ಬೆಂಗಳೂರು: 2021-22ನೇ ಸಾಲಿನ ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಬಜೆಟ್ಅನ್ನು ನಾಳೆ ಮಾರ್ಚ್ 26 ರಂದು ಮಂಡನೆ ಸಾಧ್ಯತೆ ಇದೆ. ಆಡಳಿತಾಧಿಕಾರಿ ಗೌರವ್ ಗುಪ್ತಾ ನೇತೃತ್ವದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇದೀಗ ಪ್ರಸ್ತುತದಲ್ಲಿ 2020ರ ಬಿಬಿಎಂಪಿ ಕಾಯ್ದೆಯ ಅನ್ವಯ ಆಡಳಿತ ನಡೆಯುತ್ತಿದೆ. ಪಾಲಿಕೆ ಆರ್ಥಿಕ ಸ್ಥಿತಿ ಆಧರಿಸಿ 7 ಸಾವಿರ ಕೋಟಿ ಅಂದಾಜಿನ ಬಜೆಟ್ ಗಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಾಲಿಕೆ ಹಣಕಾಸು ವಿಭಾಗದ ಆಯುಕ್ತರಾದ ತುಳಸಿ ಮದ್ದಿನೇನಿ ಬಜೆಟ್ ಪುಸ್ತಕ ಸಿದ್ಧತೆ ನಡೆಸಿದ್ದಾರೆ. ಆಡಳಿತಾಧಿಕಾರಿ ಗೌರವ್ ಗುಪ್ತಾ ಬಜೆಟ್ ಮಂಡನೆ ಮಾಡುವ ಸಾಧ್ಯಗಳಿವೆ.
ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿ ಕೊನೆಯದಾಗಿ ಬಜೆಟ್ ಮಂಡನೆ ಮಾಡಿರುವುದು 2015-16ರಲ್ಲಿ, ಆಗ ಟಿ.ಎಂ ವಿಜಯ ಭಾಸ್ಕರ್ ಆಡಳಿತಾಧಿಕಾರಿಯಾಗಿದ್ದರು. ಅವರ ನೇತೃತ್ವದಲ್ಲಿ 5,411 ಕೋಟಿ ರೂಪಾಯಿ ವೆಚ್ಚದ ಬಜೆಟ್ ಮಂಡನೆ ಮಾಡಲಾಗಿತ್ತು. ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿಲ್ಲದ ಕಾರಣದಿಂದಾಗಿ ಬಜೆಟ್ ಸಿದ್ಧತೆಯ ಹೊಣೆ ಆಡಳಿತಾಧಿಕಾರಿಯವರದ್ದಾಗಿದೆ. ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅಧಿಕಾರಿಗಳೆಲ್ಲವೂ ಆಡಳಿತಾಧಿಕಾರಿಯವರು ಹೊಂದಿರುತ್ತಾರೆ.
ಇದನ್ನೂ ಓದಿ: ವೇತನ ನೀಡದೆ ತಾತ್ಸಾರ: ಬಿಬಿಎಂಪಿ ಪೌರಕಾರ್ಮಿಕರಿಂದ ಗುತ್ತಿಗೆದಾರರ ಮನೆ ಮುಂದೆ ಧರಣಿ
ಕರ್ನಾಟಕ ಬಜೆಟ್ 2021: ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಗುತ್ತಾ ಸಿಂಹಪಾಲು.. ಬಿಬಿಎಂಪಿ ನಿರೀಕ್ಷೆಗಳೇನು?
Published On - 11:26 am, Thu, 25 March 21