ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಸಂದೇಶ​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2024 | 5:16 PM

ಬಿಷಪ್ ಕಾಟನ್ ಶಾಲೆಯ ವೆಬ್‌ಸೈಟ್‌ಗೆ ಬೆಳಿಗ್ಗೆ ಬಂದ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಅನ್ನು ಮಧ್ಯಾಹ್ನ ಗಮನಿಸಲಾಗಿದೆ. ಶಾಲಾ ಆಡಳಿತ ಮಂಡಳಿ ಕೂಡಲೇ ಕಬ್ಬನ್ ಪಾರ್ಕ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ನಡೆಸಿ ಇದು ಹುಸಿ ಬೆದರಿಕೆ ಎಂದು ಖಚಿತಪಡಿಸಿದ್ದಾರೆ.

ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಸಂದೇಶ​
ಬೆಂಗಳೂರಿನ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಸಂದೇಶ​
Follow us on

ಬೆಂಗಳೂರು, ನವೆಂಬರ್​ 07: ಕರ್ನಾಟಕದಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು (Bomb Threats) ಹೆಚ್ಚಾಗುತ್ತಿವೆ. ಇದೀಗ ನಗರದ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ರವಾನಿಸಲಾಗಿದೆ. ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿರುವ ಬಿಷಪ್ ಕಾಟನ್ ಶಾಲೆಯ ವೆಬ್​ಸೈಟ್​​ಗೆ ಕಿಡಿಗೇಡಿಗಳಿಂದ ಹುಸಿ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಕೂಡಲೇ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಬೆಳಗ್ಗೆ ಬಂದಿದ್ದ ಸಂದೇಶವನ್ನು ಆಡಳಿತ ಮಂಡಳಿ ಮಧ್ಯಾಹ್ನ ಗಮನಿಸಿದ್ದಾರೆ. ಬೆದರಿಕೆ ಸಂದೇಶದ ಮಾಹಿತಿ ತಿಳಿದು ಪೊಲೀಸರಿಂದ ಪರಿಶೀಲನೆ ಮಾಡಿದ್ದಾರೆ. ಬಳಿಕ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆ, ಹೋಟೆಲ್ಸ್ ಬಳಿಕ ಕಾಲೇಜುಗಳಿಗೆ ಹುಸಿ ಬಾಂಬ್ ಬೆದರಿಕೆ

ನಗರದ ಬಿಎಂಎಸ್, ಎಂಎಸ್ ರಾಮಯ್ಯ ಹಾಗೂ ಬಿಐಟಿ ಇಂಜಿನಿಯರಿಂಗ್ ಕಾಲೇಜಿಗೆ ಇತ್ತೀಚೆಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಇದರಿಂದ ಕಾಲೇಜು ಆವರಣಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಬೆಂಗಳೂರಿನ ಸೈನಿಕ ಶಾಲೆಗೆ ಬಾಂಬ್ ಬೆದರಿಕೆ ಇಮೇಲ್: ಬಾಂಬ್ ನಿಷ್ಕ್ರಿಯ ದಳ ದೌಡು!

ಮಧ್ಯಾಹ್ನ ಕಾಲೇಜಿನ ಇಮೇಲ್​ಗೆ ಬಂದಿದ್ದ ಬೆದರಿಕೆ ಸಂದೇಶವನ್ನ‌ ನೋಡಿ ಗಾಬರಿಯಾದ ಕಾಲೇಜು ಆಡಳಿತ ತಕ್ಷಣವೇ ಸ್ಥಳೀಯ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ಸ್ಥಳಕ್ಕೆ ದೌಡಯಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಇಡೀ ಕಾಲೇಜನ್ನು ಪರಿಶೀಲನೆ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: 10 ಪ್ರಕರಣಗಳು ದಾಖಲು

ಈ ಇಮೇಲ್ ಬೆದರಿಕೆ ಸಂದೇಶದಲ್ಲಿ ಸುಧಾರಿತ ಇಂಪ್ರೂವೈಸ್ ಎಕ್ಸ್ಪ್ಲೋಸೀವ್ ಡಿವೈಝ್​ಗಳನ್ನ ಕಾಲೇಜಿನಲ್ಲಿ ಇಡಲಾಗಿದ್ದು, ಸಂಜೆ ಐದು ಗಂಟೆ ಒಳಗೆ ಕಾಲೇಜಿನಿಂದ ಹೊರ ಹೋಗದೆ ಇದ್ದರೆ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಉಲ್ಲೇಖಿಸಲಾಗಿತ್ತು. ಪರಿಶೀಲನೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದರು. ಸದ್ಯ ಹನುಮಂತ ನಗರ, ಸದಾಶಿವ ನಗರ, ವಿವಿಪುರಂ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:01 pm, Thu, 7 November 24