ಹೈಕೋರ್ಟ್​ ತಿವಿತಕ್ಕೆ ಬೆಚ್ಚಿಬಿದ್ದ BBMP ಏನ್ ಮಾಡಿದೆ, ತಪ್ಪದೇ ನೋಡಿ!

ಬೆಂಗಳೂರು: ನಿಮ್ಮ ಅವಾಂತರಗಳಿಂದಾಗಿ ಆಗುವ ಅನಾಹುತ, ಅಪಘಾತಗಳಿಗೆ ಪರಿಹಾರ ನೀಡಲು ಬರುವುದಿಲ್ಲ ನಿಮಗೆ! ರಸ್ತೆ ಗುಂಡಿ ನಿರ್ಮಾಣವಾಗಿದ್ದರೆ ಕಣ್ಣುಮುಚ್ಚಿ ಕುಳಿತಿರುತ್ತೀರಿ, ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ? ಎಂದು ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ BBMPಯನ್ನು ನಿನ್ನೆ ವಿಚಾರಿಸಿಕೊಂಡಿದ್ದರು. ಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ನಿಮ್ಮ ವಕೀಲರ ಮೂಲಕ ವಿತಂಡವಾದ ಮಾಡುತ್ತೀರಾ? ಬೆಂಗಳೂರಿನಲ್ಲಿ BBMPವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳೇನಾದರೂ ಆದ್ರೆ ಅದಕ್ಕೆ ಪರಿಹಾರ ನೀಡುವುದಾಗಿ ಮೊದಲು ಸಾರ್ವಜನಿಕ ಪ್ರಕಟಣೆ ನೀಡಿ ಎಂದು […]

ಹೈಕೋರ್ಟ್​ ತಿವಿತಕ್ಕೆ ಬೆಚ್ಚಿಬಿದ್ದ BBMP ಏನ್ ಮಾಡಿದೆ, ತಪ್ಪದೇ ನೋಡಿ!
ಸಾಧು ಶ್ರೀನಾಥ್​

Updated on: Nov 28, 2019 | 12:12 PM

ಬೆಂಗಳೂರು: ನಿಮ್ಮ ಅವಾಂತರಗಳಿಂದಾಗಿ ಆಗುವ ಅನಾಹುತ, ಅಪಘಾತಗಳಿಗೆ ಪರಿಹಾರ ನೀಡಲು ಬರುವುದಿಲ್ಲ ನಿಮಗೆ! ರಸ್ತೆ ಗುಂಡಿ ನಿರ್ಮಾಣವಾಗಿದ್ದರೆ ಕಣ್ಣುಮುಚ್ಚಿ ಕುಳಿತಿರುತ್ತೀರಿ, ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ? ಎಂದು ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ BBMPಯನ್ನು ನಿನ್ನೆ ವಿಚಾರಿಸಿಕೊಂಡಿದ್ದರು.

ಗುಂಡಿಗಳಿಂದಾದ ಅಪಘಾತಕ್ಕೆ ಪರಿಹಾರ ನೀಡಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ನಿಮ್ಮ ವಕೀಲರ ಮೂಲಕ ವಿತಂಡವಾದ ಮಾಡುತ್ತೀರಾ? ಬೆಂಗಳೂರಿನಲ್ಲಿ BBMPವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳೇನಾದರೂ ಆದ್ರೆ ಅದಕ್ಕೆ ಪರಿಹಾರ ನೀಡುವುದಾಗಿ ಮೊದಲು ಸಾರ್ವಜನಿಕ ಪ್ರಕಟಣೆ ನೀಡಿ ಎಂದು ಖುದ್ದು ಸಿಜೆ ಅಭಯ್ ಎಸ್.ಒಕಾ ನಿನ್ನೆ ಕಿಡಿಕಿಡಿಯಾಗಿದ್ದರು.

ಇದು ನಿಮ್ಮ ಆದ್ಯ ಗಮನಕ್ಕೆ!
ಇದಕ್ಕೆ ಥರಗುಟ್ಟಿರುವ BBMP ಇಂದು ಕೆಲ ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ, ಹೈಕೋರ್ಟ್ ಹೇಳಿದಂತೆ ರಸ್ತೆ ಗುಂಡಿಗಳಿಂದಾಗಿ ಸಾರ್ವಜನಿಕರಿಗೆ ಏನೇ ಅನಾಹುತ ಸಂಭವಿಸಿದರೆ ಪರಿಹಾರ ಅರ್ಜಿಯನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥಪಡಿಸುವುದಾಗಿ ತಿಳಿಸಿದೆ. ಇದು ಸಾರ್ವಜನಿಕರ ಆದ್ಯ ಗಮನಕ್ಕೆ!

Published On - 11:51 am, Thu, 28 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us