ಶಿವಕುಮಾರ್ ಅಕ್ರಮ ಆದಾಯ ಪ್ರಕರಣದಲ್ಲಿ ನಮ್ಮ ಸರ್ಕಾರದ ನಿರ್ಧಾರ ನ್ಯಾಯಾಲಯದಲ್ಲಿ ಪ್ರಶ್ನಿಸಲು ಯತ್ನಾಳ್ ಸ್ವತಂತ್ರರು: ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ಅಕ್ರಮ ಆದಾಯ ಗಳಿಕೆ ಪ್ರಕಣರಣಕ್ಕೆ ಐದು ವರ್ಷಗಳ ಇತಿಹಾಸವಿದ್ದು ಆಗ ಶಾಸಕರಾಗಿದ್ದ ಶಿವಕುಮಾರ್ ತಿಹಾರ್ ಜೈಲಿಗೆ ಸಹ ಹೋಗಿದ್ದರು. ಇತ್ತೀಚಿಗೆ ಸಿದ್ದರಾಮಮ್ಯ ಸರಕಾರ ಆದೇಶವೊಂದನ್ನು ಹೊರಡಿಸಿ ಪ್ರಕರಣದ ತನಿಖೆಯನ್ನು ನಿಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.
ಬೆಂಗಳೂರು: ಡಿಕೆ ಶಿವಕುಮಾರ್ ಅಕ್ರಮ ಆದಾಯ ಪ್ರಕರಣದಲ್ಲಿ (DK Shivakumar DA case) ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ ಆದೇಶ ಈಗಿನ ಕಾಂಗ್ರೆಸ್ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಗಮನಕ್ಕೆ ತಂದಾಗ, ಹೋಗಲಿ, ಅವರಿಗೆ ಬೇಡ ಅನ್ನೋದಿಕ್ಕೆ ಅಗುತ್ತಾ ಎಂದು ಹೇಳಿದರು. ನಗರದಲ್ಲಿಂದ ಮುನಿಸಿಪಲ್ 2023, 17ನೇ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಸಿದ್ದರಾರಮಯ್ಯ, ತಮ್ಮ ಸರ್ಕಾರದ ನಿರ್ಣಯದ ವಿರುದ್ಧ ಯತ್ನಾಳ್ ಕೋರ್ಟ್ ಮೊರೆ ಹೋಗೋದಿಕ್ಕೆ ಸ್ವತಂತ್ರರು, ಆವರಿಗೆ ಹಕ್ಕಿದೆ, ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ನಿರ್ಣಯ ಸರಿ ಅಲ್ಲ ಅಂತ ತಮ್ಮ ಸರ್ಕಾರ ಅದನ್ನು ವಾಪಸ್ಸು ಪಡೆದಿದೆ, ತಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರ ಸರಿಯೋ ಅಲ್ಲವೋ ಅಂತ ನ್ಯಾಯಾಲಯ ತೀರ್ಪು ನೀಡುತ್ತದೆ ಎಂದು ಹೇಳಿದರು. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ಸೇರಿದಂತೆ ಹಲವರು ಹಾಜರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ