AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರ ಪ್ರಸಾದವೆಂದು ವಿಷವುಣಿಸಿದ್ದ ಸ್ವಾಮಿ ಜೈಲಿನಲ್ಲಿದ್ದುಕೊಂಡೇ ಮಾಡಿದ್ದೇನು ಗೊತ್ತಾ?

ಮೈಸೂರು: ಕಿಚ್ ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜೈಲಲ್ಲಿದ್ದುಕೊಂಡೇ ತನ್ನ ಕರಾಮತ್ತು ತೋರಿಸಿದ್ದಾರೆ. ಸಾಲೂರು ಮಠದ ನಿರ್ವಹಣೆ ಹೊಣೆಗಾರಿಕೆಯ ವಿವರಗಳನ್ನೊಳಗೊಂಡ ವಿಲ್​ ಅನ್ನು ರದ್ದು ಮಾಡಿಸಿದ್ದಾರೆ. ತಮ್ಮ ಶಿಷ್ಯ ನಾಗೇಂದ್ರನಿಗೆ ಜವಾಬ್ದಾರಿ ನೀಡಿ ಸಾಲೂರು ಮಠದ ಗುರುಸ್ವಾಮಿ ವಿಲ್ ಮಾಡಿದ್ದರು. ಆದ್ರೆ ವಿಲ್ ಮಾಡಿದ ದಿನದಿಂದಲೂ ರದ್ದು ಮಾಡಿಸಲು ಇಮ್ಮಡಿ ಮಹದೇವಸ್ವಾಮಿ ಒತ್ತಡ ಹಾಕುತ್ತಿದ್ದರು. ಈ ಮಧ್ಯೆ, ಜೈಲಿನಲ್ಲಿದ್ದುಕೊಂಡೇ ತನ್ನ ಬೆಂಬಲಿಗರು, ಶಿಷ್ಯಂದಿರ ಮೂಲಕ ಒತ್ತಡ ಹಾಕಿಸುತ್ತಿದ್ದರು. ಹೀಗಾಗಿ […]

ದೇವರ ಪ್ರಸಾದವೆಂದು ವಿಷವುಣಿಸಿದ್ದ ಸ್ವಾಮಿ ಜೈಲಿನಲ್ಲಿದ್ದುಕೊಂಡೇ ಮಾಡಿದ್ದೇನು ಗೊತ್ತಾ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 19, 2019 | 2:54 PM

Share

ಮೈಸೂರು: ಕಿಚ್ ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜೈಲಲ್ಲಿದ್ದುಕೊಂಡೇ ತನ್ನ ಕರಾಮತ್ತು ತೋರಿಸಿದ್ದಾರೆ. ಸಾಲೂರು ಮಠದ ನಿರ್ವಹಣೆ ಹೊಣೆಗಾರಿಕೆಯ ವಿವರಗಳನ್ನೊಳಗೊಂಡ ವಿಲ್​ ಅನ್ನು ರದ್ದು ಮಾಡಿಸಿದ್ದಾರೆ.

ತಮ್ಮ ಶಿಷ್ಯ ನಾಗೇಂದ್ರನಿಗೆ ಜವಾಬ್ದಾರಿ ನೀಡಿ ಸಾಲೂರು ಮಠದ ಗುರುಸ್ವಾಮಿ ವಿಲ್ ಮಾಡಿದ್ದರು. ಆದ್ರೆ ವಿಲ್ ಮಾಡಿದ ದಿನದಿಂದಲೂ ರದ್ದು ಮಾಡಿಸಲು ಇಮ್ಮಡಿ ಮಹದೇವಸ್ವಾಮಿ ಒತ್ತಡ ಹಾಕುತ್ತಿದ್ದರು. ಈ ಮಧ್ಯೆ, ಜೈಲಿನಲ್ಲಿದ್ದುಕೊಂಡೇ ತನ್ನ ಬೆಂಬಲಿಗರು, ಶಿಷ್ಯಂದಿರ ಮೂಲಕ ಒತ್ತಡ ಹಾಕಿಸುತ್ತಿದ್ದರು. ಹೀಗಾಗಿ ಇಮ್ಮಡಿ ಮಹದೇವಸ್ವಾಮಿ ಒತ್ತಡಕ್ಕೆ ಮಣಿದು ತಾವೇ ಮಾಡಿದ ವಿಲ್ ಅನ್ನು ಮೈಸೂರಿನ ರಾಮಕೃಷ್ಣನಗರದ ಉಪನೋಂದಣಿ ಕಚೇರಿಯಲ್ಲಿ ನಿನ್ನೆ ಗುರುಸ್ವಾಮಿ ರದ್ದು ಮಾಡಿಸಿದ್ದಾರೆ.

ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು: 2018ರ ಡಿಸೆಂಬರ್ 14ರಂದು ಸುಳ್ವಾಡಿ ಕಿಚ್​ಗುತ್ತಿ ಮಾರಮ್ಮ ದೇವಸ್ಥಾನದ ಗೋಪುರ ಶಂಕು ಸ್ಥಾಪನೆ ಸಮಾರಂಭದಲ್ಲಿ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಪ್ರಕರಣ ಸಂಬಂಧ ದೇವಾಲಯ ಸೇವಾ ಟ್ರಸ್ಟ್​​ನ ಅಧ್ಯಕ್ಷರಾಗಿದ್ದ ಇಮ್ಮಡಿ ಮಹದೇವಸ್ವಾಮಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಗೋಪುರ ನಿರ್ಮಾಣ ಸಂಬಂಧ ಎರಡು ಗುಂಪುಗಳ ನಡುವೆ ವಿವಾದವಿತ್ತು. ಹೀಗಾಗಿ ತಿನ್ನುವ ಪ್ರಸಾದದಲ್ಲಿ ಕ್ರಿಮಿನಾಷಕ ಬೆರೆಸಿ 17 ಮಂದಿ ಸಾವಿಗೆ ಕಾರಣರಾಗಿದ್ದರು.

Published On - 12:33 pm, Sat, 19 October 19

Follow Us
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!