ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಶಿರಹಟ್ಟಿ ಕ್ಷೇತ್ರದ ಟಿಕೆಟ್ ಮಾರಿಕೊಂಡಿದ್ದರು: ರಾಮಣ್ಣ ಲಮಾಣಿ

|

Updated on: Apr 02, 2024 | 11:31 AM

ಇದೇ ಯೋಜನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಲಿನ ಬಜೆಟ್ ನಲ್ಲಿ 279 ಕೋಟಿ ರೂ. ಘೋಷಣೆ ಮಾಡಿದ್ದಾರೆ ಎಂದರ ರಾಮಣ್ಣ 2024 ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಅವರನ್ನು ಗೆಲ್ಲಿಸುವ ಪಣ ತಾನು ತೊಟ್ಟಿರುವುದಾಗಿ ಆವೇಶದಲ್ಲಿ ಹೇಳಿದರು.

ಗದಗ: ಶಿರಹಟ್ಟಿಯ ಮಾಜಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ (Ramanna Lamani) ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಗಂಭೀರವಾದ ಅರೋಪ ಮಾಡುತ್ತಿದ್ದಾರೆ. 2023 ರಲ್ಲಿ ರಾಮಣ್ಣಗೆ ಟಿಕೆಟ್ ನಿರಾಕರಿಸಿದಾಗ ಅವರು ಕಾಂಗ್ರೆಸ್ ಪಕ್ಷ ಸೇರಿದ್ದರು. ತನ್ನ ಬೇರುಗಳು ಕಾಂಗ್ರೆಸ್ ನಲ್ಲಿವೆ ಎಂದು ಹೇಳುವ ಅವರು 2023 ವಿಧಾನಸಭಾ ಚುನಾವಣೆಯಲ್ಲಿ ಅಗ ಸಿಎಂ ಆಗಿದ್ದ ಬೊಮ್ಮಾಯಿ ಶಿರಹಟ್ಟಿ ಕ್ಷೇತ್ರ (Shirahatti Assembly seat) ಟಿಕೆಟ್ ಅನ್ನು ಮಾರಿಕೊಂಡಿದ್ದರು ಎಂದು ಆರೋಪಿಸಿದರು. ಹಾಗೆಯೇ, ಶಿರಹಟ್ಟಿಯ ಮುರುಡಿ ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿದ ಬೊಮ್ಮಾಯಿ ಅದಕ್ಕೆ ಹಣ ಬಿಡುಗಡೆ ಮಾಡದೆ ಮೋಸ ಮಾಡಿದರು ಎಂದು ರಾಮಣ್ಣ ಕಿಡಿ ಕಾರಿದರು. ಇದೇ ಯೋಜನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಲಿನ ಬಜೆಟ್ ನಲ್ಲಿ 279 ಕೋಟಿ ರೂ. ಘೋಷಣೆ ಮಾಡಿದ್ದಾರೆ ಎಂದರ ರಾಮಣ್ಣ 2024 ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಅವರನ್ನು ಗೆಲ್ಲಿಸುವ ಪಣ ತಾನು ತೊಟ್ಟಿರುವುದಾಗಿ ಆವೇಶದಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಮಾಜಿ ಶಾಸಕ: ಕೇಸರಿ ಪಡೆಯ ಒಂದು ತಂಡ ಸಿನಿಮೀಯಲ್ಲಿ ರೀತಿಯಲ್ಲಿ ಮಾತುಕತೆ: ಡಿಕೆಶಿ ಬಾಂಬ್