Dance Master Madhu Death: ಐಸಿಯು ಬೆಡ್ ಸಿಗದೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ 21 ವರ್ಷದ ಡ್ಯಾನ್ಸ್ ಮಾಸ್ಟರ್ ಸಾವು
ಮೃತ ಮಧು ಡ್ಯಾನ್ಸ್ ಮಾಸ್ಟರ್ ಆಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ನನ್ನ ತಮ್ಮ ಸಾವನ್ನಪ್ಪಿದ್ದಾರೆ ಎಂದು ಅಣ್ಣಂದಿರು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು: ಕೊರೊನಾ ಎರಡನೇ ಅಲೆಗೆ ದೇಶ ತತ್ತರಿಸಿ ಹೋಗಿದ್ದು, ಸಾವು – ನೋವಿನ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಜೊತೆಗೆ ಆಕ್ಸಿಜನ್, ವೆಂಟಿಲೇಟರ್ ಬೆಡ್ಗಳ ಕೊರತೆಯೂ ಹೆಚ್ಚಾಗಿದೆ. ಆದರೆ ಇಂದು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ 21 ವರ್ಷದ ಯುವಕ ಐಸಿಯು ಬೆಡ್ ಸಿಗದೆ ಮೃತಪಟ್ಟಿದ್ದಾರೆ. ಸಿ.ವಿ.ರಾಮನ್ ನಗರದ ನಿವಾಸಿ ಮಧು ಮೃತ ದುರ್ದೈವಿ.
ಮೃತ ಮಧು ಡ್ಯಾನ್ಸ್ ಮಾಸ್ಟರ್ ಆಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ನನ್ನ ತಮ್ಮ ಸಾವನ್ನಪ್ಪಿದ್ದಾರೆ ಎಂದು ಅಣ್ಣಂದಿರು ಅಳಲು ತೋಡಿಕೊಂಡಿದ್ದಾರೆ. ಐಸಿಯು ಬೆಡ್‌ಗಾಗಿ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ್ದರು ಎಲ್ಲೂ ಬೆಡ್ ಸಿಗದಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಲ್ಲಿ ಕರೆ ತಂದು ಕೂಡ ತಮ್ಮನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಮಧು ಅಣ್ಣಂದಿರು ಬೇಸರ ಹೊರಹಾಕಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಕೋರೋನಾ ವಾರಿಯರ್ ಕೊವಿಡ್ಗೆ ಬಲಿ ಹುಬ್ಬಳ್ಳಿಯ ಭವಾನಿನಗರದ 46 ವರ್ಷದ ಸೋಫಿಯಾ ಕನವಳ್ಳಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೋನಾ ವಾರಿಯರ್ ಆಗಿ ಕಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಟಾಫ್ ನರ್ಸ್ ಸೋಫಿಯಾ ಮೃತಪಟ್ಟಿದ್ದಾರೆ. ಸೋಫಿಯಾಗೆ ಪತಿ ಹಾಗೂ ಇಬ್ಬರು ಪುತ್ರಿಯರು ಇದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 16 ವರ್ಷದಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸೋಫಿಯಾರವರು ಕೊವಿಡ್ ವಾರ್ಡ್ನಲ್ಲೂ ಕಾರ್ಯನಿರ್ವಹಿಸಿದ್ದರು. ಸೋಫಿಯಾರಿಗೆ ಏಪ್ರಿಲ್ 23 ರಂದು ಕೊವಿಡ್ ಸೊಂಕು ದೃಡಪಟ್ಟಿತ್ತು. ಅದರೆ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಸೋಫಿಯಾ ಅವರಿಗೆ ಏಪ್ರಿಲ್ 29 ರಂದು ಏಕಾಏಕಿ ಉಸಿರಾಟದ ತೊಂದರೆ ಕಂಡುಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸ್ಟಾಫ್ ನರ್ಸ್ ಸೋಫಿಯಾರ ನಿಧನಕ್ಕೆ ಕಿಮ್ಸ್ ಸಿಬ್ಬಂದಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಆಕ್ಸಿಜನ್ ಕೊರತೆಯಿಂದ ಕಲಬುರಗಿ ಆಸ್ಪತ್ರೆಯಲ್ಲಿ ಇಬ್ಬರು ಕೊರೊನಾ ಸೋಂಕಿತರ ಸಾವು
ಬಾಗಲಕೋಟೆಯಲ್ಲೂ ಹೆಚ್ಚಿದ ರೆಮ್ಡೆಸಿವಿರ್ ಬೇಡಿಕೆ; ಕೊರೊನಾಗಿಂತಲೂ ಇಂಜೆಕ್ಷನ್ ಸಿಗುತಿಲ್ಲ ಎನ್ನುವ ಆತಂಕವೇ ಹೆಚ್ಚು
(Bangalore Dance master Madhu died as he did not get bed in Hospital)