Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋರ್​ವೆಲ್​ಗೆ ಹಾಕಿ ಮಗುವನ್ನು ಕೊಂದಿದ್ದು ತಂದೆ! ಪೊಲೀಸರ ವಿಚಾರಣೆಯಲ್ಲಿ ಬಾಯಿಬಿಟ್ಟ ಕೊಲೆಗಡುಕ

ಸಿದ್ದಪ್ಪ ಮಗು ನನ್ನದಲ್ಲ ಅಂತಾ ಹೆಂಡತಿ ಜೊತೆ ಪದೇ ಪದೇ ಕಿರಿಕ್ ಮಾಡುತ್ತಿದ್ದನಂತೆ. ಈ ಕುರಿತು ಹಲವು ಬಾರಿ ಗ್ರಾಮದ ಮುಖಂಡರು, ಕುಟುಂಬಸ್ಥರು ರಾಜಿ ಪಂಚಾಯಿತಿ ಕೂಡ ನಡೆಸಿದ್ದರು.

ಬೋರ್​ವೆಲ್​ಗೆ ಹಾಕಿ ಮಗುವನ್ನು ಕೊಂದಿದ್ದು ತಂದೆ! ಪೊಲೀಸರ ವಿಚಾರಣೆಯಲ್ಲಿ ಬಾಯಿಬಿಟ್ಟ ಕೊಲೆಗಡುಕ
ಮಗುವನ್ನು ಕೊಂದ ತಂದೆ ಸಿದ್ದಪ್ಪ, ಸಾವನ್ನಪ್ಪಿದ ಮಗು ಶರತ್
Follow us
TV9 Web
| Updated By: sandhya thejappa

Updated on:Sep 19, 2021 | 11:07 AM

ಬೆಳಗಾವಿ: ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಶರತ್ ಹಸಿರೆ ಎಂಬ ಎರಡೂವರೆ ವರ್ಷದ ಮಗು ಬೋರ್​ವೆಲ್​ನಲ್ಲಿ (Borewell) ಶವವಾಗಿ ಪತ್ತೆಯಾಗಿತ್ತು. ಮಗುವಿನ ಸಾವಿನ ಸುತ್ತ ಅನುಮಾನ ಮೂಡಿತ್ತು. ಮಗುವಿನ ತಂದೆಯೇ ಮಗುವನ್ನು ಬೋರ್​ವೆಲ್​ಗೆ ಹಾಕಿ ಕೊಂದಿರಬಹುದು ಎಂದು ಶಂಕೆ ವ್ಯಕ್ತವಾಗಿತ್ತು. ಆದರೆ ಈ ಅನುಮಾನ ಇದೀಗ ದಿಟವಾಗಿದೆ. ತನ್ನ ಮಗುವನ್ನು ತಾನೇ ಕೊಂದಿರುವ ಬಗ್ಗೆ ತಂದೆ ಸಿದ್ದಪ್ಪ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಮಗು ನನ್ನದಲ್ಲ ಅಂತಾ ಪದೇ ಪದೇ ಕಿರಿಕ್ ಮಾಡುತ್ತಿದ್ದ ಸಿದ್ದಪ್ಪ, ಪತ್ನಿಯ ಮೇಲೆ ಸಂಶಯ ಪಟ್ಟು ಮಗನನ್ನೇ ಹತ್ಯೆ ಮಾಡಿದ್ದಾನೆ ಎಂಬ ಪ್ರಶ್ನೆ ಮೂಡಿದೆ.

ಸಿದ್ದಪ್ಪ ಮಗು ನನ್ನದಲ್ಲ ಅಂತಾ ಹೆಂಡತಿ ಜೊತೆ ಪದೇ ಪದೇ ಕಿರಿಕ್ ಮಾಡುತ್ತಿದ್ದನಂತೆ. ಈ ಕುರಿತು ಹಲವು ಬಾರಿ ಗ್ರಾಮದ ಮುಖಂಡರು, ಕುಟುಂಬಸ್ಥರು ರಾಜಿ ಪಂಚಾಯಿತಿ ಕೂಡ ನಡೆಸಿದ್ದರು. ಆದರೂ ಸುಧಾರಿಸಿಕೊಳ್ಳದ ಸಿದ್ದಪ್ಪ ಮಗನನ್ನ ಕಂಡರೆ ಸಿಟ್ಟಾಗುತ್ತಿದ್ದ. ಈ ಕಾರಣಕ್ಕೆ ಮಗು ಶರತ್ ಅಜ್ಜಿ ಸರಸ್ವತಿ ಮನೆಯಲ್ಲಿ ಬೆಳೆದಿತ್ತು. ಸೆ.9ರಂದು ಶರತ್ ಹುಟ್ಟುಹಬ್ಬವನ್ನ ಕುಟುಂಬಸ್ಥರು ಅಜ್ಜಿ ಮನೆಯಲ್ಲೇ ಆಚರಿಸಿದ್ದರು. ಕಳೆದ ನಾಲ್ಕು ದಿನಗಳ ಹಿಂದಷ್ಟೇ ತಂದೆಯ ಮನೆಗೆ ಮಗು ಶರತ್ ಬಂದಿತ್ತು.

ಮಗ ಮನೆಗೆ ಬರುತ್ತಿದ್ದಂತೆ ಕೊಲೆ ಮಾಡಲು ಸಂಚು ರೂಪಿಸಿದ ಸಿದ್ದಪ್ಪ ಮಗನನ್ನ ಕೊಂದು ಜೈಲು ಸೇರಿದ್ದಾನೆ. ಸಾಕಷ್ಟು ಬಾರಿ ಹೆಂಡತಿ ಮನವಿ ಮಾಡಿದ್ರೂ ಕ್ಯಾರೆ ಅನ್ನದ ಸಿದ್ದಪ್ಪ ನಿತ್ಯವೂ ಹೆಂಡತಿ ಜತೆಗೆ ಜಗಳವಾಡುತ್ತಿದ್ದನಂತೆ. ಈ ಎಲ್ಲ ಮಾಹಿತಿನ್ನು ಪೊಲೀಸ್ ತನಿಖೆ ವೇಳೆ ಕೊಲೆಗಡುಕ ತಂದೆ ಸಿದ್ದಪ್ಪ ಬಾಯಿಬಿಟ್ಟಿದ್ದಾನೆ. ಸದ್ಯ ಹಾರೂಗೇರಿ ಪೊಲೀಸರು ತೀವ್ರ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಪೊಲೀಸರನ್ನು ಬೋರ್​ವೆಲ್​ ಬಳಿ ಕರೆದೊಯ್ದಿದ್ದ ಸಿದ್ದಪ್ಪ ನಿನ್ನೆ ತನಿಖೆಗೆ ಆಗಮಿಸಿದ್ದ ಪೊಲೀಸರನ್ನು ಸಿದ್ದಪ್ಪ ಬೋರ್​ವೆಲ್​ ಬಳಿ ಕರೆದೊಯ್ದಿದ್ದ. ಜಮೀನಿನಲ್ಲಿ ಬೋರ್​ವೆಲ್​ ಇದೆ ಬನ್ನಿ ನೋಡೋಣ ಎಂದಿದ್ದ. ಬೋರ್​​ವೆಲ್​ನಲ್ಲಿ ಮಗು ಬಿದ್ದಿರಬಹುದೆಂದು ಕರೆದೊಯ್ದಿದ್ದ. ಬೋರ್​ವೆಲ್​ನಲ್ಲಿ ನೋಡಿದಾಗ ಮಗು ಇರುವುದು ಗೊತ್ತಾಗಿತ್ತು. ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಅಜ್ಜಿ ಕಣ್ಣೀರು ಮದುವೆಯಾದ ಕೆಲ ದಿನಗಳ ಬಳಿಕ ಮಗಳ ಮೇಲೆ ಸಂಶಯ ಪಡುತ್ತಿದ್ದ. ತನಗೆ ಸಾಕಲು ಆಗದಿದ್ರೆ ಮಗುವನ್ನು ನಾನು ಸಾಕುತ್ತಿದ್ದೆ. ಸೋದರಳಿಯ ಅಂತಾ ಮಗಳನ್ನು ಮದುವೆ ಮಾಡಿಕೊಟ್ಟೆ. ಮಗಳ ಬಾಳು ಹಾಳು ಮಾಡಿದ ಅಂತಾ ಸರಸ್ವತಿ ತಾಯಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ

ಬೆಳಗಾವಿಯಲ್ಲಿ ಬೋರ್​ವೆಲ್​ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಸಾವು; ಸಾವಿನ ಹಿಂದೆ ತಂದೆಯ ಕೈವಾಡದ ಶಂಕೆ

ಬೆಳಗಾವಿಯಲ್ಲಿ ಬೋರ್​ವೆಲ್​ಗೆ ಬಿದ್ದ ಎರಡೂವರೆ ವರ್ಷದ ಮಗು; ಬದುಕಿ ಬರಲು ಪ್ರಾರ್ಥಿಸೋಣ

(father murdered the two and half child in Borewell at Belagavi)

Published On - 8:45 am, Sun, 19 September 21

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ