AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಜೆಟ್ 2021: ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಗುತ್ತಾ ಸಿಂಹಪಾಲು.. ಬಿಬಿಎಂಪಿ ನಿರೀಕ್ಷೆಗಳೇನು?

Karnataka Budget 2021: ಮೆಟ್ರೋ ರೈಲು ಕಾಮಗಾರಿಗೆ ಮತ್ತಷ್ಟು ಹಣ ಸಿಗುತ್ತಾ..? ಏರಿಯಾ ಏರಿಯಾದಲ್ಲೂ ಗುಡ್ಡೆಯಾಗ್ತಿರೋ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಾ..? ಟ್ರಾಫಿಕ್‌ ಜಾಮ್‌ಗೆ ಪರಿಹಾರ ಸಿಗುತ್ತಾ?

ಕರ್ನಾಟಕ ಬಜೆಟ್ 2021: ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಗುತ್ತಾ ಸಿಂಹಪಾಲು.. ಬಿಬಿಎಂಪಿ ನಿರೀಕ್ಷೆಗಳೇನು?
ಬೆಂಗಳೂರು ವಿಧಾನಸೌದ
Follow us
ಪೃಥ್ವಿಶಂಕರ
|

Updated on:Mar 08, 2021 | 8:08 AM

ಬೆಂಗಳೂರು: ಹಲವು ಸವಾಲು..ಹತ್ತಾರು ಸಂಕಷ್ಟದ ನಡುವೆ ಮುಖ್ಯಮಂತ್ರಿ ಬಿಎಸ್‌ವೈ ಇಂದು ರಾಜ್ಯ ಬಜೆಟ್‌ ಮಂಡಿಸುತ್ತಿದ್ದಾರೆ . ಕೊರೊನಾ ಸಂಕಷ್ಟದಲ್ಲಿರೋ ಜನತೆ ಇಂದಿನ ಬಜೆಟ್‌ನಲ್ಲಿ ಏನಿರುತ್ತೆ ಅನ್ನೋದನ್ನ ತಿಳಿಯಲು ಕಾತರರಾಗಿದ್ದಾರೆ. ಅದ್ರಲ್ಲೂ ಬೆಂಗಳೂರಿಗೆ ಏನ್‌ ಸಿಗುತ್ತೋ ಅನ್ನೋದೆ ಕುತೂಹಲ ಮೂಡಿಸಿದೆ.

ಮೆಟ್ರೋ ರೈಲು ಕಾಮಗಾರಿಗೆ ಮತ್ತಷ್ಟು ಹಣ ಸಿಗುತ್ತಾ.. ಏರಿಯಾ ಏರಿಯಾದಲ್ಲೂ ಗುಡ್ಡೆಯಾಗ್ತಿರೋ ಕಸದ ಸಮಸ್ಯೆಗೆ ಮುಕ್ತಿ ಸಿಗುತ್ತಾ..? ಟ್ರಾಫಿಕ್‌ ಜಾಮ್‌ಗೆ ಪರಿಹಾರ ಸಿಗುತ್ತಾ..? ಸೊರಗಿರೋ ಇಂದಿರಾ ಕ್ಯಾಂಟೀನ್‌ಗೆ ಅನುದಾನದ ಬಲ ಬರುತ್ತಾ..? ಮುಖ್ಯಮಂತ್ರಿ ಬಿಎಸ್‌ವೈ ಇಂದು ಮಂಡಿಸುತ್ತಿರೋ ಬಜೆಟ್‌ ಮೇಲೆ ಬೆಂಗಳೂರಿಗರು ಹೀಗೆ ಹತ್ತಾರು ನಿರೀಕ್ಷೆಗಳನ್ನೇ ಇಟ್ಟುಕೊಂಡಿದ್ದಾರೆ .

ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಗುತ್ತಾ ಸಿಂಹಪಾಲು..? ಕೊರೊನಾ ಆರ್ಭಟದ ಬಳಿಕ. ಆರ್ಥಿಕತೆಯ ಸಂಕಷ್ಟದ ನಡುವೆ.. ಬೆಲೆ ಏರಿಕೆಯ ಶರವೇಗದ ಮಧ್ಯೆ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ರಾಜ್ಯ ಬಜೆಟ್‌ ಮಂಡಿಸುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅಯವ್ಯಯ ಮಂಡಿಸಲಿದ್ದಾರೆ. ಆದ್ರೆ ಈ ಬಜೆಟ್‌ನಲ್ಲಿ ಬೆಂಗಳೂರಿಗೆ ಏನೇನ್‌ ಕೊಡ್ತಾರೆ ಅನ್ನೋದೆ ಈಗ ಕುತೂಹಲಕ್ಕೆ ಕಾರಣವಾಗಿದೆ . ಅದ್ರಲ್ಲೂ ಬಿಬಿಎಂಪಿಗೆ ಚುನಾವಣೆ ನಡೆಯೋ ಸಮಯ ಹತ್ತಿರವಾಗ್ತಿದ್ದು, ಹೀಗಾಗಿ ಸಿಲಿಕಾನ್‌ ಸಿಟಿಗೆ ಸಿಂಹಪಾಲು ಸಿಗುತ್ತಾ ಅನ್ನೋ ನಿರೀಕ್ಷೆ ಇದೆ.

BBMP

ಬಿಬಿಎಂಪಿ ನಿರೀಕ್ಷೆಗಳೇನು..? ಬಿಎಸ್‌ವೈ ಬಜೆಟ್‌ನಲ್ಲಿ ಬೆಂಗಳೂರಿನ ಕಸ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನದ ನಿರೀಕ್ಷೆ ಹೊಂದಲಾಗಿದೆ. ಜತೆಗೆ ನಗರೋತ್ಥಾನ ಯೋಜನೆಗೆ ಸರ್ಕಾರದಿಂದ ಅನುದಾನ, ಅಕ್ರಮ ಸಕ್ರಮ ಯೋಜನೆಗೆ ಚಾಲನೆ, ಇಂದಿರಾ ಕ್ಯಾಂಟೀನ್‌ಗೆ ಸರ್ಕಾರದಿಂದ ಅನುದಾನ, ಟೆಂಡರ್ ಶ್ಯೂರ್, ಸೈಕಲ್ ಪಾತ್, ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ನಿರೀಕ್ಷೆ ಇದೆ. ಅಷ್ಟೇ ಅಲ್ಲ ಕೆರೆಗಳ ಪುನಶ್ಚೇತನ ಕಾಮಗಾರಿಗೆ ಹಣ, ವಾಯು ಮಾಲಿನ್ಯ ತಡೆಗಟ್ಟಲು ಏನ್‌ ಕ್ರಮ ಕೈಗೊಳ್ತಾರೆ ಅನ್ನೋದು ಕುತೂಹಲ ಮೂಡಿಸಿದೆ

metro

ಉಳಿದಂತೆ ಹೆಚ್ಚು ಬಡಾವಣೆ ನಿರ್ಮಾಣಕ್ಕೆ ಸರ್ಕಾರ ಅಸ್ತು ಎನ್ನುತ್ತಾ ಅನ್ನೋದ ತಿಳಿದುಕೊಳ್ಳಲು ಬಿಡಿಎ ಕಾತರವಾಗಿದ್ರೆ, ಏರ್ ಪೋರ್ಟ್‌ಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಹೆಚ್ಚು ಅನುದಾನ ಸಿಗುವ ಸಾಧ್ಯತೆ ಇದೆ. ಜತೆಗೆ ಬೆಂಗಳೂರಿಗೆ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಅನುದಾನ ಸಿಗುತ್ತಾ ಅಂತಾ ಜಲಮಂಡಳಿ ಕಾಯುತ್ತಿದೆ. ಒಟ್ನಲ್ಲಿ ಆರ್ಥಿಕ ಸಂಕಷ್ಟ, ಕೊರೊನಾ ನಡುವೆ ಬಿಎಸ್‌ವೈ ಬಜೆಟ್‌ ಮಂಡಿಸುತ್ತಿದ್ದು, ಬೆಂಗಳೂರಿಗೆ ಹೆಚ್ಚಿನ ಅನುದಾನ ಸಿಗೋ ಸಾಧ್ಯದೆ ಇದೆ. ಅದ್ರಲ್ಲೂ ಲಾಕ್‌ಡೌನ್‌ನಿಂದಾಗಿ ತತ್ತರಿಸಿದ್ದ ಕಾರ್ಮಿಕರು, ಗಾರ್ಮೆಂಟ್ಸ್‌ ನೌಕರರು, ಬಜೆಟ್‌ಗಾಗಿ ಕಾದು ಕೂತಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಬಜೆಟ್ 2021: ಸಿಎಂ ಯಡಿಯೂರಪ್ಪ ಬಜೆಟ್​ ಮೇಲೆ ಸಾರ್ವಜನಿಕರ ನಿರೀಕ್ಷೆಗಳೇನು? ಇಲ್ಲಿದೆ ಮಾಹಿತಿ

Published On - 8:07 am, Mon, 8 March 21

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್