಂತಹ ಘಟನೆ ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ. ಈ ಘಟನೆಯನ್ನು ನಾವು ಸಮರ್ಥಿಸಿಕೊಳ್ಳಲು ಆಗಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕೆಲಸದಿಂದ ಕೂಡಲೇ ಆತನನ್ನು ವಜಾಗೊಳಿಸಲಾಗಿದೆ. ಮಾಹಿತಿ ಬಂದ ತಕ್ಷಣ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಕೊವಿಡ್ ಟೆಸ್ಟ್ ವೇಳೆ ಕಳ್ಳಾಟ ಆಡಿ ಆತಂಕ ಸೃಷ್ಟಿಸಿದ್ದ ಸಿಬ್ಬಂದಿಗಳನ್ನು ವಜಾಮಾಡಿದ್ದಾರೆ.

ಇದೀಗ ಬಿಬಿಎಂಪಿ ಸಿಬ್ಬಂದಿಗಳು ಕೊವಿಡ್ ಟೆಸ್ಟ್ ವೇಳೆ ಕಳ್ಳಾಟವಾಡಿದ ಪ್ರಕರಣ ತಿರುವು ಪಡೆದಂತಾಗಿದೆ.  ಕೊವಿಡ್ ಟೆಸ್ಟ್ ಮಾಡಿಸಲು ಬಂದ ಸಾರ್ವಜನಿಕರಿಗೆ ಬಿಬಿಎಂಪಿ ಸಿಬ್ಬಂದಿಯೇ ಕಣ್ಣಿಗೆ ಮಣ್ಣೆರಚುವುದು ನಿನ್ನೆ ಬೆಳಕಿಗೆ ಬಂದಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿತ್ತು. ಇದೀಗ ಆ ಸಿಬ್ಬಂದಿಗಳನ್ನು ವಜಾ ಮಾಡಿದ್ದರೂ ಇಷ್ಟು ದಿನ ನಡೆದ ಕಳ್ಳಾಟದಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗಲಿವೆ ಎಂಬುದು ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಕೊವಿಡ್​ ನಿಯಮ ಪಾಲಿಸದಿದ್ದರೆ ಕ್ರಮ: ರಾಜಕಾರಣಿಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ

Covid 19 second wave: ಕೊರೊನಾ ಎರಡನೇ ಅಲೆಯಲ್ಲಿ ತತ್ತರಿಸಿದ ಭಾರತ; 10 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು

(Bangalore Covid 19 Unappropriate test being done by BBMP Staff caught on Camera in Kodigehalli Bengaluru viral now )

Published On - 4:40 pm, Sat, 10 April 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ