Rohini Vs Roopa: ರೂಪಾ ವಿರುದ್ಧ ಕೋರ್ಟ್ಗೆ ರೋಹಿಣಿ ಸಿಂಧೂರಿ ಅರ್ಜಿ, ಆದೇಶ ಕಾಯ್ದಿರಿಸಿದ ನ್ಯಾಯಾಲಯ
ರೂಪಾ ಮೌದ್ಗಿಲ್ ವಿರುದ್ಧ ಕೋರ್ಟ್ಗೆ ರೋಹಿಣಿ ಸಿಂಧೂರಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ಕೋರ್ಟ್ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಐಪಿಎಸ್ ಡಿ.ರೂಪಾ ಮೌದ್ಗಿಲ್( ನಡುವಿನ ಆರೋಪ-ಪ್ರತ್ಯಾರೋಪ ಮತ್ತೊಂದು ಹಂತಕ್ಕೆ ಹೋಗಿದೆ. ಇಬ್ಬರೂ ಅಧಿಕಾರಿಗಳು ಪರಸ್ಪರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರೋಹಿಣಿ ಸಿಂಧೂರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರೂಪಾ ವಿರುದ್ಧ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ರೂಪಾ ಮೌದ್ಗಿಲ್ ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನಿಡಲು ಮನವಿ ಮಾಡಿದ್ದಾರೆ. ಆದ್ರೆ, ಬೆಂಗಳೂರಿನ 74ನೇ ಸಿಟಿ ಸಿವಿಲ್ ಕೋರ್ಟ್ ಕೋರ್ಟ್ ಆದೇಶವನ್ನು ನಾಳೆಗೆ (ಫೆ.23) ಕಾಯ್ದಿರಿಸಿದೆ.
ಡಿ.ರೂಪಾ ವಿರುದ್ಧ ನಿರ್ಬಂಧಕಾಜ್ಞೆ ನೀಡಲು ಸಿಂಧೂರಿ ಮನವಿ ಮಾಡಿದ್ದು, ಇದನ್ನು ಮಧ್ಯಂತರ ಆದೇಶವನ್ನು 74ನೇ ಸಿಟಿ ಸಿವಿಲ್ ಕೋರ್ಟ್ ಕಾಯ್ದಿರಿಸಿದ್ದು, ನಿರ್ಬಂಧಕಾಜ್ಞೆ ನೀಡಬೇಕೇ ಬೇಡವೇ ಎಂದು ನಾಳೆ(ಗುರುವಾರ) ತೀರ್ಪು ಪ್ರಕಟಿಸಲಿದೆ.ಇದರಿಂದ ನ್ಯಾಯಾಲಯ ಏನು ತೀರ್ಪು ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ರೋಹಿಣಿ ಪರ ವಕೀಲರ ಪರ ವಾದ ಹೀಗಿದೆ
ರೂಪಾ ಮೌದ್ಗಿಲ್ ಸೈಬರ್ ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದರು. ಐಪಿಎಸ್ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆಯಿದೆ. ಮೊಬೈಲ್ನಲ್ಲಿನ ಮಾಹಿತಿ ಕಾನೂನುಬಾಹಿರವಾಗಿ ಪಡೆದುಕೊಂಡಿದ್ದಾರೆ. ಡಿ.ರೂಪಾ ಕ್ರಮ ಸಂಪೂರ್ಣ ಕಾನೂನುಬಾಹಿರ ಎಂದು ರೋಹಿಣಿ ಪರ ವಕೀಲರು ವಾದ ಮಂಡಿಸಿದರು.
ಈ ವೇಳೆ ರೂಪಾ ಮೇಲೆ ಸೂಕ್ತ ಪ್ರಾಧಿಕಾರದಲ್ಲಿ ದೂರು ನೀಡಬಹುದಿತ್ತಲ್ಲಾ ಎಂದು ರೋಹಿಣಿ ಸಿಂಧೂರಿ ಪರ ವಕೀಲರಿಗೆ ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ರೋಹಿಣಿ ಪರ ವಕೀಲ ಪ್ರತಿಕ್ರಿಯಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇವೆ ಎಂದು ಉತ್ತರಿಸಿದರು.
ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ರೂಪಾ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಅವರ ಖಾಸಗಿ ಮೊಬೈಲ್ ನಂಬರ್ ಅನ್ನೂ ಬಹಿರಂಗಪಡಿಸಿದ್ದಾರೆ. ಇದರಿಂದಾಗಿ ನೂರಾರು ಅಪರಿಚಿತರು ಕರೆ ಮಾಡುತ್ತಿದ್ದಾರೆ. ರೂಪಾ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ಮಾನಹಾನಿಕರ ಹೇಳಿಕೆ ನೀಡುತ್ತಿದ್ದಾರೆ. ಕಾನೂನಿನ ಚೌಕಟ್ಟನ್ನು ಮೀರಿ ರೂಪಾ ಹೇಳಿಕೆ ನೀಡುತ್ತಿದ್ದಾರೆ ಎಂದು ಕೋರ್ಟ್ ನಲ್ಲಿ ರೋಹಿಣಿ ಸಿಂಧೂರಿ ಪರ ವಾದಮಂಡನೆ ಮಾಡಿದ್ದಾರೆ.
ಇದನ್ನೂ ಓದಿ: ರೂಪಾ ಆರೋಪಿಸಿರುವ ರೋಹಿಣಿ ಸಿಂಧೂರಿಯ ಕೋಟ್ಯಾಂತರ ರೂ. ಭವ್ಯ ಬಂಗಲೆ ಹೇಗಿದೆ ಗೊತ್ತಾ?ಇಲ್ಲಿವೆ ಫೋಟೋಸ್
ದೂರು ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಸೂಕ್ತ ಪ್ರಾಧಿಕಾರವೇ? ಎಂದು ಸಿಂಧೂರಿ ಪರ ವಕೀಲರಿಗೆ ನ್ಯಾಯಾಧೀಶರು ಮತ್ತೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೋಹಿಣಿ ಪರ ವಕೀಲ, ಸಿವಿಲ್ ಸರ್ವೀಸ್ ನಿಯಮಾವಳಿ ಅನುಸಾರ ದೂರು ನೀಡಿದ್ದೇನೆ. ನಾನು ಕಾನೂನಿನ ಮಾರ್ಗದಲ್ಲೇ ದೂರು ನೀಡಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರೂಪಾ ವಿರುದ್ಧ ದೂರು ನೀಡಿದ್ದೇವೆ. ಪೊಲೀಸರಿಗೂ ರೂಪಾ ಮೌದ್ಗಿಲ್ ವಿರುದ್ಧ ದೂರು ದಾಖಲಿಸಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆಯನ್ನೂ ರೂಪಾ ಪಾಲಿಸುತ್ತಿಲ್ಲ . ಸರ್ಕಾರದ ಸುತ್ತೋಲೆ ಧಿಕ್ಕರಿಸಿ ಹೇಳಿಕೆ ಮುಂದುವರಿಸಿದ್ದಾರೆ . ನಾನು ಕಾನೂನು ಚೌಕಟ್ಟು ಪಾಲಿಸಿದ್ದೇವೆ, ರೂಪಾ ಪಾಲಿಸಿಲ್ಲ. ಹೀಗಾಗಿ ರೂಪಾ ಮೌದ್ಗಿಲ್ರಿಗೆ ನಿರ್ಬಂಧಿಸಲು ಮನವಿ ಮಾಡಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಅವರು ಸಾಮಾಜಿಕ ಜಾಲತಾಣ, ಮಾಧ್ಯಮಗಳನ್ನೂ ಪ್ರತಿವಾದಿಯನ್ನಾಗಿಸಲಾಗಿದೆ. ಇನ್ನು ರೂಪಾ ಮೌದ್ಗಿಲ್ ಅವರನ್ನು 60ನೇ ಪ್ರತಿವಾದಿಯನ್ನಾಗಿ ಮಾಡಿದ್ದಾರೆ.
Published On - 4:32 pm, Wed, 22 February 23