ಬೆಂಗಳೂರು: ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ (Landless Female Farm Workers) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸಿಹಿ ಸುದ್ದಿ ನೀಡಿದ್ದಾರೆ. ಮೊನ್ನೇ ಅಷ್ಟೇ 2023-24ನೇ ಸಾಲಿನ ಬಜೆಟ್‌ನಲ್ಲಿ ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು 500 ರೂ. ಸಹಾಯಧನ ನೀಡುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದರು. ಅದ್ರೆ, ಇಂದು(ಫೆಬ್ರುವರಿ 23) ಸದನದಲ್ಲಿ ಬೊಮ್ಮಾಯಿ ಸಹಾಯಧನವನ್ನು 1000 ರೂ. ನೀಡುವುದಾಗಿ ಘೋಷಿಸಿದರು.
ಇಂದು (ಫೆಬ್ರುವರಿ 23) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮೇಲಿನ ಉತ್ತರ ವೇಳೆ ನೀಡುವ ವೇಳೆ ದುಡಿಯುವ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 1000 ರೂ. ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದರು. ಈ ಮೂಲಕ ಬಜೆಟ್ ನಲ್ಲಿ ಘೋಷಿಸಿದ್ದ 500 ರೂ. ಗಳನ್ನು 1000 ರೂ. ಗೆ ಏರಿಕೆಯಾಗಿದೆ.
ವಿದ್ಯಾವಾಹಿನಿ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ಉಚಿತ ಶಿಕ್ಷಣ ಎಸ್ಎಸ್ಎಲ್ಸಿಯಿಂದ ಡಿಗ್ರಿವರೆಗೆ ವಿಸ್ತರಿಸಿದ್ದೇವೆ. ಇದು ಐತಿಹಾಸಿಕ ನಿರ್ಧಾರವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಸಮಸ್ಯೆ ಬಗೆಹರಿಸಲು ಶೆಡ್ಯೂಲ್ ಹೆಚ್ಚಿಸಲಾಗಿದೆ. 1 ಸಾವಿರ ಘೋಷಿಸಿದ್ದ ಬಸ್ಗಳ ಶೆಡ್ಯೂಲ್ 2 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಬಜೆಟ್ ಮೇಲಿನ ಉತ್ತರ ವೇಳೆ ಸಿಎಂ ಬೊಮ್ಮಾಯಿ ಘೋಷಿಸಿದರು.
ನಾವು ಮಂಡಿಸಿರುವ ಬಜೆಟ್ ಕಾರ್ಯಕ್ರಮ ಎರಡು ರೀತಿ ಇದೆ. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಮೂಲಸೌಕರ್ಯ ಸರಿದೂಗಿಸಿಕೊಳ್ಳಬೇಕು. ಸರಿದೂಗಿಸಿಕೊಂಡು ಹೋದ್ರೆ ಮಾತ್ರ ಕರ್ನಾಟಕ ಕಲ್ಯಾಣ ಆಗಲಿದೆ. ಕೃಷಿ ಕ್ಷೇತ್ರ ನಂಬಿಕೊಂಡು 60% ಜನ ಇದ್ದಾರೆ. 130 ಕೋಟಿ ಜನಸಂಖ್ಯೆಗೂ ಆಹಾರ ನೀಡುವ ಶಕ್ತಿ ನಮಗಿದೆ. ಆಹಾರ ಕೊಡುವ ರೈತನಿಗೆ ಶಕ್ತಿ ತುಂಬುವ ಪಾಲಿಸಿ ಬರಬೇಕಿದೆ. ಆಗ ಮಾತ್ರ ಕೃಷಿ ಕ್ಷೇತ್ರ ಸದೃಢವಾಗಿರಲಿದೆ ಎಂದು ಹೇಳಿದರು.
ರೈತನ ಆರೋಗ್ಯ ದೃಷ್ಟಿಯಿಂದ ಯಶಸ್ವಿನಿ ಯೋಜನೆ ತರಲಾಗಿದೆ. ಸಾಲದ ವ್ಯಾಪ್ತಿ ಮಿತಿ 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಿಸಲಾಗಿದೆ, 5 ಲಕ್ಷದವರೆಗೂ 0% ಬಡ್ಡಿ ಸಾಲ ನೀಡಲಾಗುತ್ತಿದೆ. ಭೂಸಿರಿ ಯೋಜನೆಯಡಿ ಸರ್ಕಾರದಿಂದ 2,500 ಹಣ ವಿತರಣೆ ಹಾಗೂ ನಬಾರ್ಡ್ನಿಂದ 7,500 ರೂ. ಕೊಡಲಾಗುವುದು ಎಂದು ತಿಳಿಸಿದರು.
Published On - 6:02 pm, Thu, 23 February 23