ಅನೈತಿಕ ಸಂಬಂಧ ಶಂಕೆ: ಕೊಲೆಯಾದ ಸ್ಥಿತಿಯಲ್ಲಿ ಬೀಡಾ ಅಂಗಡಿ ವ್ಯಾಪಾರಿ ಶವ ಪತ್ತೆ
ನಗರದ ಅಬಕಾರಿ ಇಲಾಖೆ ಬಳಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು 28 ವರ್ಷದ ನಭಿ ರಸೂಲ್ ನರಸಂಗಿ ಎಂದು ಗುರುತಿಸಲಾಗಿದೆ. ನಭಿ ರಸೂಲ್ ನಗರದಲ್ಲಿ ಬೀಡಾ ಅಂಗಡಿ ವ್ಯಾಪಾರ ನಡೆಸುತ್ತಿದ್ದ.
ವಿಜಯಪುರ: ನಗರದ ಅಬಕಾರಿ ಇಲಾಖೆ ಬಳಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು 28 ವರ್ಷದ ನಭಿ ರಸೂಲ್ ನರಸಂಗಿ ಎಂದು ಗುರುತಿಸಲಾಗಿದೆ. ನಭಿ ರಸೂಲ್ ನಗರದಲ್ಲಿ ಬೀಡಾ ಅಂಗಡಿ ವ್ಯಾಪಾರ ನಡೆಸುತ್ತಿದ್ದ.
ದುಷ್ಕರ್ಮಿಗಳು ರಸೂಲ್ ಮುಖ ಹಾಗೂ ತಲೆ ಭಾಗಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹಣಕಾಸಿನ ವ್ಯವಹಾರ ಅಥವಾ ಅನೈತಿಕ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ರಸೂಲ್ನ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು, ಸ್ಥಳಕ್ಕೆ APMC ಠಾಣೆಯ ಪೊಲೀಸರ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.