ರೈಲಿನಿಂದ ಬಿದ್ದು ವಕೀಲ ಸಾವು: ನಿರ್ಮಾಣ ಹಂತದ ಕಂಪೌಂಡ್ ಕುಸಿದು ಕಾರ್ಮಿಕ ದುರ್ಮರಣ

ಚಲಿಸುತ್ತಿದ್ದ ರೈಲಿನಿಂದ ಬಿದ್ದು ವಕೀಲ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್​ ಬಳಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ನಿರ್ಮಾಣ ಹಂತದ ವಿದ್ಯುತ್​​​ ಘಟಕದ ಕಾಂಪೌಂಡ್ ಕುಸಿದು ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ರೈಲಿನಿಂದ ಬಿದ್ದು ವಕೀಲ ಸಾವು: ನಿರ್ಮಾಣ ಹಂತದ ಕಂಪೌಂಡ್ ಕುಸಿದು ಕಾರ್ಮಿಕ ದುರ್ಮರಣ
ಮೃತ ವಕೀಲ, ಕಾರ್ಮಿಕ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Mar 18, 2024 | 8:56 PM

ಕೋಲಾರ, ಮಾರ್ಚ್​​ 18: ಚಲಿಸುತ್ತಿದ್ದ ರೈಲಿನಿಂದ ಬಿದ್ದು ವಕೀಲ (Lawyer) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕು ಟೇಕಲ್​ ಬಳಿ ನಡೆದಿದೆ. ಚಿಕ್ಕಕುಂತೂರು ಗ್ರಾಮದ ಶ್ರೀಕಾಂತ್​ ಮೃತ ವ್ಯಕ್ತಿ. ಬೆಂಗಳೂರು ಕೆ.ಆರ್​.ಪುರಂನಿಂದ ಟೇಕಲ್​ಗೆ ಹೋಗುವ ಮಾರ್ಗ ಮಧ್ಯೆ ಕಾವೇರಿ ಎಕ್ಸ್​ಪ್ರೆಕ್ಸ್​​​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ರೈಲ್ವೇ ಕಂಟ್ರೋನ್​ಮೆಂಟ್​ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ಮಾಡಿದ್ದಾರೆ. ಕಂಟ್ರೋನ್​ಮೆಂಟ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಿರ್ಮಾಣ ಹಂತದ ಕಾಂಪೌಂಡ್ ಕುಸಿದು ಕಾರ್ಮಿಕ ಸಾವು: ಕಳಪೆ ಕಾಮಗಾರಿ ಆರೋಪ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ನಿರ್ಮಾಣ ಹಂತದ ವಿದ್ಯುತ್​​​ ಘಟಕದ ಕಾಂಪೌಂಡ್ ಕುಸಿದು ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ವಿಜಯನಗರ‌ ಜಿಲ್ಲೆ ಹಗರಿಬೊಮ್ಮನಹಳ್ಳಿಯ ನಿವಾಸಿ ಬಸಲಿಂಗಯ್ಯ ಶಾಸ್ತ್ರಿ ಮೃತ ಕಾರ್ಮಿಕ.

ಇದನ್ನೂ ಓದಿ: ಬೆಳಗಾವಿಯಲ್ಲಿ ಆಸ್ತಿ ವಿವಾದ: ಅಳಿಯನ ಮೇಲೆಯೇ ಮಾವನಿಂದ ಫೈರಿಂಗ್

ಕಳಪೆ ಕಾಮಗಾರಿಯಿಂದ ಕಾಂಪೌಂಡ್ ಕುಸಿತವೆಂದು ಆರೋಪ ಕೇಳಿಬಂದಿದೆ. ಕಾರ್ಮಿಕನ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಸಿದ ಸಜ್ಜಾ: ವೃದ್ದೆ ಕಾಲು ಬೆರಳಿಗೆ ಗಾಯ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಕಚೇರಿಯಲ್ಲಿ ಶಿಥಿಲಗೊಂಡ ಮೇಲ್ಛಾವಣಿ ಕುಸಿದು ವೃದ್ಧೆ ಕಾಲಿಗೆ ಗಾಯವಾಗಿದೆ. ಆಸ್ತಿ ನೋಂದಣಿಗಾಗಿ ತಾಲೂಕು ಕಚೇರಿಗೆ ಬಂದಿದ್ದ ಕಳ್ಳಿಕೊಪ್ಪಲು ಗ್ರಾಮದ ವೃದ್ಧೆ ನಾಗಮ್ಮ. ಕಚೇರಿಯ ಪ್ರವೇಶ ದ್ವಾರದ ಬಳಿ ಕುಳಿತಿದ್ದ ವೃದ್ಧೆ ನಾಗಮ್ಮ(67)ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಣಸೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: 10 ಕೋಟಿ ರೂ ವಜ್ರವನ್ನು 3 ಕೋಟಿಗೆ ಕೊಡುವುದಾಗಿ ಹೇಳಿ ವಂಚನೆ: ನಾಲ್ವರ ಬಂಧನ

ಹಾಸನದ ಬೇಲೂರು ತಾಲೂಕಿನ ನಾಗೇನಹಳ್ಳಿ ಗ್ರಾಮದ ಬಳಿ ಟಿಪ್ಪರ್​ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಗೋಣಿಬೀಡು ಗ್ರಾಮದ ಶರತ್(26) ಮೃತ ದುರ್ದೈವಿ. ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ‌ ಅಪಘಾತ ಸಂಭವಿಸಿದೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

2 ಕೆಎಸ್​ಆರ್​ಟಿಸಿ ಬಸ್​ಗಳು ಡಿಕ್ಕಿ: 15 ಜನರಿಗೆ ಗಾಯ

ತುಮಕೂರು ಜಿಲ್ಲೆಯ ಕೊರಟಗೆರೆ ಬಸ್​ ನಿಲ್ದಾಣದಲ್ಲಿ 2 ಕೆಎಸ್​ಆರ್​ಟಿಸಿ ಬಸ್​ಗಳು ಡಿಕ್ಕಿಯಾಗಿ 15 ಜನರಿಗೆ ಗಾಯವಾಗಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಜೋರು ಸೌಂಡ್​ ಇಟ್ಟು ಅಂಗಡಿಯಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಹಲ್ಲೆ: ಮೂವರ ಬಂಧನ

ಗೌರಿಬಿದನೂರುನಿಂದ ತುಮಕೂರಿಗೆ ಹೋಗುತ್ತಿದ್ದ ಬಸ್​ಗೆ ತುಮಕೂರಿನಿಂದ ಪಾವಗಡಕ್ಕೆ ತೆರಳುತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.