Karnataka Assembly session: ಟಿವಿಯಲ್ಲಿ ವಿರೋಧಪಕ್ಷ ಶಾಸಕರ ಮುಖ ತೋರಿಸದ ಬಗ್ಗೆ ಸದನದಲ್ಲಿ ಮುಂದುವರಿದ ಕದನ, ಯತ್ನಾಳ್ ಬಿಗಿಪಟ್ಟು

ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2025 | 5:38 PM

ಟಿವಿ ಸಿಬ್ಬಂದಿ ಜೊತೆ ತಾನು ಮಾತಾಡಿದ್ದೇನೆ ಅವರು ರಿಪೇರಿ ಮಾಡೋದಾಗಿ ಹೇಳಿದ್ದಾರೆ ಅಂತ ಸಭಾಧ್ಯಕ್ಷ ಖಾದರ್ ಹೇಳಿದಾಗ ಯತ್ನಾಳ್ ಅದಕ್ಕೇನು ನಟ್ ಬೋಲ್ಟ್ ಇರುತ್ತಾ ರಿಪೇರಿ ಮಾಡಲು ಅನ್ನುತ್ತ ಶಿವಕುಮಾರ್ ಕಾಲೆಳೆಯುತ್ತಾರೆ. ಅದಕ್ಕೆ ಉತ್ತರವಾಗಿ ಸ್ಪೀಕರ್, ಎಲ್ಲ ಗೊತ್ತಿದ್ದರೆ ನೀವೇ ರಿಪೇರಿ ಮಾಡಿ ಅಂತ ಹೇಳುತ್ತಾರೆ. ಸ್ಪೀಕರ್ ಅವರ ಉಚ್ಛಾರಣೆ ಮೇಲೆ ಯತ್ನಾಳ್ ಜೋಕ್ ಮಾಡಿದಾಗ ಖಾದರ್ ಸೇರಿದಂತೆ ಎಲ್ಲರೂ ನಗುತ್ತಾರೆ.

ಬೆಂಗಳೂರು ಮಾರ್ಚ್ 4: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಧಾನ ಸಭಾಧ್ಯಕ್ಷ ಯುಟಿ ಖಾದರ್ (UT Khader) ಅವರ ನಡುವೆ ಸದನದ ಕಲಾಪವನ್ನು ಬಿತ್ತರ ಮಾಡುವ ಟಿವಿ ಚ್ಯಾನೆಲ್ ಸಿಬ್ಬಂದಿ ವಿರೋಧ ಪಕ್ಷದ ನಾಯಕರ ಬಗ್ಗೆ ತೋರುತ್ತಿರುವ ತಾರತಮ್ಯ ಧೋರಣೆ ಬಗ್ಗೆ ವಾಗ್ವಾದ ಮುಂದುವರಿಯಿತು. ನೀವು ಸದನದ ಅಧ್ಯಕ್ಷರಾಗಿರುವುದರಿಂದ ನಿಷ್ಪಕ್ಷಪಾತವಾಗಿರಬೇಕು, ಅದರೆ ನೀವು ಸಂಪೂರ್ಣವಾಗಿ ಆಡಳಿತ ಪಕ್ಷದ ಕಡೆ ವಾಲಿದ್ದೀರಿ, ಅಧ್ಯಕ್ಷನ ಸ್ಥಾನ ಅಲಂಕರಿಸುವಾಗ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಸಂಗತಿಯನ್ನು ಮರೆತಿರುವಿರಿ ಎಂದು ಹೇಳಿದ ಯತ್ನಾಳ್ ಟಿವಿ ಪ್ರಸರಣದಲ್ಲಿ ನಮ್ಮ ಮುಖವೂ ಕಾಣಬೇಕೆಂಬ ಮನವಿಯನ್ನು ಕಡೆಗಣಿಸುತ್ತಿರುವಿರಿ ಎಂದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಮಾಜದ ಹೆಸರಿನಲ್ಲಿ ಸಭೆ ಸಂಘಟಿಸಬೇಡಿ: ಬೆಂಬಲಿಗರಿಗೆ ಕರೆ ನೀಡುವ ಮೂಲಕ ಯತ್ನಾಳ್ ಬಣಕ್ಕೆ ವಿಜಯೇಂದ್ರ ಟಕ್ಕರ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.