ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು
ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಎಂ.ಎಸ್. ಬಿಲ್ಡಿಂಗ್ ಬಳಿಯ ಫುಟ್ಪಾತ್ ಕುಸಿದುಬಿದ್ದಿದೆ. ಕಳಪೆ ಕಾಮಗಾರಿಗಳು ಬಯಲಾಗಿವೆ, ಇದರಿಂದಾಗಿ ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ನಡೆಯುವಂತಾಗಿದೆ. ಕೇವಲ ಒಂದು ಗಂಟೆಯ ಮಳೆಯಿಂದ ಇಂತಹ ಅನಾಹುತ ಸಂಭವಿಸಿದ್ದು, ಜಿಬಿಎ ಕಳಪೆ ಕಾಮಗಾರಿ ಪ್ರಶ್ನಾರ್ಹವಾಗಿದೆ.
ಬೆಂಗಳೂರು, ಏಪ್ರಿಲ್ 30: ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಧಾರಾಕಾರ ಮಳೆಗೆ ಜಿಬಿಎ ಕಳಪೆ ಕಾಮಗಾರಿ ಬಟಾಬಯಲಾಗಿದೆ. ಅದರಲ್ಲೂ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧದ ಸಮೀಪವಿರುವ ಎಂ.ಎಸ್. ಬಿಲ್ಡಿಂಗ್ ಮುಂಭಾಗದ ಫುಟ್ಪಾತ್ ಕುಸಿಬಿದ್ದು ಅವಾಂತರ ಸೃಷ್ಟಿಯಾಗಿದೆ. ಕೇವಲ 1 ಗಂಟೆ ಸುರಿದ ಭಾರಿ ಮಳೆಗೆ ಫುಟ್ಪಾತ್ ಕುಸಿದುಹೋಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುವ ಫುಟ್ಪಾತ್ ಬಲಿಗಾಗಿ ಕಾದುಕುಳಿತಂತಿದೆ. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಘಟನೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯ ಮುಂಭಾಗ ಫುಟ್ಪಾತ್ ಪಕ್ಕ ನಿಲ್ಲಿಸಿದ್ದ ಪೊಲೀಸ್ ಜೀಪ್ ಒಂದು ಭಾಗಶಃ ಹಳ್ಳಕ್ಕೆ ಹೊರಳಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
