ಆನೇಕಲ್, ಮಾರ್ಚ್ 18: ಬಾಲ್ಯವಿವಾಹವಾಗಿದ್ದ (child married) ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಬಾಲಕಿ ವಿವಾಹವಾಗಿದ್ದ ಬಿಹಾರ ಮೂಲದ ವಿಶಾಲ್ ಕುಮಾರ್ ಸಹಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 13ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನೀಲಂ ಕುಮಾರಿಯನ್ನು 2023ರ ಫೆಬ್ರವರಿ ತಿಂಗಳಲ್ಲಿ ಬಿಹಾರದಲ್ಲಿ ವಿಶಾಲ್ ಕುಮಾರ್ ಸಹಾನಿ ಬಾಲ್ಯವಿವಾಹವಾಗಿದ್ದ. 1 ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದು, ಯಶವಂತಪುರದಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದ.
20 ದಿನಗಳ ಹಿಂದೆ ಬಿಹಾರದಿಂದ ಬಾಲಕಿಯನ್ನು ಕರೆತಂದಿದ್ದ. ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬಾಲ್ಯವಿವಾಹವಾಗಿ ಲೈಂಗಿಕವಾಗಿ ಬಳಸಿಕೊಂಡು ಮಾನಸಿಕ ಹಿಂಸೆ ಹಿನ್ನೆಲೆ ಮಾ.13ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಂದ ಮಾಹಿತಿ ನೀಡಲಾಗಿದ್ದು, ಶ್ರೀದೇವಿ ಎಂಬುವರಿಂದ ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಾವಣಗೆರೆ: ಬೈಕ್ಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಆಸ್ತಿ ವಿವಾದ: ಅಳಿಯನ ಮೇಲೆಯೇ ಮಾವನಿಂದ ಫೈರಿಂಗ್
ಬಾತಿ ಗ್ರಾಮದ 22 ವರ್ಷದ ರಾಕೇಶ್, 23 ವರ್ಷದ ಆಕಾಶ್ ಸಾವನ್ನಪ್ಪಿದ ಬೈಕ್ ಸವಾರರು. ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಮೃತ ದೇಹವನ್ನು ಹರಿಹರ ತಾಲ್ಲೂಕು ಆಸ್ಪತ್ರೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಕೊಪ್ಪಳ: ಆನೆಗೊಂದಿ ಉತ್ಸವದ ಸಮಯದಲ್ಲಿ ಉಳದಿದ್ದ ಆಹಾರವನ್ನು ಸೇವಿಸದ್ದ 30 ಮೇಕೆಗಳು ಸತ್ತಿದ್ದು ನೂರಕ್ಕೂ ಹೆಚ್ಚು ಮೇಕೆಗಳು ಅಸ್ವಸ್ಥಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಡೆಬಾಗಿಲ ಬಳಿ ನಡೆದಿದೆ. ಮಾರ್ಚ್ 11, 12 ರಂದು ಆನೆಗೊಂದಿ ಉತ್ಸವ ನಡೆದಿತ್ತು.
ಇದನ್ನೂ ಓದಿ: 10 ಕೋಟಿ ರೂ ವಜ್ರವನ್ನು 3 ಕೋಟಿಗೆ ಕೊಡುವುದಾಗಿ ಹೇಳಿ ವಂಚನೆ: ನಾಲ್ವರ ಬಂಧನ
ಉತ್ಸವಕ್ಕೆ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಉಳಿದ ಆಹಾರವನ್ನು ಸಂಘಟಕರು ವಿಲೇವಾರಿ ಮಾಡದೇ, ಅಲ್ಲಿಯೇ ಬಿಸಾಡಿ ಹೋಗಿದ್ದರು. ಆದರೆ ಕೆಟ್ಟಹೋಗಿದ್ದ ಆಹಾರವನ್ನು ಸೇವಿಸಿದ್ದ ಮೇಕೆಗಳು ಅಸ್ವಸ್ಥಗೊಂಡು ಮೃತಪಟ್ಟಿವೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.