ವೇತನ ನೀಡದೆ ತಾತ್ಸಾರ: ಬಿಬಿಎಂಪಿ ಪೌರಕಾರ್ಮಿಕರಿಂದ ಗುತ್ತಿಗೆದಾರರ ಮನೆ ಮುಂದೆ ಧರಣಿ
170 ಜನ ಗುತ್ತಿಗೆ ಆಧಾರದ ಪೌರಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಸ್ಆರ್ಪಿ ಕಂಪನಿ ಗುತ್ತಿಗೆದಾರ ಹರ್ಷವರ್ಧನ್ ವಿರುದ್ಧ ಧರಣಿ ನಡೆಸಲಾಗಿದೆ.
ಬೆಂಗಳೂರು: ಕಳೆದ 6 ತಿಂಗಳಿಂದ ಬಿಬಿಎಂಪಿ ಪೌರಕಾರ್ಮಿಕರಿಗೆ ವೇತನ ನೀಡದೆ ತಾತ್ಸಾರ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕಾರ್ಮಿಕರು ಇಂದು ಬೆಳಿಗ್ಗೆ ಬೆಂಗಳೂರಿನ ಗುತ್ತಿಗೆದಾರರ ಮನೆ ಮುಂದೆ ಧರಣಿ ನಡೆಸಿದ್ದಾರೆ. ಗುತ್ತಿಗೆದಾರರಾದ ಹರ್ಷವರ್ಧನ್ ರೆಡ್ಡಿ ಮನೆ ಮುಂದೆ ಕಾರ್ಮಿಕರು ಧರಣಿ ನಡೆಸಿದ್ದಾರೆ. ಸಂಬಳ ಕೊಡಿ, ಮನೆಯಿಂದ ಹೊರಗೆ ಹೋಗಿ ಎಂದು ಹರ್ಷವರ್ಧನ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
170 ಜನ ಗುತ್ತಿಗೆ ಆಧಾರದ ಪೌರಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಸ್ಆರ್ಪಿ ಕಂಪನಿ ಗುತ್ತಿಗೆದಾರ ಹರ್ಷವರ್ಧನ್ ವಿರುದ್ಧ ಧರಣಿ ನಡೆಸಲಾಗಿದೆ. 6 ತಿಂಗಳ ಸಂಬಳ ನೀಡದೇ ಆಟವಾಡಿಸುತ್ತಿರುವ ಪಾಲಿಕೆ ಹಾಗೂ ಗುತ್ತಿಗೆದಾರರ ಮೇಲೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: