Bangalore Rain: ಮಳೆಯಿಂದಾಗಿ ತೊಂದರೆ ಸಿಲುಕಿದರೆ ನಿಮ್ಮ ನೆರವಿಗೆ ದಾವಿಸಲಿದೆ ಎನ್​ಜಿಒ ತಂಡ; ಸಹಾಯವಾಣಿ ನಂಬರ್ ಇಲ್ಲಿದೆ

ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ತೊಂದರೆಗೆ ಸಿಲುಕಿದ ಕೂಡಲೇ ಮಾಹಿತಿ ರವಾನಿಸಿದರೆ ಎನ್​ಜಿಒ ತಂಡ ನಿಮ್ಮ ಸಹಾಯಕ್ಕೆ ದಾವಿಸಲಿದೆ.

Bangalore Rain: ಮಳೆಯಿಂದಾಗಿ ತೊಂದರೆ ಸಿಲುಕಿದರೆ ನಿಮ್ಮ ನೆರವಿಗೆ ದಾವಿಸಲಿದೆ ಎನ್​ಜಿಒ ತಂಡ; ಸಹಾಯವಾಣಿ ನಂಬರ್ ಇಲ್ಲಿದೆ
ಮಳೆಯಿಂದಾಗಿ ತೊಂದರೆ ಸಿಲುಕಿದರೆ ನಿಮ್ಮ ನೆರವಿಗೆ ದಾವಿಸಲು ಎನ್​ಜಿಒ ತಂಡ ಹೆಲ್ಪ್​ಲೈನ್ ನಂಬರ್ ಆರಂಭಿಸಿದೆ.
Follow us
TV9 Web
| Updated By: Rakesh Nayak Manchi

Updated on:Sep 06, 2022 | 12:06 PM

ಬೆಂಗಳೂರು: ನಗರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು ಅನೇಕ ಪ್ರದೇಶಗಳು ಜಲಪ್ರವಾಹಕ್ಕೆ ಒಳಗಾಗಿವೆ. ಮಳೆಯ ಆರ್ಭಟಕ್ಕೆ ನಲುಗಿ ಹೋಗಿರುವ ನಗರದ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಪರದಾಡುವಂತಾಗಿದೆ. ಇನ್ನೊಂದೆಡೆ ಮಳೆ ನೀರು ಮನೆಯೊಳಗೆ ನುಗ್ಗುತ್ತಿರುವ ಹಿನ್ನೆಲೆ ಮನೆಯಲ್ಲೂ ಕೂರಲು ಆಗದ ಪರಿಸ್ಥಿತಿಯೂ ಇದೆ. ಜನರ ಕಷ್ಟವನ್ನು ಅರಿತಿರುವ ಎನ್​ಜಿಒ ತಂಡವೊಂದು ಜನರ ನೆರವಿಗೆ ದಾವಿಸಲು ಮುಂದಾಗಿದೆ. ಇದಕ್ಕಾಗಿ ಸಹಾಯವಾಣಿಯನ್ನೂ ತೆರೆದಿದೆ.

ನಗರದಲ್ಲಿ ಮಳೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಅಥವಾ ಯಾರಾದರೂ ಮಳೆಯಲ್ಲಿ ಸಿಲುಕಿಕೊಂಡಿದ್ದರೆ, ಏನಾದರೂ ಸಹಾಯ ಬೇಕಾಗಿದ್ದಲ್ಲಿ, ಆಹಾರ ವಿತರಣೆ, ಔಷಧಿ ಸರಬರಾಜು, ಬಟ್ಟೆ ವ್ಯವಸ್ಥೆ ಕಲ್ಪಿಸಲು, ಮಳೆ ನೀರಲ್ಲಿ ಸಿಲುಕಿದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸಲು ಎನ್​ಜಿಒ ಸಜ್ಜಾಗಿದೆ. ನೀವು ತೊಂದರೆಗೆ ಸಿಲುಕಿದ್ದರೆ ಕೂಡಲೇ 9611589595 ಸಂಖ್ಯೆಗೆ ವಾಟ್ಸ್​ಆ್ಯಪ್​ ಸಂದೇಶ ರವಾನಿಸಿ.

ಅದಮ್ಯಚೇತನ ಸಂಸ್ಥೆಯಿಂದ ನೆರವಿನ ಹಸ್ತ

ನಗರದ ಮಾರತ್ತಹಳ್ಳಿ, ವರ್ತೂರು, ಬೆಳ್ಳಂದೂರು ವ್ಯಾಪ್ತಿಯಲ್ಲಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಅದಮ್ಯಚೇತನ ಸಂಸ್ಥೆಯು ನೆರವಿಗೆ ನಿಲ್ಲಲಿದ್ದು, ಬಿಬಿಎಂಪಿ ಕೋರಿಕೆ ಮೇರೆಗೆ 300 ಸಂತ್ರಸ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಾಳೆ 500 ಜನರಿಗೆ ಊಟ ಕಳಿಸಲು ವ್ಯವಸ್ಥೆ ಮಾಡಲಾಗಿದ್ದು, ಸಂತ್ರಸ್ತರಿಗೆ ಊಟದ ವ್ಯವಸ್ಥೆ ಬೇಕಾದರೆ ಬಿಬಿಎಂಪಿ ಮುಖಾಂತರ ಅಥವಾ ಸ್ಥಳೀಯ ಕಾರ್ಯಕರ್ತರ ಮುಖಾಂತರ ಅದಮ್ಯ ಚೇತನದ 8904623967 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:59 am, Tue, 6 September 22

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ