ರೋಹಿಣಿ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಟಿವಿ9 ಹೊರತುಪಡಿಸಿ ರೂಪಾ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ಕೋರ್ಟ್ ನಿರ್ಬಂಧ
ರೋಹಿಣಿ ಸಿಂಧೂರಿ ವಿರುದ್ಧದ ಮಾನಹಾನಿಕರ ಹೇಳಿಕೆಗೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಇದರಿಂದ IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಕೊಂಚ ರಿಲೀಫ್ ಸಿಕ್ಕಿದೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ TV9 ಹೊರತುಪಡಿಸಿ ಐಪಿಎಸ್ ಅಧಿಕಾರಿ ಡಿ.ರೂಪಾ (D Roopa Moudgil) ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿ ಇಂದು(ಫೆಬ್ರುವರಿ 23) ಬೆಂಗಳೂರಿನ 74ನೇ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ಆದಶ ಹೊರಡಿಸಿದೆ. Caveat ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಟಿವಿ9 ಹೊರತುಪಡಿಸಿ ರೂಪಾ ಸೇರಿ ಇನ್ನುಳಿದಂತೆ ಎಲ್ಲಾ ಪ್ರತಿವಾದಿಗಳಿಗೆ ರೋಹಿಣಿ ವಿರುದ್ಧ ಮಾನಹಾನಿಕರ, ಆಧಾರರಹಿತ ಹೇಳಿಕೆ ನೀಡದಂತೆ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಕೋರ್ಟ್, ಟಿವಿ9 ಹೊರತುಪಡಿಸಿ ಎಲ್ಲಾ ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಿದೆ. ಇದರಿಂದ IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಕೊಂಚ ರಿಲೀಫ್ ಸಿಕ್ಕಿದೆ.
ಇನ್ನು ರೋಹಿಣಿ ಸಿಂಧೂರಿ ಅರ್ಜಿಗೆ ಆಕ್ಷೇಪ ಸಲ್ಲಿಸಲು ಐಪಿಎಸ್ ಡಿ ರೂಪಾ ಮೌದ್ಗಿಲ್ ಅವರಿಗೂ ಕೋರ್ಟ್ ಕಾಲವಕಾಶ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿದೆ. ಮಾನಹಾನಿಕರ ಹಾಗೂ ಆರೋಪಗಳನ್ನು ಮಾಡದಂತೆ ನಿರ್ಬಂಧಕಾಜ್ಞೆ ನೀಡಲು ರೋಹಿಣಿ ಸಿಂಧೂರಿ ಅವರು ಕೋರ್ಟ್ಗೆ ಮನವಿ ಮಾಡಿದ್ದರು. ಇದರಲ್ಲಿ ರೂಪಾ ಸೇರಿದಂತೆ ಎಲ್ಲಾ ಮಾಧ್ಯಗಳನ್ನು ಪ್ರತಿವಾದಿಯನ್ನಾಗಿ ಮಾಡಿದ್ದರು. ನಿನ್ನೆ (ಫೆಬ್ರುವರಿ 22) ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ಫೆ.23ಕ್ಕೆ ಕಾಯ್ದಿರಿಸಿತ್ತು. ಇದೀಗ ಕೋರ್ಟ್ ಟಿವಿ9 ಹೊರತುಪಡಿಸಿ ಎಲ್ಲಾ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಿ ಮುಂದಿನ ವಿಚಾರಣೆ ಮಾರ್ಚ 7ಕ್ಕೆ ಮುಂದೂಡಿದೆ.
Published On - 4:50 pm, Thu, 23 February 23