ಮನೆಯಲ್ಲಿ ಈ ಹಾವು ಇದ್ದರೆ ಆರ್ಥಿಕ ಪ್ರಗತಿಯಾಗುತ್ತೆ ಎಂದು ಹಾವು ಮಾರಾಟಕ್ಕೆ ಯತ್ನ, ಅರೆಸ್ಟ್

ಎರಡು ತಲೆ ಹಾವೆಂದು ಜನರನ್ನು ನಂಬಿಸಿ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮೋಸ ಮಾಡಿ ಹಾವು ಮಾರಾಟ ಮಾಡುತ್ತಿದ್ದ ಗ್ಯಾಂಗ್​ನನ್ನು ಸೆರೆ ಹಿಡಿದಿದ್ದಾರೆ.

ಮನೆಯಲ್ಲಿ ಈ ಹಾವು ಇದ್ದರೆ ಆರ್ಥಿಕ ಪ್ರಗತಿಯಾಗುತ್ತೆ ಎಂದು ಹಾವು ಮಾರಾಟಕ್ಕೆ ಯತ್ನ, ಅರೆಸ್ಟ್
ಎರಡು ತಲೆ ಹಾವೆಂದು ಜನರನ್ನು ನಂಬಿಸಿ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದವರ ಬಂಧನ
Ayesha Banu

|

Dec 24, 2020 | 10:18 AM

ಮೈಸೂರು: ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಸಂಚಾರಿ ದಳ ಸಿಬ್ಬಂದಿ ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕುಮಾರ್(32), ಶಿವಪ್ರಕಾಶ್(32), ರವೀಶ್(44), ಚಂದ್ರ(38) ಬಂಧಿತರು.

ಬಂಧಿತರು ಎರಡು ತಲೆ ಹಾವೆಂದು ಜನರನ್ನು ನಂಬಿಸಿ ಮಣ್ಣು ಮುಕ್ಕ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಮೋಸ ಮಾಡಿ ಹಾವು ಮಾರಾಟ ಮಾಡುತ್ತಿದ್ದ ಗ್ಯಾಂಗ್​ನನ್ನು ಸೆರೆ ಹಿಡಿದಿದ್ದಾರೆ. ಬಂಧಿತರಿಂದ ಒಂದು ಮಾರುತಿ ವ್ಯಾನ್, ಮೂರು ದ್ವಿಚಕ್ರ ವಾಹನ, ಬ್ಯಾಗ್‌ನಲ್ಲಿದ್ದ ಮಣ್ಣು ಮುಕ್ಕ ಹಾವು ವಶಕ್ಕೆ ಪಡೆಯಲಾಗಿದೆ.

ಮನೆಯಲ್ಲಿ ಈ ಹಾವು ಇದ್ದರೆ ಆರ್ಥಿಕ ಪ್ರಗತಿಯಾಗುತ್ತೆ. ಎಲ್ಲವೂ ಒಳಿತಾಗುತ್ತದೆ ಎಂದು ನಂಬಿಸಿ ವಂಚಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಕ್ಷಕನನ್ನೇ ಭಕ್ಷಿಸಿದ ಹಾವು: 1 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಉರಗ ತಜ್ಞ ಸ್ನೇಕ್ ಡ್ಯಾನಿ ಸಾವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada