ಶಿವಮೊಗ್ಗದಲ್ಲೂ ಶುರುವಾಯ್ತಾ ರೂಪಾಂತರಿ ಕೊರೊನಾ ಆತಂಕ? ಬ್ರಿಟನ್ನಿಂದ ಬಂದ ನಾಲ್ವರಿಗೆ ಪಾಸಿಟಿವ್
ಬ್ರಿಟನ್ನಿಂದ ಶಿವಮೊಗ್ಗಕ್ಕೆ ಕುಟುಂಬವೊಂದು ಆಗಮಿಸಿದ್ದು, ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ನಾಲ್ವರಿಗೆ ಕೊರೊನಾ ಪಾಸಿಟಿವ್ ವರದಿ ದೃಢವಾಗಿದೆ. ರೂಪಾಂತರ ಕೊರೊನಾದ ಸಂಶಯದಿಂದ ಬೆಂಗಳೂರಿಗೆ ಕೊರೊನಾ ಪರೀಕ್ಷಾ ವರದಿಯನ್ನು ಕಳುಹಿಸಲಾಗಿದೆ
ಶಿವಮೊಗ್ಗ: ಇನ್ನೇನು ಕೊರೊನಾ ವೈರಸ್ ಸಾಂಕ್ರಾಮಿಕದ ಹಾರಾಟ ಮುಗೀತು ಅನ್ನುವಷ್ಟರಲ್ಲೇ ಕೊರೊನಾ ಎರಡನೇ ಹಾವಳಿ ಆರಂಭವಾಗಿದೆ. ಜನರಿಗೆ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಇದೀಗ, ಬ್ರಿಟನ್ನಿಂದ ಶಿವಮೊಗ್ಗಕ್ಕೆ ಬಂದ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಶಿವಮೊಗ್ಗ ಜಿಲ್ಲೆಗೂ ರೂಪಾಂತರ ಕೊರೊನಾದ ಆತಂಕ ಶುರುವಾಗಿದೆ.
ಬ್ರಿಟನ್ನಿಂದ ಶಿವಮೊಗ್ಗಕ್ಕೆ ಕುಟುಂಬವೊಂದು ಆಗಮಿಸಿದ್ದು, ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ರೂಪಾಂತರ ಕೊರೊನಾ ಎಂಬ ಸಂಶಯ ಮೂಡಿದ್ದರಿಂದ, ವರದಿಯನ್ನು ಬೆಂಗಳೂರಿನ ಲ್ಯಾಬ್ಗೆ ರವಾನಿಸಲಾಗಿದ್ದು, ವರದಿಯ ಇಂದು ಮಧ್ಯಾಹ್ನದ ವೇಳೆಗೆ ಬರಲಿದೆ.
ಕೊರೊನಾ ರೂಪಾಂತರ: ಬ್ರಿಟನ್ನಿಂದ ಆಗಮಿಸುವವರ ತಪಾಸಣೆಗಾಗಿ ಕೇಂದ್ರದಿಂದ ನಿಯಮಾವಳಿ ಬಿಡುಗಡೆ
Published On - 8:58 am, Thu, 24 December 20