ನಾಗರಹೊಳೆ: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ..! ನೀವೂ ನೋಡಿ

| Updated By: Digi Tech Desk

Updated on: Jun 26, 2021 | 12:36 PM

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾರಿನ ಮೇಲೆ ದಾಳಿ ಮಾಡಲು ಬಂದ ಕರಡಿಯೊಂದು ಪೋಸ್ ಕೊಟ್ಟುಹೋಗಿದೆ! ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ಬುಲೆವಾರ್ಡ್ ರಸ್ತೆಯಲ್ಲಿರುವ ಮುಖ್ಯ ನ್ಯಾಯಾಲಯಕ್ಕೆ ಒಂದು ಹಾವು ಎಂಟ್ರಿ ಕೊಟ್ಟಿದೆ.

ನಾಗರಹೊಳೆ: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ..! ನೀವೂ ನೋಡಿ
ನಾಗರಹೊಳೆ: ಕಾರಿನ ಮೇಲೆ ದಾಳಿ ಮಾಡಲು ಬಂದು ಪೋಸ್ ಕೊಟ್ಟ ಕರಡಿ..! ನೀವೂ ನೋಡಿ
Follow us on

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾರಿನ ಮೇಲೆ ದಾಳಿ ಮಾಡಲು ಬಂದ ಕರಡಿಯೊಂದು ಪೋಸ್ ಕೊಟ್ಟುಹೋಗಿದೆ! ಸದರಿ ಕರಡಿ ಅದರ ಪಾಡಿಗೆ ಅದು ರಸ್ತೆ ದಾಟುತ್ತಿತ್ತು. ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಚಾಲಕ ದೃಶ್ಯವನ್ನು ಸೆರೆಹಿಡಿಯುತ್ತಿದ್ದ. ಆ ವೇಳೆ, ಕಾರಿನ ಶಬ್ದಕ್ಕೆ ಕೋಪಗೊಂಡ ಕರಡಿಯು ದಾಳಿ ಮಾಡಲು ‌ಮುಂದಾಗಿದೆ. ಕಾರಿನಲ್ಲಿದ್ದವರ ಜೋರು ಚೀರಾಟ ಕೇಳಿ, ದಾಳಿ ಮಾಡಲು ಬಂದ ಕರಡಿ ಎಲ್ಲರನ್ನೂ ಗುರಾಯಿಸಿ ನೋಡಿ ವಾಪಸ್ ತೆರಳಿದೆ. ಕರಡಿಯ ಆಟಾಟೋಪ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನ್ಯಾಯಾಲಯಕ್ಕೆ ಎಂಟ್ರಿ ಕೊಟ್ಟ ಹಾವು; ಸ್ನೇಕ್ ಶ್ಯಾಮ್​ರಿಂದ ರಕ್ಷಣೆ:
ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ಬುಲೆವಾರ್ಡ್ ರಸ್ತೆಯಲ್ಲಿರುವ ಮುಖ್ಯ ನ್ಯಾಯಾಲಯಕ್ಕೆ ಒಂದು ಹಾವು ಎಂಟ್ರಿ ಕೊಟ್ಟಿದೆ. ಇದನ್ನ ಕಂಡು ಸಿಬ್ಬಂದಿ ಕೆಲ ಕ್ಷಣ ಆತಂಕಗೊಂಡಿದ್ದಾರೆ. ಮೊದಲು ಹಾವಿನ ಉಸಿರಾಟದ ಶಬ್ದ ಕೇಳಿ ಸಿಬ್ಬಂದಿ ಗಾಬರಿಗೊಂಡರು.

ಈ ಹಾವು ಕೊಠಡಿಯ ಬೀರುವಿನ ಪಕ್ಕ ಸಣ್ಣ ಖಾಲಿ ಬಾಕ್ಸ್ ನಲ್ಲಿ ಸೇರಿಕೊಂಡಿತ್ತು. ಇಕ್ಕಟ್ಟಿನ ಸ್ಥಳದಲ್ಲಿದ್ದ ಪೇಪರ್ ಬಾಕ್ಸ್ ಒಂದರಲ್ಲಿ ಸೇರಿಕೊಂಡಿಬಿಟ್ಟಿತ್ತು ಹಾವು. ಮೈಸೂರಿನ ಉರಗ ತಜ್ಞ ಸ್ನೇಕ್ ಶ್ಯಾಮ್ ಗೆ ಸಿಬ್ಬಂದಿ ಕರೆ ಮಾಡಲಾಗಿ, ಅವರು ತಕ್ಷಣ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದರು. ಅವಿತಿದ್ದ ಭಾರಿ ಗಾತ್ರದ ಹಾವನ್ನು ಸ್ನೇಕ್ ಶ್ಯಾಮ್ ಹಿಡಿದು ರಕ್ಷಿಸಿದರು.

ನ್ಯಾಯಾಲಯಕ್ಕೆ ಎಂಟ್ರಿ ಕೊಟ್ಟ ಹಾವು; ಸ್ನೇಕ್ ಶ್ಯಾಮ್​ರಿಂದ ರಕ್ಷಣೆ


(bear found in Nagarhole National Park at mysuru mysuru snake shyam rescues snake in court hall)

Published On - 12:00 pm, Sat, 26 June 21