AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಬೋರ್ ವೆಲ್ ಕೊರೆಯೋದನ್ನ ನಿಲ್ಸಿ: ಅಮೆರಿಕ ತಂಡದ ಉಚಿತ ಸಲಹೆ

ಬೆಂಗಳೂರು: ರಾಜಧಾನಿಯಲ್ಲಿ ಅಂರ್ತಜಲ ತರ್ಕಕ್ಕೆ ನಿಲುಕದಷ್ಟು ಆಳಕ್ಕೆ ಕುಸಿದು ಹೋಗಿದೆ. 100, 200 ಅಡಿ ಆಳಕ್ಕೆ ಸಿಗುತ್ತಿದ್ದ ನೀರು ಇದೀಗ 500- 1000 ಅಡಿಯಷ್ಟು ಆಳಕ್ಕೆ ಹೋದರೂ ಒಂದು ತೊಟ್ಟು ಸಿಗುತ್ತಿಲ್ಲವಂತೆ. ಹಾಗಾಗಿ, ಇನ್ಮೇಲೆ ಬೆಂಗಳೂರಿನಲ್ಲಿ ಕೊಳವೆ ಬಾವಿ ಕೊರೆಯಲು ಪರ್ಮೀಷನ್ ಕೊಡಲ್ಲ ಎನ್ನುತ್ತಿದೆ ಬಿಬಿಎಂಪಿ. ಪಾಲಿಕೆಯ ಈ ಚಿಂತನೆಗೆ ಕಾರಣ ಅಮೆರಿಕ ತಂಡದ ನೀಡಿರುವ ಅತ್ಯಂತ ಉಚಿತ ಸಲಹೆಯಾಗಿದೆ. ಇದು ರಾಜ್ಯದ ಇತರೆ ಭಾಗಗಳಿಗೂ ಅನ್ವಯವಾಗಬಹುದಾದ ಒಳ್ಳೆಯ ಸಲಹೆ. ಜಲಮಂಡಳಿಗೆ ಭೇಟಿ ಕೊಟ್ಟ ಅಮೆರಿಕದ ತಂಡ: […]

ಬೆಂಗಳೂರಲ್ಲಿ ಬೋರ್ ವೆಲ್ ಕೊರೆಯೋದನ್ನ ನಿಲ್ಸಿ: ಅಮೆರಿಕ ತಂಡದ ಉಚಿತ ಸಲಹೆ
ಸಾಧು ಶ್ರೀನಾಥ್​
|

Updated on:Oct 19, 2019 | 3:31 PM

Share

ಬೆಂಗಳೂರು: ರಾಜಧಾನಿಯಲ್ಲಿ ಅಂರ್ತಜಲ ತರ್ಕಕ್ಕೆ ನಿಲುಕದಷ್ಟು ಆಳಕ್ಕೆ ಕುಸಿದು ಹೋಗಿದೆ. 100, 200 ಅಡಿ ಆಳಕ್ಕೆ ಸಿಗುತ್ತಿದ್ದ ನೀರು ಇದೀಗ 500- 1000 ಅಡಿಯಷ್ಟು ಆಳಕ್ಕೆ ಹೋದರೂ ಒಂದು ತೊಟ್ಟು ಸಿಗುತ್ತಿಲ್ಲವಂತೆ. ಹಾಗಾಗಿ, ಇನ್ಮೇಲೆ ಬೆಂಗಳೂರಿನಲ್ಲಿ ಕೊಳವೆ ಬಾವಿ ಕೊರೆಯಲು ಪರ್ಮೀಷನ್ ಕೊಡಲ್ಲ ಎನ್ನುತ್ತಿದೆ ಬಿಬಿಎಂಪಿ. ಪಾಲಿಕೆಯ ಈ ಚಿಂತನೆಗೆ ಕಾರಣ ಅಮೆರಿಕ ತಂಡದ ನೀಡಿರುವ ಅತ್ಯಂತ ಉಚಿತ ಸಲಹೆಯಾಗಿದೆ. ಇದು ರಾಜ್ಯದ ಇತರೆ ಭಾಗಗಳಿಗೂ ಅನ್ವಯವಾಗಬಹುದಾದ ಒಳ್ಳೆಯ ಸಲಹೆ.

ಜಲಮಂಡಳಿಗೆ ಭೇಟಿ ಕೊಟ್ಟ ಅಮೆರಿಕದ ತಂಡ: ಅಂರ್ತಜಲ ಮಟ್ಟ ಕುಸಿತದ ಬಗ್ಗೆ ಚರ್ಚೆ ನಡೆಸಿದೆ. 2020-2022 ರಲ್ಲಿ ಮತ್ತಷ್ಟು ನೀರಿನ ಅಭಾವ ಕಾಡಲಿದೆ. ಅದಕ್ಕೆ ಕೊಳವೆ ಬಾವಿಗಳಿಂದ ನೀರನ್ನ ತೆಗೆಯುವುದನ್ನ ನಿಲ್ಲಿಸಿದ್ರೆ ಕೊಂಚ ಅಂರ್ತಜಲ ವೃದ್ಧಿಸುವ ಚಾನ್ಸ್ ಇದೆ. ಹೀಗಾಗಿ ಬೋರ್‌ವೇಲ್ ಕೊರೆಯುವುದನ್ನ ಕಂಪ್ಲೀಟ್ ಆಗಿ ಸ್ಥಗಿತಮಾಡುವಂತೆ ಅಮೆರಿಕ ತಂಡ ಸಲಹೆ ಕೊಟ್ಟಿದೆಯಂತೆ.

ಜಲಮಂಡಳಿಯ ಅಧಿಕಾರಿಗಳು ಹೇಳುವ ಪ್ರಕಾರ ಬೆಂಗಳೂರಿನ ಅಂರ್ತಜಲ ಮಟ್ಟ ಸಾವಿರ ಅಡಿಗೆ ಕುಸಿದಿದೆ. ಹೀಗಾಗಿ ಭಾಗಶಃ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಿದ್ರು ಕೆಲ ವ್ಯಾಪಾರಸ್ಥರು, ಮನೆ ಮಾಲೀಕರು ಸಾವಿರ ಅಡಿವರೆಗೂ ಬೋರ್​ವೆಲ್ ಕೊರೆಯುತ್ತಿದ್ದಾರೆ. ಇದಕ್ಕೆ ಬೆಚ್ಚಿ ಬಿದ್ದಿರುವ ಜಲಮಂಡಳಿ ಇನ್ಮುಂದೆ ನಗರದಲ್ಲಿ ಬೋರ್‌ವೆಲ್ ಕೊರೆಯಲು ಪರ್ಮಿಷನ್ ನೀಡ್ತಿಲ್ವಂತೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110ಹಳ್ಳಿಗಳನ್ನ ಹೊರತುಪಡಿಸಿ, ಬೇರೆ ಯಾವ ಭಾಗದಲ್ಲೂ ಕೊಳವೆ ಬಾವಿಗಳನ್ನ ಕೊರೆಯಲು ಬಿಬಿಎಂಪಿ ಅನುಮತಿ ನೀಡುವುದಿಲ್ಲ.

Published On - 3:25 pm, Sat, 19 October 19

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?