Bengaluru Power cut: ಬೆಂಗಳೂರಿನ ರಾಜಾಜಿನಗರ, ಹೆಬ್ಬಾಳ, ಕೋರಮಂಗಲ ಸೇರಿ ಹಲವೆಡೆ ಇಂದು ಪವರ್ ಕಟ್

BESCOM Power Cut: ರಾಜಾಜಿನಗರ, ಕೆಂಗೇರಿ, ಆರ್​ಆರ್​ ನಗರ, ವಿದ್ಯಾರಣ್ಯಪುರ, ಕೋರಮಂಗಲ, ಜಯನಗರ ಸೇರಿ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.

Bengaluru Power cut: ಬೆಂಗಳೂರಿನ ರಾಜಾಜಿನಗರ, ಹೆಬ್ಬಾಳ, ಕೋರಮಂಗಲ ಸೇರಿ ಹಲವೆಡೆ ಇಂದು ಪವರ್ ಕಟ್
ವಿದ್ಯುತ್ ವ್ಯತ್ಯಯ
Updated By: ಸುಷ್ಮಾ ಚಕ್ರೆ

Updated on: Sep 19, 2021 | 9:24 AM

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ (Power Cut) ಇರಲಿದೆ. ಮೇಂಟೇನನ್ಸ್ ಮತ್ತು ಕೇಬಲ್ ಅಳವಡಿಕೆ ಕೆಲಸ ನಡೆಯುತ್ತಿರುವುದರಿಂದ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್‌ ಸಂಪರ್ಕ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ. ರಾಜಾಜಿನಗರ, ಕೆಂಗೇರಿ, ಆರ್​ಆರ್​ ನಗರ, ವಿದ್ಯಾರಣ್ಯಪುರ, ಕೋರಮಂಗಲ, ಜಯನಗರ ಸೇರಿ ಅನೇಕ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.

ಹೆಬ್ಬಾಳ, ಪೀಣ್ಯ, ಜಾಲಹಳ್ಳಿ, ಮಲ್ಲೇಶ್ವರಂ, ಕೋರಮಂಗಲ, ಜಯನಗರ, ರಾಜರಾಜೇಶ್ವರಿ ನಗರ, ರಾಜಾಜಿನಗರ, ಕೆಂಗೇರಿ, ಎಚ್‌ಎಂಟಿ ಬಡಾವಣೆ, ವಿನಾಯಕ ನಗರ, ಜಾಲಹಳ್ಳಿ ಅಡ್ಡರಸ್ತೆ, ಶೋಭಾ ಅಪಾರ್ಟ್‌ಮೆಂಟ್ಸ್‌, ಗೃಹಲಕ್ಷ್ಮಿ ಬಡಾವಣೆ, ಶಿವಪುರ, ಪೀಣ್ಯ ಎರಡನೇ ಹಂತ ಹಾಗೂ ತಿಗಳರ ಪಾಳ್ಯ ಮುಖ್ಯರಸ್ತೆ, ರುಕ್ಷ್ಮಿಣಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗೇ, ಸಹಕಾರ ನಗರ, ಬ್ಯಾಟರಾಯನಪುರ, ಬಿ.ಬಿ. ರಸ್ತೆ, ತಲಕಾವೇರಿ ಬಡಾವಣೆ, ಚಿತ್ರಕೂಟ, ವಿದ್ಯಾಶಿಲ್ಪ, ಶೋಭಾ ಡೆವಲಪರ್ಸ್, ಜಕ್ಕೂರು ಬಡಾವಣೆ, ಕೃಷಿ ವಿಶ್ವವಿದ್ಯಾಲಯ ಬಡಾವಣೆ, ಅಮೃತನಗರ, ಕಾಶಿನಗರ, ಭುವನೇಶ್ವರಿ ನಗರ, ವರ್ಮಾ ಬಡಾವಣೆ, ಅಮೃತಹಳ್ಳಿ, ಶ್ರೀರಾಮಪುರ, ಟೆಲಿಕಾಂ ಬಡಾವಣೆ, ಶಿವರಾಮಕಾರಂತ ನಗರ, ಜವಹರಲಾಲ್ ಸಂಸ್ಥೆ, ರಕ್ಷಣಾ ಬಡಾವಣೆ, ನವ್ಯನಗರ ಹಾಗೂ ವಿಆರ್‌ಎಲ್, ಸಂಪಿಗೆಹಳ್ಳಿ, ತಿರುಮನಹಳ್ಳಿ, ಚೊಕ್ಕನಹಳ್ಳಿ, ಹೆಗ್ಡೆ ನಗರ, ಅಗ್ರಹಾರ ಬಡಾವಣೆ, ಕೋಗಿಲು ಬಡಾವಣೆ, ಡಯಾನ ಕಾಲೇಜು ಪ್ರದೇಶಗಳಲ್ಲಿ ಕೂಡ ಪವರ್ ಕಟ್ ಇರಲಿದೆ.

ವಿದ್ಯಾರಣ್ಯಪುರ, ಅಟ್ಟೂರು ಬಡಾವಣೆ, ಸಂತೋಷ ನಗರ, ಮುನೇಶ್ವರ ಬಡಾವಣೆ, ವೀರಸಾಗರ, ಕೆಂಪನಹಳ್ಳಿ, ಶಾಮರಾಜಪುರ, ಬಸವ ಸಮಿತಿ, ನಂಜಪ್ಪ ವೃತ್ತ, ವೆಂಕಟೇಶ್ವರ ಬಡಾವಣೆ, ಗುರುದರ್ಶನ ಬಡಾವಣೆ, ಗಣೇಶ್ವರ ಬಡಾವಣೆ, ಸಪ್ತಗಿರಿ ಬಡಾವಣೆ, ತಿಂಡ್ಲು, ಕಮ್ಮಗೊಂಡನಹಳ್ಳಿ, ರಾಘವೇಂದ್ರ ಬಡಾವಣೆ, ಲಕ್ಷ್ಮೀಪುರ, ವಡೇರಹಳ್ಳಿ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಲಕ್ಕಪ್ಪ ಬಡಾವಣೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಅಯ್ಯಪ್ಪ ನಗರ, ಎಸ್.ಎಂ. ರಸ್ತೆ, ಶಬರಿನಗರ, ಸಿದ್ಧಾರ್ಥ ನಗರ, ಕಾಳಹಸ್ತಿ ನಗರ, ಕಾಫಿಡೇ, ಎಸ್.ಎಂ. ರಸ್ತೆ, ಕೆಎಸ್‌ಆರ್‌ಟಿಸಿ ಬಡಾವಣೆ, ತ್ರಿವೇಣಿ, ಜೆಮಿನಿ ಇಂಡಸ್ಟ್ರೀಸ್, ರವಿ ಕಿರ್ಲೋಸ್ಕರ್ ಆಸ್ಪತ್ರೆ, ಜಾನ್‌ ಕ್ರೇನ್, ಪ್ರಿಂಟಿಂಗ್ ಪ್ರೆಸ್, ಸಿಎಂಟಿಐ ಕ್ವಾರ್ಟರ್ಸ್‌, ರವೀಂದ್ರ ನಗರ, ಪ್ರಶಾಂತ ನಗರ, ರವೀಂದ್ರ ನಗರ, ಸಂತೋಷ ನಗರ, ನೆಲಮಂಗಲದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Punjab CM: ಅಮರೀಂದರ್ ಸಿಂಗ್ ರಾಜೀನಾಮೆ ಹಿನ್ನೆಲೆ; ಪಂಜಾಬ್ ನೂತನ ಸಿಎಂ ರೇಸ್​ನಲ್ಲಿದ್ದಾರೆ ಈ ಕಾಂಗ್ರೆಸ್ ನಾಯಕರು

Bengaluru Metro: ಬೆಂಗಳೂರು ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ; ವಿವರ ಇಲ್ಲಿದೆ

(Bangalore News: BESCOM announces Power Cut in Bengaluru Koramangala, Jayanagar, Hebbal Today)

Published On - 9:24 am, Sun, 19 September 21