ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ

|

Updated on: Jan 17, 2021 | 4:05 PM

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಳಿದ್ದೆವು. ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ
ಬಸವ ಜಯಮೃತ್ಯುಂಜಯ ಶ್ರೀ
Follow us on

ಕೊಪ್ಪಳ : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಹೋರಾಟ ಮಾಡಲಿದ್ದೇವೆ ಎಂದು ಬಸವ ಜಯಮೃತ್ಯುಂಜಯ ಶ್ರೀ ಹೇಳಿದ್ದಾರೆ. ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಮಾತನಾಡಿದ ಅವರು ನಾವು 2ಎ ಮೀಸಲಾತಿಗಾಗಿ ಪಾದಯಾತ್ರೆ ನಡೆಸಲಿದ್ದೇವೆ. ನಮ್ಮ ಸಮುದಾಯದವಿದ್ಯಾರ್ಥಿಗಳಿಂದ ಹಿಡಿದು ಎಲ್ಲರೂ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನಮ್ಮ ಪರವಾಗಿ ಸಂಗಣ್ಣ ಕರಡಿ, ಸಿ.ಸಿ.ಪಾಟೀಲ್ ಚರ್ಚಿಸುತ್ತಾರೆ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅವಕಾಶ ಮಾಡಿಕೊಡಿ ಎಂದು ಸಚಿವ ಮುರುಗೇಶ್ ನಿರಾಣಿ ಅವರನ್ನು ಕೇಳಿದ್ದೆವು. ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.

ಮೀಸಲಾತಿ ಆದೇಶ ಹೊರಡಿಸುವವರೆಗೆ ಪಾದಯಾತ್ರೆ ಕೈ ಬಿಡಲ್ಲ: ಕಾಶಪ್ಪನವರ್

ನಮ್ಮದು ಸದ್ಯಕ್ಕೆ ಶಾಂತಿಯುತವಾಗಿ ಹೋರಾಟ ನಡೆಯುತ್ತಿದೆ. ನಾವು ಈಗಾಗಲೇ 90 ಕಿಮೀ ಪಾದಯಾತ್ರೆ ಆರಂಭಿಸಿದ್ದೇವೆ. ಮೀಸಲಾತಿ ಆದೇಶ ಹೊರಡಿಸುವವರೆಗೆ ನಾವು ಪಾದಯಾತ್ರೆ ಕೈ ಬಿಡಲ್ಲ. ಇದು ಹೀಗೆಯೇ ಮುಂದುವರಿದರೆ ಕ್ರಾಂತಿಯಾಗುತ್ತದೆ ಎಂದು ವಿಜಯಾನಂದ ಕಾಶಪ್ಪನವರ್ ಹೇಳಿಕೆ ನೀಡಿದ್ದಾರೆ. ಸಚಿವ ಮುರುಗೇಶ್ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಶಾಸಕ ಕಾಶಪ್ಪನವರ್, ಯಡಿಯೂರಪ್ಪ ಅವರ ಮನವೊಲಿಸುವುದಾಗಿ ತಪ್ಪು ಸಂದೇಶ ಕೊಡಬೇಡಿ ಎಂದಿದ್ದಾರೆ.

ನಾವು ಇವತ್ತು ಅಮಿತ್ ಶಾ ಕಾರ್ಯಕ್ರಮಕ್ಕೆ ಘೇರಾವ್ ಹಾಕಬೇಕು ಅಂದುಕೊಂಡಿದ್ದೆವು. ಆದರೆ ಅದು ಅದು ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ನಾವು ಗೌರವಯುತವಾಗಿ ಅಲ್ಲಿಗೆ ಹೋಗ್ತಿಲ್ಲ. ಸಿ.ಸಿ.ಪಾಟೀಲ್,ಸಂಗಣ್ಣ ಕರಡಿ ಹೋಗಿದ್ದಾರೆ. ಅವರು ಚರ್ಚೆ ಮಾಡುವ ಭರವಸೆ ಇದೆ. ಅಗತ್ಯಬಿದ್ದರೆ ನಾವು ಮೋದಿ, ಅಮಿತ್ ಶಾ ಭೇಟಿಯಾಗುತ್ತೇವೆ ಎಂದಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಹೋರಾಟ.. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಶುರು