ನೈಟ್ ಕರ್ಫ್ಯೂ: ದೂರದ ಪ್ರಯಾಣಿಕರು ಡೋಂಟ್ ವರಿ ಮಾಡ್ಕೋಬೇಡಿ ಅಂದ್ರು ಬಸವರಾಜ ಬೊಮ್ಮಾಯಿ

ಪ್ರಯಾಣಿಕರು ರಾತ್ರಿ ವೇಳೆ ಅಥವಾ ಬೆಳಿಗ್ಗಿನ ಜಾವ ನಿಲ್ದಾಣಗಳಿಗೆ ತಲುಪಿದರು ಕೂಡಾ ಯಾವುದೇ ಸಮಸ್ಯೆಗಳಿಲ್ಲದೆ ಮನೆಗೆ ಹೋಗಲು ಆಟೋ ಹಾಗೂ ಟ್ಯಾಕ್ಸಿಗಳು ಸಿಗುತ್ತದೆ.

ನೈಟ್ ಕರ್ಫ್ಯೂ: ದೂರದ ಪ್ರಯಾಣಿಕರು ಡೋಂಟ್ ವರಿ ಮಾಡ್ಕೋಬೇಡಿ ಅಂದ್ರು ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
sandhya thejappa

| Edited By: sadhu srinath

Dec 24, 2020 | 10:27 AM

ಬೆಂಗಳೂರು: ಇಂದಿನಿಂದ ನೈಟ್ ಕರ್ಫ್ಯೂ ಹಿನ್ನೆಲೆ ದೂರದ ಊರುಗಳಿಗೆ ಪ್ರಯಾಣ ಮಾಡುವವರಿಗೆ ಯಾವುದೇ ತೊಂದರೆಗಳು ಆಗುವುದಿಲ್ಲವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಯಾಣಿಕರು ರಾತ್ರಿ ವೇಳೆ ಅಥವಾ ಬೆಳಿಗ್ಗಿನ ಜಾವ ನಿಲ್ದಾಣಗಳಿಗೆ ತಲುಪಿದರು ಕೂಡಾ ಯಾವುದೇ ಸಮಸ್ಯೆಗಳಿಲ್ಲದೆ ಮನೆಗೆ ಹೋಗಲು ಆಟೋ ಹಾಗೂ ಟ್ಯಾಕ್ಸಿಗಳು ಸಿಗುತ್ತದೆ. ದೂರ ಪ್ರಯಾಣದ ಬಸ್​ಗಳು ಮತ್ತು ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಪೊಲೀಸರಿಗೆ ಸೂಕ್ತ ಟ್ರಾವೆಲ್ ಟಿಕೆಟ್​ಗಳನ್ನು ಕಡ್ಡಾಯವಾಗಿ ತೋರಿಸಬೇಕೆಂದು ತಿಳಿಸಿದ ಗೃಹ ಸಚಿವರು ಬೇಕಾಬಿಟ್ಟಿ ಓಡಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಗತ್ಯ ಸೇವೆ ಮತ್ತು ನೈಟ್ ಶಿಫ್ಟ್​ನಲ್ಲಿ ಕೆಲಸ ಮಾಡುವವರಿಗೆ ವಿನಾಯಿತಿ ನೀಡಲಾಗಿದ್ದು, ರಾತ್ರಿ ಹನ್ನೊಂದು ಘಂಟೆ ಬಳಿಕ ಅನಗತ್ಯ ಕಾರಣಕ್ಕೆ ರಸ್ತೆಗೆ ಇಳಿಯುವವರ ಮೇಲೆ ಕೇಸ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಸಭೆ ಮುಕ್ತಾಯ: Night Curfew ಜಾರಿ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada