10 ಕೋಟಿ ರೂ ವಜ್ರವನ್ನು 3 ಕೋಟಿಗೆ ಕೊಡುವುದಾಗಿ ಹೇಳಿ ವಂಚನೆ: ನಾಲ್ವರ ಬಂಧನ

ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಕಡಿಮೆ ಬೆಲೆಗೆ ವಜ್ರ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. 10 ಕೋಟಿ ರೂ. ಮೌಲ್ಯದ ವಜ್ರವನ್ನು 3 ಕೋಟಿ ರೂ. ಕೊಡುವುದಾಗಿ ಹೇಳಿದ್ದ. ಕೂಡಲೇ ಬಿಐಎಎಲ್​ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

10 ಕೋಟಿ ರೂ ವಜ್ರವನ್ನು 3 ಕೋಟಿಗೆ ಕೊಡುವುದಾಗಿ ಹೇಳಿ ವಂಚನೆ: ನಾಲ್ವರ ಬಂಧನ
ವಶಕ್ಕೆ ಪಡೆದುಕೊಂಡ ವಜ್ರಗಳು
Edited By:

Updated on: Mar 18, 2024 | 4:15 PM

ಬೆಂಗಳೂರು, ಮಾರ್ಚ್​ 18: ಕಡಿಮೆ ಬೆಲೆಗೆ ವಜ್ರ (diamond) ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ನಾಲ್ವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​​ಪೋರ್ಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ರವಿ, ನವೀನ್ ಕುಮಾರ್, ಗೂರ್ ಅಹ್ಮದ್, ಅಬ್ದುಲ್ ದಸ್ತಗಿರ್ ಬಂಧಿತರು. ಲಕ್ಷ್ಮೀನಾರಾಯಣಗೆ ಕರೆ ಮಾಡಿ ಮಾತನಾಡಲು ಆರೋಪಿ ರವಿ ಕರೆಸಿಕೊಂಡಿದ್ದ. ಏರ್​ಪೋರ್ಟ್​ನ ಖಾಸಗಿ ಹೋಟೆಲ್​ನಲ್ಲಿ ಆರೋಪಿಗಳು ಭೇಟಿ ಮಾಡಿದ್ದರು. ಈ ವೇಳೆ ಡೈಮಂಡ್ ವ್ಯವಹಾರ ಮಾಡುವುದಾಗಿ ತಿಳಿಸಿದ್ದರು. 10 ಕೋಟಿ ರೂ. ಮೌಲ್ಯದ ವಜ್ರವನ್ನು 3 ಕೋಟಿ ರೂ. ಕೊಡುವುದಾಗಿ ಹೇಳಿದ್ದ. ದೂರುದಾರ ಲಕ್ಷ್ಮೀನಾರಾಯಣಗೆ ನಕಲಿ ವಜ್ರ ಅನ್ನೋದು ಗೊತ್ತಾಗಿತ್ತು. ಕೂಡಲೇ ಬಿಐಎಎಲ್​ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಭೂಮಿಯೊಳಗೆ ಬಚ್ಚಿಟ್ಟ ಗಾಂಜಾ ಪತ್ತೆಹಚ್ಚಿದ ಪೊಲೀಸ್​​ ಶ್ವಾನ: ಓರ್ವ ಬಂಧನ

ಕೊಡಗು: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮದ ಬಳಿ ಭೂಮಿಯೊಳಗೆ ಬಚ್ಚಿಟ್ಟ 250 ಗ್ರಾಂ ಗಾಂಜಾವನ್ನು ಕಾಪರ್​​ ಹೆಸರಿನ ಪೊಲೀಸ್​​ ಶ್ವಾನ ಪತ್ತೆ ಹಚ್ಚಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ ಮಾಡಿ ಶೌಚಾಲಯದ ಸಮೀಪ ಭೂಮಿಯೊಳಗೆ ಬಚ್ಚಿಟ್ಟಿದ್ದ ಗಾಂಜಾ ಪತ್ತೆ ಆಗಿದೆ. ಬಸವರಾಜ್​ ಎಂಬಾತನನ್ನು ಬಂಧಿಸಲಾಗಿದೆ.

ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಸಾವು

ದಾವಣಗೆರೆ: ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ. ಅಸದ್ ಅಹಮದ್ (03) ಮೃತ ಬಾಲಕ. ಮನೆಯಲ್ಲಿ ಎಲ್ಲರೂ ನಮಾಝ್ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಆಟ ಆಡಲು ಹೋಗಿ ನೀರಿನ ತೊಟ್ಟಿಯಲ್ಲಿ ಬಿದ್ದಿದೆ. ಎರಡು ಗಂಟೆಗಳ ಬಳಿಕ ಮಗು ಪತ್ತೆ ಆಗಿದೆ.

ಇದನ್ನೂ ಓದಿ: ಟೀ ಕುಡಿಸಲು ಎಂದು ಕರೆದೊಯ್ದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್

ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿತ್ತು. ಶಿಕಾರಿಪುರದಿಂದ ತನ್ನ ತವರು ಮನೆಗೆ ಮೃತ ಬಾಲಕನ ತಾಯಿ ಬಂದಿದ್ದರು ಈ ವೇಳೆ ಘಟನೆ ನಡೆದಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ರಾಮನಗರ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ (60) ಶವ ಪತ್ತೆ ಆಗಿರುವಂತಹ ಘಟನೆ ಜಿಲ್ಲೆ ಕನಕಪುರ‌ ತಾಲೂಕಿನ ವರ್ತೀಪುರ ಗ್ರಾಮದಲ್ಲಿ ನಡೆದಿದೆ. ಮರಕ್ಕೆ ನೇತಾಡುತ್ತಿದ್ದ ಶವ ಕಂಡು ಗ್ರಾಮಸ್ಥರು ಭಯಬೀತರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಜೋರು ಸೌಂಡ್​ ಇಟ್ಟು ಅಂಗಡಿಯಲ್ಲಿ ಭಜನೆ ಹಾಡು ಹಾಕಿದ್ದಕ್ಕೆ ಹಲ್ಲೆ: ಮೂವರ ಬಂಧನ

ಕೋಡಿಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ವ್ಯಕ್ತಿ ಬಗ್ಗೆ ಪೊಲೀಸರು ಮಾಹಿತಿ‌ ಕಲೆ ಹಾಕುತ್ತಿದ್ದಾರೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.