ಕೂಲ್ ಕೂಲ್ ವಾತಾವರಣದಲ್ಲಿ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳು! ಕಡಲನಗರಿಯ ರಣ ಬೇಸಿಗೆಯಲ್ಲಿ ಇದು ಹೇಗೆ ಸಾಧ್ಯ?

ಸುಮಾರು 150 ಎಕ್ರೆಯ ಉದ್ಯಾನವನದಲ್ಲಿ 98 ಪ್ರಭೇದಗಳ ಪ್ರಾಣಿ ಪಕ್ಷಿಗಳಿವೆ. ಕುಡಿಯಲು ನೀರು ಸಮರ್ಪಕವಾಗಿ ಸಿಗುವ ಜತೆಗೆ, ಪ್ರಾಣಿಗಳು ಸುತ್ತಾಡುವ ಪ್ರದೇಶದಲ್ಲಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲಿಯೂ ಪ್ರಾಣಿಗಳನ್ನು ಇರಿಸಲಾಗಿರುವ ಗೂಡಿನ ಹೊರಭಾಗದಲ್ಲಿ ಫ್ಯಾನ್‌ ಸೌಕರ್ಯವನ್ನು ಸಹ ಮಾಡಿಸಲಾಗಿದೆ. ಸೆಖೆ ಹೆಚ್ಚಿರುವ ಸಮಯದಲ್ಲಿ ಪೈಪುಗಳ ಮೂಲಕ ಪ್ರಾಣಿಗಳ ಮೈಮೇಲೆ ನೀರು ಚಿಮ್ಮಿಸಲಾಗುತ್ತಿದೆ. ಇನ್ನು ಮೇಲಿಂದ ನೀರು ಬೀಳುವ ಸಂದರ್ಭ ಪ್ರಾಣಿಗಳು ಅದಕ್ಕೂ ಮೈಯೊಡ್ಡಿ ನಿಲ್ಲುವುದನ್ನು ನೋಡುವುದೇ ಮಹಾಸೊಬಗು!

ಕೂಲ್ ಕೂಲ್ ವಾತಾವರಣದಲ್ಲಿ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳು! ಕಡಲನಗರಿಯ ರಣ ಬೇಸಿಗೆಯಲ್ಲಿ ಇದು ಹೇಗೆ ಸಾಧ್ಯ?
ಕೂಲ್ ಕೂಲ್ ವಾತಾವರಣದಲ್ಲಿ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳು!
Follow us
| Updated By: ಸಾಧು ಶ್ರೀನಾಥ್​

Updated on: Apr 02, 2024 | 11:45 AM

ಈಗ ಹೊರಗಡೆ ಎಲ್ಲೇ ಹೋದ್ರು ಜನರ ಬಾಯಲ್ಲಿ ಬರೋದು ಒಂದೇ ಮಾತು, ಅದೇನಂದ್ರೆ ಎಂತಾ ಸೆಖೆ ಮರೆ ಎಂದು. ಈ ಬಿಸಿಲ ಬೇಗೆಗೆ ಮೃಗಾಲಯದಲ್ಲಿರುವ ಪ್ರಾಣಿಗಳು ಸಹ ಫುಲ್ ಸುಸ್ತಾಗಿ ಹೋಗಿದ್ದಾವೆ. ಹೀಗಾಗಿ ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಕೂಲ್ ಕೂಲ್ ವಾತಾವರಣ (cool weather) ಕಲ್ಪಿಸಲಾಗುತ್ತಿದೆ. ಅರೇ ಅದೇಗೆ ಅಂತೀರಾ.. ಈ ಸ್ಟೋರಿ ನೋಡಿ (Summer 2024). ಸ್ಪಿಂಕ್ಲರ್‌ನಿಂದ ಚಿಮ್ಮುತ್ತಿರುವ ನೀರಿಗೆ ಮೈಯೊಡ್ಡಿ ನಿಂತಿರುವ ಪ್ರಾಣಿಗಳು, ಫ್ಯಾನ್ ಗಾಳಿಗೆ ಬೋನಿನೊಳಗೆ ಸದ್ದು ಮಾಡುತ್ತ ಕೂತಿರುವ ಹುಲಿಗಳು. ಇದು ಮಂಗಳೂರು ನಗರ ಹೊರವಲಯದ ಪಿಲಿಕುಳ ಮೃಗಾಲಯದಲ್ಲಿ (Pilikula Zoo) ಸದ್ಯ ಕಂಡು ಬರುತ್ತಿರುವ ದೃಶ್ಯಗಳು.

ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ನಗರಗಳಲ್ಲಿ ವಿಪರೀತ ಸೆಖೆಯಿಂದ ಜನ ಸುಸ್ತಾಗಿದ್ದಾರೆ. ಅದರಲ್ಲೂ ಕಡಲನಗರಿ ಮಂಗಳೂರಿನಲ್ಲಿ ಬಿರು ಬಿಸಿಲಿಗೆ ಸುತ್ತಾಡುವುದೇ ಕಷ್ಟ ಎಂಬಂತಾಗಿದೆ. ಪ್ರಾಣಿಗಳಿಗೂ ಇದೇ ಸಮಸ್ಯೆ ಎದುರಾಗಿದ್ದು, ಅದರಲ್ಲಿಯೂ ಪಿಲಿಕುಳದಲ್ಲಿರುವ ಪ್ರಾಣಿಗಳಿಗೂ ಸೆಕೆ ಹೊರತಾಗಿಲ್ಲ. ಆದ್ರೆ ಇಲ್ಲಿ ಅವುಗಳನ್ನು ತಂಪಾಗಿರಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳು ನಡೆದಿದೆ. ಪ್ರಾಣಿಗಳನ್ನು ತಂಪಾದ ವಾತಾವರಣದಲ್ಲಿ ಇರಿಸುವ ನಿಟ್ಟಿನಲ್ಲಿ ಕೆಲವೆಡೆ ಹೆಚ್ಚುವರಿ ಫ್ಯಾನ್‌ ಹಾಗೂ ಪ್ರಾಣಿಗಳಿಗೆ ನಿಗದಿತವಾಗಿ ನೀರು ಚಿಮ್ಮಿಸುವ ಕಾರ್ಯವೂ ನಡೆಯುತ್ತಿದೆ ಎಂದು ಎಚ್‌. ಜಯಪ್ರಕಾಶ್‌ ಭಂಡಾರಿ, ನಿರ್ದೇಶಕ, ಪಿಲಿಕುಳ ಜೈವಿಕ ಉದ್ಯಾನವನ ಅವರು ತಿಳಿಸಿದ್ದಾರೆ.

ಪಿಲಿಕುಳ ಮೃಗಾಲಯದ ಪರಿಸರದಲ್ಲಿ ಹೇರಳವಾಗಿ ಗಿಡ, ಮರಗಳಿದ್ದರೂ ಬಿಸಿಲಿನ ತಾಪ ಕಡಿಮೆಯಿಲ್ಲ. ಹೀಗಾಗಿ ಹೆಚ್ಚಿನ ಪ್ರಮಾಣದ ಕುಡಿಯುವ ನೀರು ಪ್ರಾಣಿಗಳಿಗೆ ಅಗತ್ಯವಿದೆ. ಸುಮಾರು 150 ಎಕ್ರೆಯಲ್ಲಿ ಹರಡಿಕೊಂಡ ಉದ್ಯಾನವನದಲ್ಲಿ 98 ಪ್ರಭೇದಗಳ ಸಾವಿರಕ್ಕೂ ಅಧಿಕ ಪ್ರಾಣಿ ಪಕ್ಷಿಗಳಿವೆ. ವಿಶೇಷವಾಗಿ ಹುಲಿ, ಸಿಂಹ, ಚಿರತೆ, ನೀರಾನೆ, ಕರಡಿ ಸಹಿತ ದೊಡ್ಡ ಪ್ರಾಣಿಗಳು ಸೆಖೆಯಿಂದ ಸಾಮಾನ್ಯವಾಗಿ ಸಮಸ್ಯೆ ಎದುರಿಸುತ್ತದೆ. ಹೀಗಾಗಿ ಅವುಗಳಿಗೆ ಹೆಚ್ಚಿನ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ.

Also Read: ಮಂಗಳೂರು -ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜನೆ, ಚುನಾವಣಾ ಆಯೋಗದಿಂದ ತುರ್ತು ನೋಟಿಸ್​

ಕುಡಿಯಲು ನೀರು ಸಮರ್ಪಕವಾಗಿ ಸಿಗುವ ಜತೆಗೆ, ಪ್ರಾಣಿಗಳು ಸುತ್ತಾಡುವ ಪ್ರದೇಶದಲ್ಲಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲಿಯೂ ಪ್ರಾಣಿಗಳನ್ನು ಇರಿಸಲಾಗಿರುವ ಗೂಡಿನ ಹೊರಭಾಗದಲ್ಲಿ ಫ್ಯಾನ್‌ ಸೌಕರ್ಯವನ್ನು ಸಹ ಮಾಡಿಸಲಾಗಿದೆ. ಸೆಖೆ ಹೆಚ್ಚಿರುವ ಸಮಯದಲ್ಲಿ ಪೈಪುಗಳ ಮೂಲಕ ಪ್ರಾಣಿಗಳ ಮೈಮೇಲೆ ನೀರು ಚಿಮ್ಮಿಸಲಾಗುತ್ತಿದೆ. ದಿನದಲ್ಲಿ ಸುಮಾರು ಎರಡು, ಮೂರು ಬಾರಿ ಇದನ್ನು ನಿಯಮಿತವಾಗಿ ಮಾಡಲಾಗುತ್ತಿದೆ.

ಉದ್ಯಾನವನದಲ್ಲಿ ಪ್ರಾಣಿಗಳು ಓಡಾಡುವ ಸ್ಥಳದ ಮೇಲ್ಭಾಗದಲ್ಲಿ ನೀರಿಗಾಗಿ ಸ್ಪಿಂಕ್ಲರ್‌ಗಳನ್ನು ಅಳವಡಿಸಲಾಗಿದ್ದು, ಮೇಲಿಂದ ನೀರು ಬೀಳುವ ಸಂದರ್ಭ ಪ್ರಾಣಿಗಳು ಅದಕ್ಕೂ ಮೈಯೊಡ್ಡಿ ನಿಲ್ಲುತ್ತವೆ. ಹಕ್ಕಿಗಳಿಗೂ ಕೂಡ ನೀರು ಚಿಮ್ಮಿಸುವ ಪ್ರಕ್ರಿಯೆ ನಡೆಯುತ್ತದೆ. ಒಟ್ಟಿನಲ್ಲಿ ಮನುಷ್ಯನಿಗೆ ಸೆಖೆ ತಡೆಯಲು ಸಾಧ್ಯವಾಗದ ಈ ಪರಿಸ್ಥಿತಿಯಲ್ಲಿ ಮೃಗಾಲಯದಲ್ಲಿರುವ ಪ್ರಾಣಿಗಳಿಗೆ ಈ ತಾಪ ತಟ್ಟದಂತೆ ನೋಡಿಕೊಳ್ಳುತ್ತಿರುವುದು ನಿಜಕ್ಕು ಮೆಚ್ಚುವಂತಹ ಕಾರ್ಯವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು